ಬೆಂಗಳೂರು: ರಾಜ್ಯದಲ್ಲಿ ಇಂದು 38,690 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,26,320 ಆರ್​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,65,010 ಕೊರೊನಾ ಪರೀಕ್ಷೆಗಳನ್ನ ನಡೆಸಲಾಗಿದೆ. ಈ ಪೈಕಿ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 4,272 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 28,31,026ಕ್ಕೆ ಏರಿಕೆಯಾಗಿದೆ.

ಇಂದು 6,126 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಈವರೆಗೆ ಒಟ್ಟು 26,91,123 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 115 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ 34,654 ಮಂದಿ ಕೊರೊನಾಗೆ ಬಲಿಯಾದಂತಾಗಿದೆ. ಸದ್ಯ ರಾಜ್ಯದಲ್ಲಿ 1,05,226 ಆ್ಯಕ್ಟಿವ್ ಕೇಸ್​​ಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶಗಳು ಹೇಳುತ್ತಿವೆ.

ಬೆಂಗಳೂರು ನಗರದಲ್ಲಿ ಇಂದು 955 ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದು 16 ಮಂದಿ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು 200, ದಕ್ಷಿಣ ಕನ್ನಡ 375, ಹಾಸನ 320, ಮೈಸೂರು 647, ಶಿವಮೊಗ್ಗ ಜಿಲ್ಲೆಯಲ್ಲಿ 217 ಮಂದಿಗೆ ಸೋಂಕು ದೃಢವಾಗಿದೆ.

The post ರಾಜ್ಯದಲ್ಲಿ ಇಂದು 4,272 ಮಂದಿಗೆ ಪಾಸಿಟಿವ್: 1,05,226ಕ್ಕೆ ಇಳಿದ ಆ್ಯಕ್ಟಿವ್ ಕೇಸ್​ appeared first on News First Kannada.

Source: newsfirstlive.com

Source link