ಬೆಂಗಳೂರು: ರಾಜ್ಯದಲ್ಲಿ ಇಂದು 48,738 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,18,994 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 16,77,37 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 11,042 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 27,39,290ಕ್ಕೆ ಏರಿಕೆಯಾಗಿದೆ.

ಇಂದು 15,721 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಈವರೆಗೆ 24,96,132 ಮಂದಿ ಗುಣಮುಖರಾದಂತಾಗಿದೆ. ಇಂದು 194 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 32,485ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 2,10,652 ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.

ಇನ್ನು ಬೆಂಗಳೂರು ಒಂದರಲ್ಲೇ 2,191 ಹೊಸ ಪ್ರಕರಣಗಳು ದಾಖಲಾಗಿ, 47 ಮಂದಿ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಇನ್ನು ಬೆಳಗಾವಿ 439, ಚಿಕ್ಕಮಗಳೂರು 397, ದಕ್ಷಿಣ ಕನ್ನಡ 580, ದಾವಣಗೆರೆ 313, ಧಾರವಾಡ 261, ಹಾಸನ 776, ಮಂಡ್ಯ 448, ಮೈಸೂರು 1,011, ಶಿವಮೊಗ್ಗ 521, ತುಮಕೂರು 571, ಉಡುಪಿ 291 ಹಾಗೂ ಉತ್ತರ ಕನ್ನಡದಲ್ಲಿ 426 ಪ್ರಕರಣಗಳು ದಾಖಲಾಗಿವೆ. ಇನ್ನು ಬೀದರ್​​ನಲ್ಲಿ ರಾಜ್ಯದಲ್ಲಿಯೇ ಅತೀ ಕಡಿಮೆ ಅಂದ್ರೆ 20 ಕೊರೊನಾ ಪ್ರಕರಣ ದಾಖಲಾಗಿದೆ. ಇನ್ನು ರಾಜ್ಯದಲ್ಲಿ ಪಾಸಿಟಿವಿಟಿ ರೇಟ್​ ಕುಸಿದಿದ್ದು, 6.58%ಕ್ಕೆ ಬಂದು ನಿಂತಿದೆ. ಮೃತಪಟ್ಟವರ ಶೇಕಡವಾರು ಪ್ರಮಾಣ ಶೇಕಡಾ 1.75%ಕ್ಕೆ ನಿಂತಿದೆ.

The post ರಾಜ್ಯದಲ್ಲಿ ಪಾಸಿಟಿವಿಟಿ 6.58%ಗೆ ಇಳಿಕೆ.. 194 ಮಂದಿ ಸೋಂಕಿಗೆ ದುರ್ಮರಣ appeared first on News First Kannada.

Source: newsfirstlive.com

Source link