ರಾಜ್ಯದಲ್ಲಿ ಭ್ರಷ್ಟರ ಬೇಟೆ; ಬಗೆದಷ್ಟು ಅಕ್ರಮ ಬಯಲಿಗೆ; ಎಲ್ಲೆಲ್ಲಿ ಏನೇನು ಸಿಕ್ತು ಗೊತ್ತಾ?

ರಾಜ್ಯದಲ್ಲಿ ಇಂದು ಹಲವು ಭ್ರಷ್ಟ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್​ ನೀಡಿದ್ದಾರೆ. ಏಕಕಾಲದಲ್ಲಿ ರಾಜ್ಯದ 60 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, 15 ಭ್ರಷ್ಟ ಅಧಿಕಾರಿಗಳ ನಿವಾಸ ಸೇರಿ ವಿವಿಧ ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಏಲ್ಲೆಲ್ಲಿ ಏನೇನು ಸಿಕ್ತು?

 • ಎಂ. ಬಿರಾದರ್, ಕಿರಿಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಜೇವರ್ಗಿ

ನಗರದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಕಿರಿಯ ಇಂಜಿನೀಯರ್​ ಆಗಿದ್ದ ಎಂ ಬಿರಾದಾರ್​ ಅವರ ಮನೆಯ ಮೇಲೆ ಎಸಿಬಿ ದಾಳಿ ನಡೆಸಿದೆ. ಈ ವೇಳೆ ಕಲಬುರಗಿಯಲ್ಲಿ 2 ವಾಸದ ಮನೆಗಳು, ಬೆಂಗಳೂರು ನಗರದಲ್ಲಿ 1 ನಿವೇಶನ, 3 ವಿವಿಧ ಕಂಪನಿಯ ಕಾರುಗಳು, 1 ದ್ವಿಚಕ್ರ ವಾಹನ, 2 ಟ್ರ್ಯಾಕ್ಟರ್‌ಗಳು, 54,50,000/ ರೂಗಳ ನಗದು , ಸುಮಾರು 100 ಗ್ರಾಂ ಚಿನ್ನಾಭರಣಗಳು, 36 ಎಕರೆ ಕೃಷಿ ಜಮೀನು, 15 ಲಕ್ಷ ದೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ ಎಂದು ಮಾಹಿತಿ ಲಭ್ಯವಾಗಿದ ಎ. ವಿಶೇಷವಾಗಿ ಈ ದಾಳಿಯಲ್ಲಿ ಪೈಪ್​ನಲ್ಲಿ ಹಣವನ್ನು ಬಚ್ಚಿಟ್ಟಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು.

 • ಟಿ. ಎಸ್. ರುದ್ರೇಶಪ್ಪ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಗದಗ ಜಿಲ್ಲೆ, ಗದಗ,

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್​. ರುದ್ರಪ್ಪ ಅವರಿಗೆ ಸಂಬಂಧಿಸಿದ  ಶಿವಮೊಗ್ಗ ನಗರದಲ್ಲಿ 2 ವಾಸದ ಮನೆಗಳು,  4 ನಿವೇಶನಗಳು, 9 ಕೆ.ಜಿ 400 ಗ್ರಾಂ ಚಿನ್ನದ ಬಿಸ್ಕೆಟ್​ ಹಾಗೂ ಆಭರಣಗಳು, 3 ಕೆ.ಜಿ ಬೆಳ್ಳಿಯ ಸಾಮಾನುಗಳು, 2 ವಿವಿಧ ಕಂಪನಿಯ ಕಾರುಗಳು, 3 ದ್ವಿ ಚಕ್ರ ವಾಹನಗಳು, 2 ಎಕರೆ ಕೃಷಿ ಜಮೀನು, ನಗದು ಹಣ 15,94,000/ ರೂಗಳು ಹಾಗೂ 20 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ..

 • ಶ್ರೀನಿವಾಸ್,  ಕಾರ್ಯಪಾಲಕ ಅಭಿಯಂತರರು, ಹೆಚ್‌ಎಲ್‌ಐಸಿ-3, ಕೆ.ಆರ್. ಪೇಟೆ 

ಮಂಡ್ಯ ಜಿಲ್ಲೆ ಮೈಸೂರು ನಗರದಲ್ಲಿ 1 ವಾಸದ ಮನೆ, ಮೈಸೂರು ನಗರದಲ್ಲಿ 1 ಐಷಾರಾಮಿ  ಫ್ಲಾಟ್, ಮೈಸೂರು ನಗರದಲ್ಲಿ 2 ನಿವೇಶನಗಳು, ಮೈಸೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ 4 ಎಕರೆ 34 ಗುಂಟೆ ಕೃಷಿ ಜಮೀನು, ನಂಜನಗೂಡಿನಲ್ಲಿ 1 ಫಾರ್ಮ್ ಹೌಸ್, 2 ವಿವಿಧ ಕಂಪನಿಯ ಕಾರುಗಳು, 2 ದ್ವಿ ಚಕ್ರ ವಾಹನಗಳು, 1 ಕೆಜಿ ಚಿನ್ನಾಭರಣಗಳು, 8 ಕೆ.ಜಿ 840 ಗ್ರಾಂ ಬೆಳ್ಳಿ ಸಾಮಾನುಗಳು, ನಗದು ಹಣ 9.85,000/ ಗೂಗಳು, ವಿವಿಧ ಬ್ಯಾಂಕ್‌ಗಳಲ್ಲಿ 22 ಲಕ್ಷ ರೂಗಳ ಠೇವಣಿ ಹಾಗೂ 8 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

 • ಕೆ. ಎಸ್. ಲಿಂಗೇಗೌಡ, ಕಾರ್ಯಪಾಲಕ ಅಭಿಯಂತರರು, ಸ್ಕಾರ್ಟ್ ಸಿಟಿ, ಮಂಗಳೂರು

ಮಂಗಳೂರು ನಗರದಲ್ಲಿ  ವಾಸದ ಮನೆ, ಚಾಮರಾಜನಗರ ಮತ್ತು ಮಂಗಳೂರಿನಲ್ಲಿ 3 ನಿವೇಶನಗಳು, 2 ವಿವಿಧ ಕಂಪನಿಯ ಕಾರುಗಳು, 1 – ಚಕ್ರ ವಾಹನ, 1 ಕೆಜಿ ಬೆಳ್ಳಿ ಆಭರಣಗಳು ಹಾಗೂ 10 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆ.

 • ಎಲ್. ಸಿ. ನಾಗರಾಜ್, ಆಡಳಿತಾಧಿಕಾರಿ, ಸಕಾಲ ಮಷೀನ್, 5ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು.

ಬೆಂಗಳೂರು ನಗರದಲ್ಲಿ 1 ವಾಸದ ಮನೆ ಹಾಗೂ ನಿವೇಶನ, ನೆಲಮಂಗಲದ 1 ವಾಸದ ಮನೆ ನೆಲಮಂಗಲ ತಾಲ್ಲೂಕಿನಲ್ಲಿ ಸುಮಾರು 11 ಎಕರೆ 25 ಗುಂಟೆ ಜಮೀನು, ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶದ ಒಂದು ಕಟ್ಟಡ, 3 ವಿವಿಧ ಕಂಪನಿಯ ಕಾರುಗಳು, 1,76 ಗ್ರಾಂ ಚಿನ್ನಾಭರಣಗಳು, 43,00,000 ಲಕ್ಷ  ನಗದು ಪತ್ತೆಯಾಗಿದೆ.

 • ಜಿ. ವಿ. ಗಿರಿ, ಗ್ರೂಪ್-ಡಿ ನೌಕರ, ಟಿಟಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್, ಮಾರಪ್ಪನಪಾಳ್ಯ, ಯಶವಂತಪುರ,

ಬೆಂಗಳೂರು ನಗರದಲ್ಲಿ 6 ವಾಸದ ಮನೆಗಳು, 4 ವಿವಿಧ ಕಂಪನಿಯ ಕಾರುಗಳು, 4 ದ್ವಿಚಕ್ರ ವಾಹನಗಳು,  1 ಲಕ್ಷ 18 ಸಾವಿರ ನಗದು ಹಣ ಹಾಗೂ ಸುಮಾರು 15 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ ಎಂದು ಮಾಹಿತಿ ಲಭ್ಯವಾಗಿದೆ.

 • ಎಸ್. ಎಸ್. ರಾಜಶೇಖರ್, ಪಿಪಿಯೋಥೆರಪಿಸ್ಟ್, ಸರ್ಕಾರಿ ಆಸ್ಪತ್ರೆ, ಯಲಹಂಕ, ಬೆಂಗಳೂರು ನಗರ,

ಬೆಂಗಳೂರಿನ ಯಲಹಂಕದ ಮಾರಸಂದ್ರದಲ್ಲಿ 1 ಫ್ಲಾಟ್, ಯಲಹಂಕದಲ್ಲಿನ ಶಿವನಹಳ್ಳಿಯಲ್ಲಿ. 2 ಅಂತಸ್ತಿನ ಒಂದು ಫ್ಲಾಟ್ ಮತ್ತು ತಳ ಮಹಡಿಯಲ್ಲಿ ಖಾಸಗಿ ಆಸ್ಪತ್ರೆ, ಯಲಹಂಕದ ಮೈಲನಹಳ್ಳಿಯಲ್ಲಿ ಒಂದು ನಿವೇಶನ, 1 ಕಾರ್, 1 ದ್ವಿ ಚಕ್ರ ವಾಹನ ಹಾಗೂ ಸುಮಾರು 4 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ.

 

 • ಕೆ. ಎಸ್. ಶಿವಾನಂದ್, ಸಬ್ ರಿಜಿಸ್ಟ್ರಾರ್ (ನಿವೃತ್ತ), ಬಳ್ಳಾರಿ ಜಿಲ್ಲೆ.

ಮಂಡ್ಯ ನಗರದಲ್ಲಿ 1 ವಾಸದ ಮನೆ, ಬೆಂಗಳೂರು ನಗರದಲ್ಲಿ 1  ನಿವೇಶನ, 1 ಕಾರು, 2 ದ್ವಿ ಚಕ್ರ ವಾಹನ, ಶಕ್ತಮರ ಗ್ರಾಮದಲ್ಲಿ 1 ಸಂಕೀರ್ಣ, ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದಲ್ಲಿ ಸುಮಾರು 7 ಎಕರೆ ಕೃಷಿ ಜಮೀನು, ಹಾಗೂ ಸುಮಾರು 8 ಲಕ್ಷ ಬೆಲೆಬಾಳುವ  ವಸ್ತುಗಳು ಸೀಜ್​ ಮಾಡಲಾಗಿದೆ.

 • ಸದಾಶಿವ ರಾಯಪ್ಪ ಮರಲಿಂಗಣ್ಣನವರ್‌, ಹಿರಿಯ ಮೋಟಾರು ನಿರೀಕ್ಷಕ, ಗೋಕಾಕ್, ಬೆಳಗಾವಿ

ಬೆಳಗಾವಿ ನಗರದಲ್ಲಿ 1 ವಾಸದ ಮನೆ, 22 ಎಕರೆ ಕೃಷಿ ಜಮೀನು, 1 ಕೆ.ಜಿ 135 ಗ್ರಾಂ ಚಿನ್ನಾಭರಣಗಳು, 22,000 ನಗದು  ಹಾಗೂ ಸುಮಾರು 5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದ್ದು  ತನಿಖೆ ಮುಂದುವರೆದಿದೆ.

 • ಶ್ರೀ. ಅಡವಿ ಸಿದ್ದೇಶ್ವರ ಕಾರೆಪ್ಪ ಮಸ್ತಿ, ಅಭಿವೃದ್ಧಿ ಅಧಿಕಾರಿ, ಸಹಕಾರ ಇಲಾಖೆ, ರಾಯಬಾಗ್ ತಾಲ್ಲೂಕು, ಬೆಳಗಾವಿ ಜಿಲ್ಲೆ.

ಬೈಲಹೊಂಗಲ ನಗರದಲ್ಲಿ 2 ವಾಸದ ಮನೆ, 4 ನಿವೇಶನಗಳು, 4 ವಿವಿಧ ಕಂಪನಿಯ ಕಾರುಗಳು, – ದ್ವಿ ಚಕ್ರ ವಾಹನಗಳು, 263 ಗ್ರಾಂ ಚಿನ್ನಾಭರಣಗಳು, 945 ಗ್ರಾಂ ಬೆಳ್ಳಿ ಸಾಮಾನುಗಳು, 1,50,000- ರೂ ಮೌಲ್ಯದ ಬ್ಯಾಂಕ್ ಡೆಪಾಸಿಟ್ ಮತ್ತು ಷೇರ್‌ಗಳು, ಹಾಗೂ ಸುಮಾರು 5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ.

 • ನಾಥಾಚಿ ಪೀರಾಜ ಪಾಟೀಲ, ಲೈನ್ ಮೆಕಾನಿಕ್ ಗ್ರೇಡ್-2, ಹಾಂ, ಬೆಳಗಾವಿ ಜಿಲ್ಲೆ,

ಬೆಳಗಾವಿ ನಗರದಲ್ಲಿ 1 ವಾಸದ ಮನೆ, ಬೆಳಗಾವಿ ನಗರದಲ್ಲಿ 2 ನಿವೇಶನ, 1 ಕಾರು, 1 ದ್ವಿ ಚಕ್ರ ವಾಹನ, 239 ಗ್ರಾಂ ಚಿನ್ನಾಭರಣಗಳು, 1 ಕೆ.ಜಿ 803 ಗ್ರಾಂ ಬೆಳ್ಳಿ ಸಾಮಾನುಗಳು, ನಗದು ಹಣ 38,000 ರೂಪಾಯಿಗಳು ಹಾಗೂ ಸುಮಾರು 20 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ.

 • ಲಕ್ಷ್ಮೀನರಸಿಂಹಯ್ಯ, ರಾಜಸ್ವ ನಿರೀಕ್ಷಕರು, ಕಸಬಾ-2 ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು

ಗ್ರಾಮಾಂತರ ಜಿಲ್ಲೆ, ವಿವಿಧ ಭಾಗಗಳಲ್ಲಿ 5 ವಾಸದ ಮನೆಗಳು,  6 ನಿವೇಶನಗಳು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 25 ಗುಂಟೆ ಜಮೀನು, 765 ಗ್ರಾಂ ಚಿನ್ನಾಭರಣಗಳು, 1 ಕಾರು,  ಪತ್ತೆಯಾಗಿರುತ್ತದೆ.

 • ವಾಸುದೇವ್ ಆರ್‌ಎನ್ , ಮಾಜಿ ಯೋಜನಾ ನಿರ್ದೇಶಕರು , ನಿರ್ಮಿತಿ ಕೇಂದ್ರ , ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರದ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ವಾಸುದೇವ್‌ ಆರ್‌ಎನ್‌ ಅವರಿಗೆ ಸೇರಿದ 6 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಬೆಂಗಳೂರು ಕೇಂದ್ರ ವಲಯ ಎಸಿಬಿಯ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಒಟ್ಟು 30 ಅಧಿಕಾರಿ ಹಾಗೂ ಸಿಬ್ಬಂದಿಗಳ 6 ತಂಡಗಳೊಂದಿಗೆ ಶೋಧನಾ ಕಾರ್ಯ ಮುಂದುವರೆದಿದೆ .

ಒಟ್ಟಾರೆ, ಇವತ್ತಿನ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ, ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇಲ್ಲಿತನಕ ಸುಮಾರು 7 ಕೋಟಿ ಮೌಲ್ಯದ ಆಭರಣಗಳು ಪತ್ತೆಯಾಗಿದ್ದು ಸುಮಾರು 3 ಕೋಟಿ ನಗದು ಪತ್ತೆಯಾಗಿದೆ. ನೂರಾರು ಕೋಟಿಯ ಆಸ್ತಿಗಳ ದಾಖಲೆಗಳು ಸಿಕ್ಕಿವೆ. ಆದಾಯಕ್ಕಿಂತ ನೂರಾರು ಪಟ್ಟು ಅಕ್ರಮ ಆಸ್ತಿ ಗಳಿಕೆ ದಾಳಿ ವೇಳೆ ಬಟಾಬಯಲಾಗಿದೆ.

News First Live Kannada

Leave a comment

Your email address will not be published. Required fields are marked *