ಮೈಸೂರು: ಕಾವೇರಿ ನಿವಾಸ ವಾರ್ ರೂಂ ರೀತಿ ಕೆಲಸ ಮಾಡುತ್ತಿದೆ ಅಂತ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ  ಹೇಳಿದ್ದಾರೆ.

ಕೊರೊನಾ ಮಹಾಮಾರಿಯ ಅಬ್ಬರದ ಕುರಿತಾಗಿ ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸ್ಥಿತಿಗತಿ ಏನು ಅಂತ ಅವಲೋಕನ ಮಾಡಲು ಸಭೆ ಮಾಡಿದ್ದೇವೆ. ರಾಜ್ಯಾದ್ಯಂತ ಕೋವಿಡ್ ಮ್ಯೂಟೆಂಟ್ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಮೈಸೂರಿನಲ್ಲಿ ಕೋವಿಡ್ ಹತೋಟಿಯಲ್ಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಎಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೂ ಸಹಕಾರ ಕೇಳಿದ್ದೇವೆ. ಅವರಿಂದಲೂ ಒಳ್ಳೆಯ ಸ್ಪಂದನೆ ಸಿಕ್ಕಿದೆ. ರಾಜ್ಯಾದ್ಯಂತ ಯುದ್ಧ ರೀತಿಯ ವಾತಾವರಣ ಇದೆ. ಈ ಸಂದರ್ಭದಲ್ಲಿ ಆರೋಪ ಪ್ರತ್ಯಾರೋಪ ಸರಿಯಲ್ಲ. ಕಾವೇರಿ ಅತಿಥಿ ಗೃಹ ವಾರ್ ರೂಂ ರೀತಿ ಕೆಲಸ ಮಾಡುತ್ತಿದೆ. ಖುದ್ದು ಮುಖ್ಯಮಂತ್ರಿಗಳು ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಸರ್ಕಾರ ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ರು.

ಇನ್ನು ಇದೇ ವೇಳೆ ಮೇ ತಿಂಗಳಿನಲ್ಲಿ ಸಿಎಂ ಬದಲಾವಣೆ ಮಾಡಲಾಗುತ್ತೆ ಅನ್ನೋ ಮಾತುಗಳು ಕೇಳಿಬಂದಿರೋ ಬಗ್ಗೆ ಪ್ರಶ್ನಿಸಿದ್ದಕ್ಕೆ ವಿಜಯೇಂದ್ರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

The post ರಾಜ್ಯದಲ್ಲಿ ಯುದ್ಧದ ವಾತಾವರಣ, ಕಾವೇರಿ ನಿವಾಸ ವಾರ್ ರೂಮ್​ನಂತೆ ಕೆಲಸ ಮಾಡ್ತಿದೆ- ವಿಜಯೇಂದ್ರ appeared first on News First Kannada.

Source: newsfirstlive.com

Source link