ರಾಜ್ಯದಲ್ಲಿ ಭಾರೀ ಮಳೆ ಹಿನ್ನೆಲೆ ಸಿಎಂ ಬೊಮ್ಮಾಯಿ ಜೊತೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ರಾಜ್ಯದಲ್ಲಿ ಮಳೆ ಅವಾಂತರದ ಕುರಿತು ಮಾನ್ಯ ಪ್ರಧಾನ ಮಂತ್ರಿಗಳು ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಮಳೆ ಸೃಷ್ಟಿಸಿರುವ ಅವಾಂತರ ಕುರಿತು ಮಾಹಿತಿ ಪಡೆದ ಅವರು ಬೆಂಗಳೂರಿನ ಮಳೆಹಾನಿ ಬಗ್ಗೆಯೂ ಮಾತುಕತೆ ನಡೆಸಿ ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ ಎಂದಿದ್ದಾರೆ.

ಗೃಹ ಮಂತ್ರಿ ಅಮಿತ್​ ಶಾ ಕೂಡ ಈ ಕುರಿತು ಮಾತನಾಡಿದ್ದು ಮಳೆ ಹಾನಿಗೆ ಒಳಗಾಗಿರುವ ರಾಜ್ಯಕ್ಕೆ ಅಗತ್ಯ ನೆರೆವು ನೀಡುವುದಾಗಿ ಉ ಭರವಸೆ ನಿಡಿದ್ದಾರೆಂದು ಸಿಎಂ ಬೊಮ್ಮಾಯಿ ತಿಳಿಸಿದರು. ಇನ್ನು ಸಿಎಂ ಕೂಡ ಮಳೆ ಹಾನಿಯ ಸಂತ್ರಸ್ಥರಿಗೆ ಅಭಯ ನೀಡಿದ್ದು ಅಗತ್ಯ ಪರಿಹಾರಗಳನ್ನು ಘೋಷಿಸಿದ್ದಾರೆ . ಜೊತೆಗೆ ತೀವ್ರ ಮಳೆಯಾಗಿ ಹಾನಿಯಾಗಿರುವ ಪ್ರದೇಶಗಳೊಂದಿಗೆ  ತಮ್ಮ ಸಂಪುಟ ಸಹದ್ಯೋಗಿಗಳೊಂದಿಗೆ ಭೇಟಿ ನೀಡಿ ಪರೀಶೀಲನೆ ಕೈಗೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಮನೆಗೆ ನೀರು ನುಗ್ಗಿದ್ರೆ ₹10 ಸಾವಿರ, ಪೂರ್ಣ ಪ್ರಮಾಣ ಹಾನಿಯಾಗಿದ್ದರೆ ₹5 ಲಕ್ಷ ಪರಿಹಾರ- ಸಿಎಂ

ಇದನ್ನೂ ಓದಿ:ಅಪಾರ್ಟ್​ಮೆಂಟ್​ ನಿವಾಸಿಗಳಿಗೆ ತಪ್ಪದ ಜಲಕಂಟಕ- ಕೇಂದ್ರೀಯ ವಿಹಾರಕ್ಕೆ ಸಿಎಂ ಭೇಟಿ

News First Live Kannada

Leave a comment

Your email address will not be published. Required fields are marked *