ಬೆಂಗಳೂರು: ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ನಾವೇ ಬಳಸಿಕೊಳ್ಳಲು ಕೇಂದ್ರದಿಂದ ಅನುಮತಿ ಕೇಳುವುದಾಗಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲಸಿಕೆ ಲಭ್ಯ ಇದೆ. ಐದು ಲಕ್ಷ ಲಸಿಕೆ ನಮ್ಮ ಹತ್ರ ಈಗಲೇ ಇದೆ. ಯುವಕರಿಗೆ ಲಸಿಕೆ ಕೊಡಲು ಸಮಸ್ಯೆ ಇಲ್ಲ. 18ರಿಂದ 44 ವರ್ಷದವರಿಗೆ ವ್ಯಾಕ್ಸಿನೇಷನ್ 14 ದಿನ ಮುಂದಕ್ಕೆ ಹಾಕುವ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ಆಗಿದೆ.  ಮಧ್ಯಾಹ್ನದ ಒಳಗಡೆ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಇಂದಿನಿಂದ ಅನೇಕ ನಿರ್ಬಂಧ ಇದೆ. ಕೊರೊನಾನಿಯಂತ್ರಣ ಬರೀ ಸರ್ಕಾರದ ಜವಾಬ್ದಾರಿ ಅಷ್ಟೇ ಅಲ್ಲ. ಸರ್ಕಾರ ನಿಯಂತ್ರಣದ ಕೆಲಸ ಮಾಡ್ತಿದೆ, ಇದು ಸಾರ್ವಜನಿಕರಿಗೂ ಅರ್ಥ ಆಗ್ಬೇಕು. ನಾವು ಜನರ ಜೀವನ ಉಳಿಸಲು ಕ್ರಮ ಕೈಗೊಂಡಿದ್ದೇವೆ.. ಸರ್ಕಾರಕ್ಕೆ ಎಲ್ಲ ರೀತಿಯ ಆದಾಯ ಖೋತಾ ಆಗುತ್ತೆ. ಜನರಿಂದ ಎಲ್ಲಾ ರೀತಿಯ ಸಹಕಾರ ಸಿಗಬೇಕು ಎಂದು ಹೇಳಿದ್ರು.

ಇಂದು ನಾನು ಹಾಸನಕ್ಕೆ ಹೋಗ್ತಿದ್ದೇನೆ. ಹಾಸನದಲ್ಲಿ ಹೆಚ್ಚು ಮಂದಿ ಸೋಂಕಿಗೀಡಾಗಿದ್ದಾರೆ. ಇಂದು ನಾಲ್ಕು ಗಂಟೆಗೆ ಕೇಂದ್ರ ಸಚಿವ ಪಿಯುಷ್ ಗೋಯಲ್ ಜೊತೆಗೆ ಸಭೆ ಇದೆ. ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ನಾವೇ ಬಳಸಿಕೊಳ್ಳಲು ಅನುಮತಿ ಕೇಳ್ತೀವಿ  ಎಂದು ತಿಳಿಸಿದ್ರು.

 

The post ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ನಾವೇ ಬಳಸಿಕೊಳ್ಳಲು ಅನುಮತಿ ಕೇಳ್ತೀವಿ -ಸುಧಾಕರ್ appeared first on News First Kannada.

Source: newsfirstlive.com

Source link