ಬೆಂಗಳೂರು: ರಾಜ್ಯದಲ್ಲಿ ಮತ್ತೆ 14 ದಿನಗಳ ಕಾಲ ಲಾಕ್​ಡೌನ್ ವಿಸ್ತರಣೆ ಮಾಡುವಂತೆ ತಜ್ಞರು ಶಿಫಾರಸು ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಜೂನ್ 7ರವರೆಗೂ ಲಾಕ್​ಡೌನ್ ಜಾರಿಯಲ್ಲಿದೆ. ಸೋಂಕಿನ ಪ್ರಮಾಣ ಇಳಿಕೆ, ಮರಣ ಪ್ರಮಾಣದಲ್ಲಿ ‌ಇಳಿಕೆಯಾಗದ ಕಾರಣ ಮತ್ತೆ 14 ದಿನ ಲಾಕ್​ಡೌನ್ ವಿಸ್ತರಣೆ ಮಾಡಲು ತಜ್ಞರ ಸಮಿತಿ ಶಿಫಾರಸು ಮಾಡಿದೆ ಎನ್ನಲಾಗಿದೆ.

ತಜ್ಞರು ಮಾಡಿರುವ ಶಿಫಾರಸುಗಳನ್ನ ಆಧರಿಸಿ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಇಂದು ಸಭೆ ನಡೆಸಲಿದ್ದಾರೆ. ಟಾಸ್ಕ್ ಪೋರ್ಸ್ ಸದಸ್ಯರ ಜೊತೆಗೆ ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳ ಅನಿಸಿಕೆ ಅಭಿಪ್ರಾಯ ಕೂಡ ಸಂಗ್ರಹ ಆಗಲಿದೆ. ಇದಾದ ಬಳಿಕ ಕೋವಿಡ್ 19 ಉಸ್ತುವಾರಿಗಳ ಜೊತೆಗೆ ಸಿಎಂ ಸಮಾಲೋಚನೆ ಮಾಡಲಿದ್ದಾರೆ. ಆ ಬಳಿಕ ಲಾಕ್​ಡೌನ್ ವಿಸ್ತರಣೆಯೋ? ಸಡಿಲಗೊಳಿಸುವುದೋ ಅನ್ನೋದ್ರ ಬಗ್ಗೆ ನಿರ್ಧಾರವಾಗಲಿದೆ.

ಸದ್ಯ ತಾಂತ್ರಿಕ ಸಲಹಾ ಸಮತಿಯ ತಜ್ಞರು ನೀಡಿರುವ ಶಿಫಾರು ಕೈ ಸೇರಿದೆ. ಅಕಸ್ಮಾತ್ ಮತ್ತೆ 14 ದಿನ ಲಾಕ್​​ಡೌನ್ ವಿಸ್ತರಣೆ ಮಾಡಿದ್ರೆ ಜೂನ್ 21ರವರೆಗೂ‌ ಲಾಕ್​ಡೌನ್ ಇರಲಿದೆ.

The post ರಾಜ್ಯದಲ್ಲಿ ಲಾಕ್​ಡೌನ್ ಸಡಿಲಿಕೆಯೋ, ವಿಸ್ತರಣೆಯೋ? ತಜ್ಞರ ಶಿಫಾರಸು ಇಲ್ಲಿದೆ appeared first on News First Kannada.

Source: newsfirstlive.com

Source link