ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದರೂ ಖುಷಿ ಇಲ್ಲ, ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಿ.ಪಿ. ಯೋಗೇಶ್ವರ್ | CP Yogeshwar express disappointment against bjp govt in ramanagara


ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದರೂ ಖುಷಿ ಇಲ್ಲ, ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಿ.ಪಿ. ಯೋಗೇಶ್ವರ್

ಸಚಿವ ಸಿ.ಪಿ.ಯೋಗೇಶ್ವರ್

ರಾಮನಗರ: ಜಿಲ್ಲೆಯ ಚನ್ನಪಟ್ಟಣದಲ್ಲಿ‌ ನಡೆದ ಜನ ಸ್ವರಾಜ್ ಸಮಾವೇಶದಲ್ಲಿ ಸರ್ಕಾರದ ವಿರುದ್ಧ ಯೋಗೇಶ್ವರ್ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದರೂ ರಾಮನಗರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಿಗೆ ಖುಷಿ ಇಲ್ಲ ಎಂದು ಸಿ.ಪಿ. ಯೋಗೇಶ್ವರ್ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದರೂ ನಮ್ಮ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಿಗೆ ಖುಷಿ ಇಲ್ಲ. ನಮ್ ಕೆಲಸ‌ ಕಾರ್ಯಗಳು‌ ನಡೆಯುತ್ತಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು, JDS ನಾಯಕರು ನಮ್ಮ ಜಿಲ್ಲೆಯವರೇ. ಅವರ ಮುಂದೆ ಪಕ್ಷವನ್ನ ಕಷ್ಟಪಟ್ಟು ಕಟ್ಟುತ್ತಿದ್ದೀರಿ. ಸಾಕಷ್ಟು ಸಮಸ್ಯೆಗಳನ್ನ ಹೇಳಿಕೊಳ್ಳಲು ನೀವು ಬಂದಿದ್ದೀರಿ. ಆದರೆ ಸಭೆಗೆ ಗೌರವ ಕೊಡಬೇಕು ಎಂದು ತಮ್ಮದೇ ಸರ್ಕಾರದ ವಿರುದ್ಧ ಯೋಗೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಮತ್ತೊಂದೆಡೆ ಕೃಷಿ‌ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿದ್ದಕ್ಕೆ ಸ್ವಾಗತಿಸುತ್ತೇನೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ‌ ಜಗದೀಶ್ ಶೆಟ್ಟರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದಲ್ಲಾಳಿಗಳನ್ನ ಹೊರಗಿಟ್ಟು ಒಳ್ಳೇ ಬೆಲೆ ಸಿಗಲಿ ಎಂದು ತಂದ್ರು. ಆದ್ರೆ ಇದು‌ ಕಾಂಗ್ರೆಸ್ಗೆ ಬೇಕಾಗಿರಲಿಲ್ಲ, ಹಾಗಾಗಿ ದಲ್ಲಾಳಿಗಳಿಂದ ಹೋರಾಟ ಆರಂಭವಾದವು. ಪ್ರತಿಪಕ್ಷಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ನರೇಂದ್ರ ಮೋದಿಯವರ ಆಲೋಚನೆ ಬೇರೆ ಇರಬಹುದು. ರೈತರಿಗೆ ಅನುಕೂಲವಾದ ಕಾಯ್ದೆಗಳನ್ನ ಮುಂದೆ ತರುತ್ತಾರೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಜನ ಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ದೇಶದಲ್ಲಿ ಯಾವುದರೂ ರಾಷ್ಟ್ರೀಯ ಪಕ್ಷ ಇದ್ದರೇ ಅದು ಬಿಜೆಪಿ ಪಕ್ಷ ಮಾತ್ರ. ಕಾಂಗ್ರೆಸ್ ಎಲ್ಲಿ ಅಸ್ಥಿತ್ವದಲ್ಲಿ ಇದೆ. ಪ್ರತಿಪಕ್ಷದ ಸ್ಥಾನದಲ್ಲಿ‌ ಕೂರಲು ಸಹ ಯೋಗ್ಯತೆ ಇಲ್ಲದ ಪಾರ್ಟಿ ಅದು. ಕಾಂಗ್ರೆಸ್ ಭಿನ್ನಮತ ಈಗಾಗಲೇ ಆರಂಭವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನವರಿಗೆ 25 ಸಾವಿರ ಮತಗಳಿಂದ ಸೋಲಿಸಿದ್ದರು. ಕಾಂಗ್ರೆಸ್ ಮುಳಗುತ್ತಿರುವ ಹಡಗು. ಪಾರದರ್ಶಕ ಆಡಳಿತ ನೀಡುತ್ತಿರುವವರು ನರೇಂದ್ರ ಮೋದಿ ಅವರು. ಯಾವುದೇ ಕಳಂಕವಿಲ್ಲದೆ, ಭ್ರಷ್ಟಾಚಾರವಿಲ್ಲದೆ ಆಡಳಿತ‌ ನೀಡುತ್ತಿದ್ದಾರೆ. ಮೋದಿ ಅವರು ರಾಜ್ಯಗಳ ಮೇಲೆ ಭಾರವನ್ನ ಹಾಕದೆ 105 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡಲಾಗಿದೆ. ಸಭೆಯಲ್ಲಿ ಮಾಸ್ಕ್ ಧರಿಸದೇ ಕೂರಲು ಕಾರಣ ಮೋದಿ ಅವರು. ಉಚಿತ ವ್ಯಾಕ್ಸಿನ್ ನೀಡಿದ ಕಾರಣ ಮಾಸ್ಕ್ ಧರಿಸದೆ ಕೂರಲು ಸಾಧ್ಯವಾಗಿದೆ. ಯಡಿಯೂರಪ್ಪ ಸರ್ಕಾರ ಮಾಡಿದ ಕಾರ್ಯದಿಂದಾಗಿ ರಾಜ್ಯದ ಜನ ಸುರಕ್ಷಾವಾಗಿ‌ ಇದ್ದೇವೆ ಎಂದು ತಮ್ಮ ಪಕ್ಷದ ಬಗ್ಗೆ ಹೊಗಳಿದ್ದಾರೆ.

ಇದನ್ನೂ ಓದಿ: ಪಂಜಾಬ್​ನಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಿಲ್ಲ: ಸ್ಪಷ್ಟ ನಿರ್ಧಾರ ಪ್ರಕಟಿಸಿದ ಅಕಾಲಿ ದಳ ಮುಖ್ಯಸ್ಥ

TV9 Kannada


Leave a Reply

Your email address will not be published. Required fields are marked *