ಬೆಂಗಳೂರು: ರಾಜ್ಯದಲ್ಲಿ ಮ್ಯೂಕೋರ್​ಮೈಕೋಸಿಸ್/ ಕಪ್ಪು ಫಂಗಸ್​​ ಹಾವಳಿ ಹೆಚ್ಚಾಗಿದೆ. ಈವರೆಗೆ 3 ಸಾವಿರಕ್ಕೂ ಅಧಿಕ ಮಂದಿ ಬ್ಲ್ಯಾಕ್ ಫಂಗಸ್​​ ಇನ್​ಫೆಕ್ಷನ್​ಗೆ ಒಳಗಾದ​ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ಅದ್ರಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರೋ ಕೇಸ್​​ ಒಂದು ಸಾವಿರ ಗಡಿಗೆ ಬಂದಿದೆ.

8 ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಕೇಸ್​ಗಳು ದಾಖಲಾಗಿವೆ. ಹಲವು ಜಿಲ್ಲೆಗಳಲ್ಲಿ ಕಪ್ಪು ಫಂಗಸ್​​ನಿಂದ ಗುಣಮುಖ ಆದವರಿಗಿಂತ ಸಾವನ್ನಪ್ಪಿದವರೇ ಜಾಸ್ತಿ. ಪ್ರಸ್ತುತ ಬ್ಲ್ಯಾಕ್ ಫಂಗಸ್​ನಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ 7.65ರಷ್ಟಿದೆ.

  • ರಾಜ್ಯದಲ್ಲಿ 3032 ಬ್ಲ್ಯಾಕ್ ಫಂಗಸ್ ಪ್ರಕರಣ ದಾಖಲು
  • ಬೆಂಗಳೂರು ಒಂದರಲ್ಲೇ 997 ಬ್ಲ್ಯಾಕ್ ಫಂಗಸ್ ಕೇಸ್
  • ರಾಜ್ಯದಲ್ಲಿ 232 ಮಂದಿ ಬ್ಲ್ಯಾಕ್ ಫಂಗಸ್ನಿಂದ ಸಾವು

ಯಾವ ಜಿಲ್ಲೆಯಲ್ಲಿ ಎಷ್ಟು ಜನ ಗುಣಮುಖ, ಎಷ್ಟು ಸಾವು?

ಬೆಂಗಳೂರು: ಗುಣಮುಖರಾದವರು -68, ಸಾವು-73
ದ.ಕನ್ನಡ: ಗುಣಮುಖರಾದವರು -12, ಸಾವು -18
ಧಾರವಾಡ: ಗುಣಮುಖರಾದವರು -11, ಸಾವು -16
ಬಳ್ಳಾರಿ: ಗುಣಮುಖರಾದವರು ‌-8, ಸಾವು -15
ಶಿವಮೊಗ್ಗ: ಗುಣಮುಖರಾದವರು -3, ಸಾವು -11
ದಾವಣಗೆರೆ: ಗುಣಮುಖರಾದವರು- 0, ಸಾವು -13
ಬೆಳಗಾವಿ: ಗುಣಮುಖರಾದವರು -0, ಸಾವು -7

The post ರಾಜ್ಯದಲ್ಲಿ ಕಪ್ಪು ಫಂಗಸ್​​ ಹಾವಳಿ: ಗುಣಮುಖರಾದವರಿಗಿಂತ ಸಾವಿನ ಸಂಖ್ಯೆ ಹೆಚ್ಚು appeared first on News First Kannada.

Source: newsfirstlive.com

Source link