ಮಂಡ್ಯ: ಮುಂದಿನ ದಿನಗಳಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ಅಂತಾ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮದ್ದೂರಿನ ಕೊಪ್ಪದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ.. ಕುಮಾರಣ್ಣನ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವ ಹೆಚ್ಚಿನ ಸಾಧ್ಯತೆ ಕಾಣ್ತಿದೆ. ಕುಮಾರಣ್ಣನವರ ಜೊತೆ ಎರಡು-ಮೂರು ಕಾರ್ಯಕ್ರಮಗಳಿಗೆ ಹೋಗಿದ್ದೆ. ಆಗ ಆರೋಗ್ಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರ ಪ್ರೋತ್ಸಾಹ ಧನ ಹಾಗೂ ಸಂಬಳ ಹೆಚ್ಚಳದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾದ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಕೊಟ್ಟ ಮಾತನ್ನ ಉಳಿಸಿ ಕೊಂಡಿದ್ದಾರೆ. ಇನ್ನೂ ಎರಡೂ-ಮೂರು ವರ್ಷ ಸರ್ಕಾರ ಇದಿದ್ರೆ ಎಲ್ಲರೂ ನಮ್ಮನ್ನು ಕೂಡ ಗುರುತಿಸುವ ಕೆಲಸ ಆಗುತ್ತಿತ್ತು. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್ ಡೆಲ್ಲಿಯಲ್ಲಿರೋದು. ಆದರೆ ಜನರೇ ಕುಮಾರಸ್ವಾಮಿ ಅವರ ಹೈಕಮಾಂಡ್. ನಮ್ಮ ಕುಮಾರಣ್ಣ ಹೈಕಮಾಂಡ್ ಅಂತ ಅನ್ಕೊಂಡಿರೋದು ಜನರನ್ನ. ಮುಂದಿನ ದಿನಗಳಲ್ಲಿ ಜನರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಜನರ ಸೇವೆಯನ್ನು ನಮ್ಮ ಪಕ್ಷ ಮಾಡುತ್ತದೆ ಅಂತಾ ಅಭಿಪ್ರಾಯಪಟ್ಟರು.

The post ರಾಜ್ಯದಲ್ಲಿ ಮತ್ತೆ ‘ಕುಮಾರಣ್ಣ’ನ ಸರ್ಕಾರ ಬರುತ್ತೆ -ನಿಖಿಲ್ ಕುಮಾರಸ್ವಾಮಿ ವಿಶ್ವಾಸ appeared first on News First Kannada.

Source: newsfirstlive.com

Source link