ರಾಜ್ಯದಲ್ಲಿ ಮತ್ತೊಂದು ಹಗರಣ ಬಯಲಿಗೆ: ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಪೇಪರ್ ಲೀಕ್ ಮಾಡಿದ ತಂದೆ-ಮಗ | KPTCL Junior Assistant Posts exam paper leak in gadag


ಗದಗದ ಮುನ್ಸಿಪಲ್ ಕಾಲೇಜ್ ನಲ್ಲಿ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗಾಗಿ ಪರೀಕ್ಷೆ ನಡೆದಿತ್ತು. ಆದ್ರೆ ಗದಗದಲ್ಲಿಯೇ ಈ ಪರೀಕ್ಷಾ ಪತ್ರಿಕೆ ಲೀಕ್ ಆಗಿದೆ. ತಂದೆ-ಮಗನ ಸೇರಿಕೊಂಡು ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಮತ್ತೊಂದು ಹಗರಣ ಬಯಲಿಗೆ: ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಪೇಪರ್ ಲೀಕ್ ಮಾಡಿದ ತಂದೆ-ಮಗ

ಮಾರುತಿ ಸೋನಾವನೆ ಮತ್ತು ಅವರ ಮಗ ಸಮೀತ ಕುಮಾರ್

ಗದಗ: ಕಲಬುರಗಿಯಲ್ಲಿ ಪಿಎಸ್ಐ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿತ್ತು(PSI Recruitment Scam). ಅದೇ ರೀತಿ ಈಗ ರಾಜ್ಯದಲ್ಲಿ ಮತ್ತೊಂದು ಭಾರೀ ಪರೀಕ್ಷಾ ಅಕ್ರಮ ಬಯಲಾಗಿದೆ. ಪಿಎಸ್ಐ ಪರೀಕ್ಷೆಯ ಹಗರಣ ಮಾಸುವ ಮುನ್ನವೇ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗಾಗಿ(KPTCL Junior Assistant) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇತೃತ್ವದಲ್ಲಿ ನಡೆದಿದ್ದ ಪರೀಕ್ಷೆ ಪತ್ರಿಕೆ ಲೀಕ್ ಆಗಿದೆ.

ಗದಗದ ಮುನ್ಸಿಪಲ್ ಕಾಲೇಜ್ ನಲ್ಲಿ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗಾಗಿ ಪರೀಕ್ಷೆ ನಡೆದಿತ್ತು. ಆದ್ರೆ ಗದಗದಲ್ಲಿಯೇ ಈ ಪರೀಕ್ಷಾ ಪತ್ರಿಕೆ ಲೀಕ್ ಆಗಿದೆ. ತಂದೆ-ಮಗನ ಸೇರಿಕೊಂಡು ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಮುನಿಸಿಪಲ್ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಮತ್ತು ಅವರ ಮಗ ಸಮೀತ ಕುಮಾರ್ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದಾರೆ.

ಮಗ ಸಮೀತಕುಮಾರ್ ಪತ್ರಕರ್ತನ ಸೋಗಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ ಕೊಟ್ಟು ಮೊಬೈಲ್ ಮೂಲಕ ಪ್ರಶ್ನೆ ಪತ್ರಿಕೆ ಸೆರೆ ಹಿಡಿದಿದ್ದಾನೆ. ರಾಜ್ಯದ ಬೇರೆ ಬೇರೆ ಕಡೆ ಪ್ರಶ್ನೆ ಪತ್ರಿಕೆ ಕಳಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಬೆಳಗಾವಿ ಸೈಬರ್ ಕ್ರೈಮ್ ಪೊಲೀಸರು ಮೊಬೈಲ್ ಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ತಂದೆ-ಮಗನನ್ನು ಬಂಧಿಸಿ, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಸೈಬರ್ ಪೊಲೀಸರು, ಕಾಲೇಜ್ ಪ್ರಾಚಾರ್ಯ ಕುಲಕರ್ಣಿ ಅವರನ್ನು ವಿಚಾರಣೆ ನಡೆಸಿದ್ದು ವಿಚಾರಣೆ ವೇಳೆ ಪ್ರಾಚಾರ್ಯರ ಕಣ್ಣೀರಿಟ್ಟಿದ್ದಾರೆ. 2022, ಆಗಸ್ಟ್ 7ರ ಭಾನುವಾರದಂದು ಗದಗ-ಬೆಟಗೇರಿ ಅವಳಿ ನಗರದಲ್ಲಿ 21 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಆ ಪೈಕಿ ಮುನ್ಸಿಪಲ್ ಕಾಲೇಜ್ ನಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಪ್ರಶ್ನೆ ಪತ್ರಿಕೆ ಲಿಂಕ್ ಆಗಿರುವ ಜಾಡು ಹಿಡಿದುಕೊಂಡು ಬಂದ ಬೆಳಗಾವಿ ಪೊಲೀಸರು ಭಾರಿ ಶೋಧ ನಡೆಸುತ್ತಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.