ಹಾವೇರಿ: ಇನ್ನ ಎರಡು ದಿನಗಳಲ್ಲಿ ರಾಜ್ಯದಲ್ಲಿ ಮುಂಗಾರು ಪ್ರವೇಶ ಪ್ರವೇಶವಾಗಲಿದೆ, ಹೀಗಾಗಿ ರಾಜ್ಯದಲ್ಲಿ ಎಲ್ಲೂ ರಸಗೊಬ್ಬರದ ಸಮಸ್ಯೆ ಇಲ್ಲ ಅಂತ ಕೃಷಿ ಸಚಿವ ಬಿ.ಸಿ ಪಾಟೀಲ್​ ಹೇಳಿದ್ದಾರೆ.

ಜಿಲ್ಲೆಯಲ್ಲಿ ಮಾತನಾಡಿದ ಅವ್ರು, ರಾಜ್ಯದಲ್ಲಿ ಮುಂಗಾರಿಗೆ ತಯಾರು ಆಗಿದೆಯೆ ಎಂಬ ವಿವರಗಳನ್ನ ನಾನು ಮುಖ್ಯಮಂತ್ರಿಗಳಿಗೆ ಕೊಟ್ಟಿದ್ದೇವೆ. ಈ ವರ್ಷ ನಮಗೆ ಡಿಎಪಿ 4 ಲಕ್ಷ 44 ಸಾವಿರ‌. 2 ಲಕ್ಷ ಟನ್ ಬೇಕು. ಎಂಓಪಿ, ಯೂರಿಯಾ 10 ಲಕ್ಷ ಬೇಕಾಗಿದೆ. ಇವತ್ತು ಧಾರವಾಡ, ಕೊಪ್ಪಳ,ಡಾವಣಗೇರಿ,ಬಾಗಲಕೋಟಗೆ ಗೊಬ್ಬರ ಸಪ್ಲೈ ಆಗಿದೆ. ಕಳಪೆ ಬೀಜಗಳು ಹಾಗೂ ಗೊಬ್ಬರ ಮಾರಾಟ ಆಗಬಾರದು. ಸ್ಟಾಕ್ ಇದ್ದ ಕಡೆ ರೆಡ್ ಮಾಡಲು ಅಧಿಕಾರಿಗಳಿಗೆ ಹೇಳಿದ್ದೇನೆ ಅಂತ ಹೇಳಿದ್ರು.

148 ಅಂಗಡಿಗಳ ಲೈಸೆನ್ಸ್​ ರದ್ದು 

ಈ ಹಿಂದಿನ ಕಳಪೆ ಬೀಜಗಳ ಮಾರಟ ಮಾಡುವ ಕಂಪನಿಯ ಮೇಲೆ ರೆಡ್ ವಿಚಾರವಾಗಿ ಮಾತನಾಡಿದ ಅವ್ರು, ಈಗಾಗಲೇ ಕೇಸ್ ಆಗಿದೆ ಜಿಲ್ಲಾಧಿಕಾರಿಗಳ ಬಳಿ ಪೆಂಡಿಂಗ್ ಇದೆ. ಪರವಾನಿಗೆ ಕೂಡಾ ರದ್ದು ಮಾಡ್ತೇವಿ. 148 ಅಂಗಡಿಗಳ ಲೈಸೆನ್ಸ್ ಕೂಡಾ ರದ್ದು ಮಾಡಿದ್ದೇವೆ ಅಂತ ಹೇಳಿದ್ರು.

ಕಳ್ಳರನ್ನ ಬಿಡೋದಿಲ್ಲ, ಕ್ರಮ ಗ್ಯಾರೆಂಟಿ

ಇನ್ನೂ, ಚೀನಾದಿಂದ ಕಳಪೆ ಬೀಜ ಸರಬರಾಜು ಆಗಿರುವ ವಿಚಾರದ ಬಗ್ಗೆ ಮಾತನಾಡಿದ ಅವ್ರು, ಈ ಮೆಸೆಜ್ ನಮಗೂ ಬಂತು. ಹೀಗೆ ರೈತರಿಗೆ ಅಂತಹ ಬೀಜ ಬಿತ್ತನೆ ಮಾಡಬೇಡಿ ಅಂತ ಹೇಳಿದ್ದೀವಿ. ಕಳ್ಳರನ್ನ ಹಿಡಿತಿವಿ. ಸಣ್ಣಪುಟ್ಟ ಕಳ್ಳರು ಇದಾರೆ ಯಾರೆ ಇದ್ದರೂ ನಾವು ಬಿಡೋಲ್ಲಾ..ಕೃತಕ ಗೊಬ್ಬರ ಅಭಾವ ಸೃಷ್ಟಿ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ. ಕಳಪೆ ಬೀಜ ದಾಸ್ತಾನು ಮಾಡಿದ್ದರೆ, ಅಂತವರ ವಿರುದ್ಧ ರೆಡ್ ಮಾಡಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದೀನಿ ಅಂತ ಖಡಕ್​ ಆಗಿ ಹೇಳಿದ್ದಾರೆ.

 

The post ರಾಜ್ಯದಲ್ಲಿ ಎಲ್ಲೂ ರಸಗೊಬ್ಬರದ ಸಮಸ್ಯೆ ಇಲ್ಲ: ಕೃಷಿ ಸಚಿವ ಬಿಸಿ ಪಾಟೀಲ್​ appeared first on News First Kannada.

Source: newsfirstlive.com

Source link