ಬೆಂಗಳೂರು: ಕೊರೊನಾ ಎರಡನೇ ಅಲೆಯ ತೀವ್ರತೆಗೆ ಬ್ರೇಕ್ ಹಾಕಲು ಸರ್ಕಾರ ಲಾಕ್‍ಡೌನ್ ಮೊರೆ ಹೋಗಿದೆ. ಆದರೂ ಕೊರೊನಾ ಪಾಸಿಟಿವಿಟಿ ಪ್ರಮಾಣ ಹಾಗೂ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲಾಕ್‍ಡೌನ್ ವಿಸ್ತರಣೆ ಮಾಡುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.

ನಗರದ ನಂದಿನಿ ಲೇಔಟ್‍ನಲ್ಲಿ ಅಬಕಾರಿ ಸಚಿವ ಗೋಪಾಲಯ್ಯ ಅವರ ನೇತೃತ್ವದಲ್ಲಿ ಸ್ಥಾಪಿಸಲಾದ 80-ಬೆಡ್​ಗಳ ತಾತ್ಕಾಲಿಕ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸದಾನಂದಗೌಡ ಅವರು, ಮುಂಬೈ, ದೆಹಲಿ ಮಹಾನಗರಗಳಲ್ಲಿ ಲಾಕ್‍ಡೌನ್‍ನಿಂದಲೇ ಇಂದು ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಈಗ ಹೊಸದಾಗಿ ಬೆಂಗಳೂರಿನಲ್ಲೂ ಕೂಡ ಲಾಕ್‍ಡೌನ್ ಆದ ಬಳಿಕ ಚೈನ್ ಬ್ರೇಕ್ ಆಗುತ್ತಿರುವುದನ್ನು ನಾವು ಗಮನಿಸಬಹುದು. ಕೋವಿಡ್-19 ಎರಡನೇ ಅಲೆಯ ಸೋಂಕನ್ನು ಬ್ರೇಕ್ ಮಾಡುವುದು ಅಗತ್ಯವಿದೆ. ಹೀಗಾಗಿ, ಲಾಕ್‍ಡೌನ್ ವಿಸ್ತರಣೆ ಅನಿವಾರ್ಯ ಎಂದು ಪರೋಕ್ಷವಾಗಿ ತಿಳಿಸಿದರು.

ಅಲ್ಲದೇ ಕ್ಷೇತ್ರದಲ್ಲಿ ಕೋವಿಡ್ ಸೋಂಕಿತರಿಗೆ ಆಮ್ಲಜನಕ ಪೂರೈಕೆ ಸೇರಿದಂತೆ ಪೂರ್ಣಪ್ರಮಾಣದ ಗೃಹ ಶೂಶ್ರೆಷೆ ನೀಡುವ ಕಾರ್ಯವೂ ನಡೆದಿದೆ. ಸಚಿವರು ಮತ್ತವರ ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದರು.

The post ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಸ್ತರಣೆಯ ಅಗತ್ಯವಿದೆ- ಸದಾನಂದಗೌಡ appeared first on News First Kannada.

Source: newsfirstlive.com

Source link