ರಾಜ್ಯದಲ್ಲಿ ಮತ್ತೆ ಬೆಚ್ಚಿ ಬೀಳಿಸಿದ ಮರ್ಯಾದ ಹತ್ಯೆ.. ಮಟ ಮಟ ಮಧ್ಯಾಹ್ನ ನಡೀತು ಡಬಲ್ ಮರ್ಡರ್

ರಾಜ್ಯದಲ್ಲಿ ಮತ್ತೆ ಬೆಚ್ಚಿ ಬೀಳಿಸಿದ ಮರ್ಯಾದ ಹತ್ಯೆ.. ಮಟ ಮಟ ಮಧ್ಯಾಹ್ನ ನಡೀತು ಡಬಲ್ ಮರ್ಡರ್

ಅವರಿಬ್ಬರು ಪ್ರೇಮಿಗಳು. ಜಾತಿಯೊಂದು ಬೇರೆ ಬಿಟ್ರೆ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯವಿತ್ತು. ಆದ್ರೆ ಆ ಸುಂದರ ಪ್ರೀತಿಗೆ ಅಡ್ಡ ಬಂದಿತ್ತು ಜಾತಿಯ ಬೇಲಿ. ಮುಂದೆ ನಡೆದಿತ್ತು ಮಾತ್ರ ಕಲ್ಪಿಸಲು ಅಸಾಧ್ಯವಾದ ಕಹಾನಿ. ಮಂಗಳವಾರದ ಮಟ ಮಟ ಮಧ್ಯಾಹ್ನ ವಿಜಯಪುರದಲ್ಲಿ ಹರಿದಿದ್ದು ರಕ್ತದೋಕುಳಿ.

ಸರ್ವ ಜನಾಂಗದ ಶಾಂತಿಯ ತೋಟ ಎಂದು ನಾಡಗೀತೆಯಲ್ಲಿ ರಾಷ್ಟ್ರ ಕವಿ ಕುವೆಂಪುರವರು ಬಣ್ಣಿಸಿದ ಈ ಕರುನಾಡಲ್ಲಿ ಇತ್ತೀಚಿಗೆ ಮರ್ಯಾದ ಹತ್ಯೆಗಳ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಮೈಸೂರಿನಲ್ಲಿ ನಡೆದ ಮರ್ಯಾದ ಹತ್ಯೆಯ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಮರ್ಯಾದೆ ಇದೇ ಕರುನಾಡಲ್ಲಿ ನಡೆದಿದೆ. ಈ ಬಾರಿ ಭೀಕರ ಹತ್ಯೆಗೆ ಸಾಕ್ಷಿಯಾಗಿದ್ದು ವಿಜಪುರ ಜಿಲ್ಲೆಯ ಸಲಾದಹಳ್ಳಿಯಲ್ಲಿ ಎನ್ನುವ ಊರು.

ಅದು ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ಎನ್ನುವ ಪುಟ್ಟ ಊರು. ಇಲ್ಲಿಯ ಜನರು ಮಂಗಳವಾರದ ಮಟ ಮಟ ಅದೊಂದು ದೃಶ್ಯ ನೋಡಿ ಜನರು ಬೆಚ್ಚಿ ಬಿದಿದ್ರು. ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ರು. ಸ್ಥಳಕ್ಕೆ ಬಂದ ಪೊಲೀಸರಿಗೂ ಶಾಕ್ ಆಗಿತ್ತು. ಯಾಕಂದ್ರೆ ಪ್ರೇಮಿಗಳಿಬ್ಬರು ಮಂಗಳವಾರದ ಮಟ ಮಟ ಮಧ್ಯಾಹ್ನೇ ಹಸಿರ ಹೊಲದಲ್ಲಿ ಹೆಣವಾಗಿ ಮಲಗಿದ್ರು.

ವಿಜಯಪುರದಲ್ಲಿ ನಡೆಯಿತು ಜೋಡಿಗಳ ಡಬಲ್ ಮರ್ಡರ್
ಮಂಗಳವಾರದ ಮಟ ಮಟ ಮಧ್ಯಾಹ್ನವೇ ಹರಿಯಿತು ನೆತ್ತರು
ಮತ್ತೊಂದು ಮರ್ಯಾದೆ ಹತ್ಯೆಗೆ ಸಾಕ್ಷಿಯಾಯ್ತಾ ಕರುನಾಡು?
ಅದು ಮಂಗಳವಾರದ ಮಧ್ಹಾಹ್ನದ ಸಮಯ. ಸೂರ್ಯ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆಯೇ ಅಲ್ಲೊಬ್ಬನ ಕೋಪತ ತಾಪ ಕೂಡ ಧಗ ಧಗಿಸಲು ಶರು ಮಾಡಿದೆ. ಪರಿಣಾಮ ಮುಂದೆ ಬಾಳಿ ಬದುಕಬೇಕಾದ ಇಬ್ಬರ ಹೆಣಗಳು ಬಿದ್ದಿವೆ. ಕೋಪದ ಕೈಗೆ ಕೆಲಸ ಕೊಟ್ಟ ಆ ಪಾಪಿ ಅಕ್ಷರಶಃ ರಕ್ಕಸನ ರೂಪ ತಾಳಿದ್ದ.
ಈ ಪ್ರೀತಿ, ಪ್ರೇಮ, ಇಷ್ಕ್, ಲವ್,ಮೊಹಬ್ಬತ್ ಅನ್ನೋದೆ ಹಾಗೆ.. ಅದ್ಕೆ ಜಾತಿ, ಧರ್ಮ, ಗಡಿ ಯಾವುದು ಗೊತ್ತಾಗಲ್ಲ. ಅದು ಗೊತ್ತಾಗುವಷ್ಟ್ರಲ್ಲಿ ದುರಂತದ ಕಡೆ ಮುಖ ಮಾಡಿರುತ್ತೆ. ಇಲ್ಲಿಯಾಗಿರುವುದು ಕೂಡ ಅದೇ. ವಿಜಯಪುರ ಜಿಲ್ಲೆಯ ಸಲಾದಹಳ್ಳಿ ಗ್ರಾಮದ ನಿವಾಸಿ ಹತ್ತೊಂಬತ್ತು ವರ್ಷ ವಯಸ್ಸಿನ ಬಸವರಾಜ ಬಡಿಗೇರಿ ಎಂಬಾತ ಹಾಗೂ ಖಾನಾಪುರ ಗ್ರಾಮದ 16 ವರ್ಷದ ಅಪ್ರಾಪ್ತೆಯ ನಡುವೆ ಪ್ರೇಮಾಂಕುತರವಾಗಿತ್ತು.

ಸಲಾದಹಳ್ಳಿ ಹಾಗೂ ಖಾನಾಪುರ ಅಕ್ಕಪಕ್ಕದ ಗ್ರಾಮಗಳು. ಆದ್ದರಿಂದ ಸಲಾದಹಳ್ಳಿಯ ಬಸವರಾಜು ಹಾಗೂ ಖಾನಾಪುರದ ಅಪ್ರಾಪ್ತೆಯ ನಡುವೆ ಆರಂಭದಲ್ಲಿ ಪರಿಚಯ ಶುರುವಾಗಿದೆ. ನಂತರ ಇವರ ಪರಿಚಯ ಸ್ನೇಹದ ಮೊಗ್ಗಾಗಿ ಪ್ರೀತಿಯ ಹೂವಾಗಿ ಅರಳಿದೆ. ಸಾಂಗತ್ಯ ಬಯುಸುತ್ತಿದ್ದ ಈ ಪ್ರೇಮಿಗಳ ಮನದಲ್ಲಿ ಬಣ್ಣದ ಚಿಟ್ಟೆಗಳ ಕಲರ್ ಫುಲ್ ಕಲರವ ಶುರುವಾಗಿದೆ. ಜಾತಿ ಬೇರೆ ಎನ್ನುವುದು ಬಿಟ್ರೆ ಇಬ್ಬರ ನಡುವೆ ಪ್ರೀತಿಯಿತ್ತು. ಈ ಪ್ರೇಮ ಪಕ್ಷಿಗಳು ಪ್ರೀತಿ, ಪ್ರೇಮ ಎಂಬ ಕಾಣದ ಪ್ರಪಂಚದಲ್ಲಿ ವಿಹರಿಸುತ್ತಿದ್ರು. ಹಕ್ಕಿಂಯತೆ ಹಾರಾಡ್ತಿದ್ರು. ಆದ್ರೆ ಈ ಯುವ ಜೋಡಿ ಹಕ್ಕಿಗಳ ಮುಖದಲ್ಲಿ ನಾಟ್ಯವಾಡುತ್ತಿದ್ದ ನಗುವು ಮಾಯವಾಗಿ ನೋವಿನ ಕಾರ್ಮೋಡ ಆವರಿಸಲು ಹೆಚ್ಚು ಸಮಯ ಬೇಕಾಗಿರ್ಲಿಲ್ಲ.

ಎಲ್ಲಾ ಪ್ರೀತಿಯಲ್ಲೂ ಎದುರಾಗಹುವಂತೆ ಇಲ್ಲಿ ಕೂಡ ಇವರ ಪ್ರೀತಿಗೆ ವಿಲನ್ ರೂಪದಲ್ಲಿ ಅದೊಬ್ಬ ಎಂಟ್ರಿಯಾಗಿದ್ದ. ಅದು ಬೇರೆ ಯಾರು ಅಲ್ಲ. ಈ ಅಪ್ರಾಪ್ತೆ ಹುಡುಗಿಯ ತಂದೆ. ಅದ್ಕೆ ಕಾರಣವಾಗಿದ್ದು ಇಬ್ಬರ ಪ್ರೀತಿ ಮಾತ್ರವಲ್ಲದೇ ಜಾತಿ ಬೇರೆ ಎಂಬುವುದು ಕೂಡ.

ಇವರ ಪ್ರೀತಿಗೆ ಅಡ್ಡ ಬಂದಿತ್ತು ಜಾತಿಯ ಬೇಲಿ
ಕೋಪದಲ್ಲಿ ಅಪ್ಪನೇ ಮಗಳನ್ನು ಕೊಟ್ಟನಾ ಬಲಿ?
ಅನ್ಯಕೋಮಿನ ಜೋಡಿಗಳಿಗೆ ಲವ್ವು ಕಾದಿತ್ತು ಸಾವು
ಹೌದು. ಅದಾಗ್ಲೆ ಇಬ್ಬರ ಪ್ರೀತಿ ಯುವತಿಯ ಮನೆಯವರಿಗೆ ಗೊತ್ತಾಗಿದೆ. ಮಗಳ ಲವ್ ಸ್ಟೋರಿ ಕೇಳಿ ಅಪ್ರಾಪ್ತೆಯ ಮನೆಯವರು ಕೆಂಡಕಾರಿದ್ದಾರೆ. ಅಲ್ಲದೆ ಮಗಳಿಗೆ ತುಸು ಬುದ್ದಿ ಕೂಡ ಹೇಳಿದ್ದಾರೆ. ಆದ್ರೆ ಏನ್ಮಾಡೋದು.. ಮನೆಯಲ್ಲಿ ವಿರೋಧ ಹೆಚ್ಚಾಗುತ್ತಿದ್ದಂತೆಯೆ ಇತ್ತ ಇವರ ಪ್ರೀತಿ ಮತ್ತಷ್ಟು ಗಟ್ಟಿಯಾಗತೊಡಗಿದೆ. ಈ ಜೋಡಿ ಹಕ್ಕಿಗಳಿಗೆ ಪರಸ್ಪರ ಒಬ್ಬರೊನೊಬ್ಬರು ಒಂದು ಕ್ಷಣವು ಬಿಟ್ಟಿರಲಾರದಷ್ಟು ಲವ್ ಶುರುವಾಗಿತ್ತು.

ಅದರಂತೆ ಮಂಗಳವಾರಂದು ಮಗಳು ಅದೆಲ್ಲಿಗೋ ಹೋಗಿ ಬರ್ತೀನೆಂದು ಮನೆಯಿಂದ ಹೋಗಿದ್ದಾಳೆ. ಮಗಳು ಪಕ್ಕದಲ್ಲೇ ಇದ್ದ ಗದ್ದೆಯಲ್ಲಿ ತನ್ನ ಇನಿಯನನ್ನು ಭೇಟಿಯಾಗಿದ್ದಾಳೆ. ಮಗಳ ಹೆಜ್ಜೆ ಗುರುತುಗಳನ್ನು ತಂದೆ ಹಿಂಬಾಲಿಸಿಕೊಂಡು ಬಂದಾಗ, ಈ ಜೋಡಿ ಹಕ್ಕಿಗಳು ಪ್ರಪಂಚವನ್ನೇ ಮೈ ಮರೆತು ತಮ್ಮ ಲೋಕದಲ್ಲಿ ಮಗ್ನರಾಗಿದ್ರು. ಯುವಕ ಹಾಗೂ ಬಾಲಕಿ ಹೊಲದಲ್ಲಿ ಪ್ರೀತಿ, ಪ್ರೇಮದಲ್ಲಿ ನಿರತರಾಗಿದ್ದು ಬಾಲಕಿಯ ತಂದೆಗೆ ಗೊತ್ತಾಗಿದೆ. ತಕ್ಷಣ ಇಬ್ಬರನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಬಳಿಕ ಯುವತಿಯ ತಂದೆ ಮತ್ತೆ ಕೆಲವರ ಸಹಾಯದೊಂದಿಗೆ ಇಬ್ಬರನ್ನೂ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿರಬಹುದು ಎನ್ನಲಾಗುತ್ತಿದೆ.

ತಾಯಿಯ ಕಣ್ಣೆದುರು ನಡೆಯಿತಾ ಮಗನ ಹತ್ಯೆ?
ಕರುಳ ಬಳ್ಳಿಯನ್ನು ನೋಡಿಯೂ ಕಗರದ ಕಟುಕರ ಮನಸು!
ಯುವಕನ ತಾಯಿ ಅದೇನ್ ಪಾಪ ಮಾಡಿದ್ಳೊ ಗೊತ್ತಿಲ್ಲ.. ಯಾಕಂದ್ರೆ ತಾನು ಹೆತ್ತು ಹೊತ್ತು ಪೋಷಿಸಿದ ಮಗನನ್ನ ಯುವತಿಯ ತಂದೆ ಈಕೆಯ ಕಣ್ಣ ಮುಂದೆನೆ ಕೊಂದಿದ್ದಾನೆ. ಮಗನನ್ನು ಕೊಲ್ಲುತ್ತಿದ್ರೂ ಏನು ಮಾಡಲಾಗದ ಅಸಾಯಕ ಸ್ಥಿತಿ ಆ ತಾಯಿಯದ್ದಾಗಿದೆ.

ಜಾತಿ ಬೇರೆ ಎಂಬ ಕಾರಣಕ್ಕೆ ಯುವತಿಯ ಮನೆಯವರು ನಮಗೆ ಬೆದರಿಕೆ ಹಾಕ್ತಿದ್ದಾರೆಂದು ಎಂದು ಮೃತ ಯುವಕನ ಸಹೋದರ ಯುವತಿಯ ಕುಟುಂಬಸ್ಥರ ವಿರುದ್ಧ ಆರೋಪ ಮಾಡಿದ್ದಾರೆ. ಘಟನೆ ಸಂಬಂಧ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಜಯಪುರ ಎಸ್ಪಿ ಅನುಪಮ್ ಅಗರ್ವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ಡಬಲ್ ಮರ್ಡಡರ್ ಮಾಡಿದ ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಒಟ್ಟಿನಲ್ಲಿ ಬದುಕಿನೊದಕ್ಕೂ ಜೊತೆಯಾಗಿ ಬದುಕಿದ್ದ ಈ ಪ್ರೇಮ ಹಕ್ಕಿಗಳು ಸಾವಿನಲ್ಲೂ ಜೊತೆಯಾಗಿದ್ದಾರೆ. ಇವರ ಅಮರ ಪ್ರೀತಿ ಇಂತಹ ದುರಂತ ಅಂತ್ಯ ಕಂಡಿದ್ದು ಮಾತ್ರ ವಿಪರ್ಯಾಸ. ಜಾತಿ-ಧರ್ಮದ ಅಮಲು ಮನವನ್ನ ಎಷ್ಟರ ಮಟ್ಟಿಗೆ ಆವರಿಸಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಯಾಕಂದ್ರೆ ಆ ಹೆತ್ತವರಿಗೆ ಮಗಳಿಗೆ ಬುದ್ದಿ ಹೇಳಿ ಸರಿ ದಾರಿಗೆ ತರಬೋದಿತ್ತು. ಮಗಳು ದಾರಿಗೆ ಬರಲ್ಲವೆಂದು ಗೊತ್ತಾದಾಗ ಆಕೆಯನ್ನು ಬೇರೆರೀತಿಯಲ್ಲಿ ಓಲೈಸಬಹುದಿತ್ತು. ಪ್ರೀತಿ ಹೆಚ್ಚಾಗಬೇಕಿದ್ದ ಕುಟುಂಬಗಳ ನಡುವೆ ಇದೀಗ ದ್ವೇಷ ಹುಟ್ಟಿದ್ದು, ಎರೆಡು ಕುಟುಂಬಗಳ ಕುಡಿಗಳು ಬಲಿಯಾಗಿದ್ದಾರೆ.

The post ರಾಜ್ಯದಲ್ಲಿ ಮತ್ತೆ ಬೆಚ್ಚಿ ಬೀಳಿಸಿದ ಮರ್ಯಾದ ಹತ್ಯೆ.. ಮಟ ಮಟ ಮಧ್ಯಾಹ್ನ ನಡೀತು ಡಬಲ್ ಮರ್ಡರ್ appeared first on News First Kannada.

Source: newsfirstlive.com

Source link