ಬೆಂಗಳೂರು: ರಾಜ್ಯದಲ್ಲಿ ಎರಡು ಒಮಿಕ್ರಾನ್ ಪತ್ತೆ ವಿಚಾರ ಸಂಬಂಧಿಸಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಮಾತನಾಡಿದ್ದು ಈ ವೈರಸ್ನಿಂದ ಅಪಾಯವಿಲ್ಲ ಎಲ್ಲರೂ ಮೊದಲು ಲಸಿಕೆ ಪಡೆದುಕೊಳ್ಳಿ ಎಂದಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸದ್ಯ ಒಮಿಕ್ರಾನ್ ಪತ್ತೆ ಹಿನ್ನೆಲೆ ಸಂಬಂಧಪಟ್ಟ ಪ್ರೈಮರಿ ಮತ್ತು ಸೆಕೆಂಡರಿ ವ್ಯಕ್ತಿಗಳನ್ನ ಐಸೋಲೇಟ್ ಮಾಡಲಾಗಿದೆ. ಈ ವೈರಸ್ ಹೇಗೆ ಬರಲಿದೆ? ಅಂತ ಅಧ್ಯಯನ ಮಾಡಲಾಗ್ತಿದೆ. ಇದರಿಂದ ಜೀವಕ್ಕೆ ಅಪಾಯವಿಲ್ಲ ಕೇವಲ ದೈಹಿಕವಾಗಿ ಸೋರ್ನೆಸ್, ಮಾಂಸ ಖಂಡಗಳಲ್ಲಿ ನೋವು ಕಾಣಿಸಿಕೊಳ್ಳಲಿದೆ.
ಹನ್ನೊಂದು ದೇಶಗಳ ಸ್ಥಿತಿಗತಿ ನೋಡಿಕೊಂಡು ರಾಜ್ಯದಲ್ಲಿ ಕ್ರಮ ತೆಗೆದುಕೊಂಡಿದ್ದೇವೆ.ವೇಗವಾಗಿ ಹರಡುತ್ತದೆ, ಆದ್ರೆ ಜೀವಕ್ಕೆ ಅಪಾಯ ಇಲ್ಲ ಸರ್ಕಾರ ಈ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಿದೆ. ಇನ್ನು ಕಡ್ಡಾಯವಾಗಿ ತಪಾಸಣೆ ಆಗಿದ್ರೂ ರಿಪೋರ್ಟ್ ಬರೋವರೆಗೂ ಅವರನ್ನ ಕಳಿಸುವುದಿಲ್ಲ ನೆಗೆಟಿವ್ ರಿಪೋರ್ಟ್ ಬಂದ ಬಳಿಕ ಕಳಿಸಲಾಗುವುದು. ಮಹಾರಾಷ್ಟ್ರದಿಂದ ಬರುತ್ತಿರುವರಿಗೆ RTPCR ಟೆಸ್ಟ್ ಕಡ್ಡಾಯ ನೆಗೆಟಿವ್ ಬಂದವರಿಗೆ ಮಾತ್ರ ಒಳಗೆ ಬಿಟ್ಟುಕೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಎಲ್ಲವೂ ಓಪನ್ ಆಗಿರಲಿದೆ…
ಜನರು ಎಲ್ಲರು ವ್ಯಾಕ್ಸಿನ್ ಪಡೆಯಬೇಕು ಇದುವರೆಗೆ ಒಂದೂ ಲಸಿಕೆ ಪಡೆಯದವರು ಒಂದಾದರೂ ಲಸಿಕೆ ಪಡೆಯಿರಿ. ಮುಂದಿನ ದಿನ ಮಾಲ್, ಥಿಯೇಟರ್ ಬರುವವರಿಗೆ ಲಸಿಕೆ ಕಡ್ಡಾಯ ಮಾಡಲಿದ್ದೇವೆ ಸಿನಿಮಾ ಥಿಯೇಟರ್ ನಡೆಸಲು ಅನುಮತಿ ಇದೆ ಸಿನಿಮಾ, ರೆಸ್ಟೋರೆಂಟ್, ಎಲ್ಲವೂ ನಡೆಯಲಿದೆ. ಜನರು ಸಾಮಾಜಿಕ ಅಂತರ ಪಾಲಿಸಿಕೊಂಡು ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಸಚಿವರು ತಿಳಿಸಿದ್ದಾರೆ.
The post ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ; ಭಯ ಬೇಡ.. ಎಲ್ಲವೂ ಓಪನ್ ಇರಲಿದೆ- ಅಶ್ವತ್ಥ ನಾರಾಯಣ್ appeared first on News First Kannada.