ರಾಜ್ಯದಲ್ಲಿ ವಕ್ಫ್​​​ ಬೋರ್ಡ್​ಗೆ ಸೇರಿದ ಆಸ್ತಿ ಜಾಸ್ತಿ ಇದೆ : ವಕ್ಫ್ ಬೋರ್ಡ್​ ಅಧ್ಯಕ್ಷ ಶಾಫಿ ಸಅದಿ | Waqf Board Chairman Shafi Saadi press meet in Mangalore


ರಾಜ್ಯದಲ್ಲಿ ವಕ್ಫ್​​​ ಬೋರ್ಡ್​ಗೆ ಸೇರಿದ ಆಸ್ತಿ ರಕ್ಷಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಮಂಗಳೂರಿನಲ್ಲಿ ವಕ್ಫ್ ಬೋರ್ಡ್​ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ.

ರಾಜ್ಯದಲ್ಲಿ ವಕ್ಫ್​​​ ಬೋರ್ಡ್​ಗೆ ಸೇರಿದ ಆಸ್ತಿ ಜಾಸ್ತಿ ಇದೆ : ವಕ್ಫ್ ಬೋರ್ಡ್​ ಅಧ್ಯಕ್ಷ ಶಾಫಿ ಸಅದಿ

ಕರ್ನಾಟಕ ವಕ್ಫ್​​​ ಬೋರ್ಡ್​

ದಕ್ಷಿಣ ಕನ್ನಡ: ರಾಜ್ಯದಲ್ಲಿ ವಕ್ಫ್​​​ ಬೋರ್ಡ್​ಗೆ ಸೇರಿದ ಆಸ್ತಿ ರಕ್ಷಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಮಂಗಳೂರಿನಲ್ಲಿ ವಕ್ಫ್ ಬೋರ್ಡ್​ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ. ಅನ್ವರ್​ ಮಾಣಿಪ್ಪಾಡಿ ವರದಿಯ ಮಾಹಿತಿಯನ್ನು ಪಡೆದಿದ್ದೇವೆ. ಬೀದರ್​​, ಬೆಂಗಳೂರು, ಕಲಬುರಗಿಯಲ್ಲಿ ವಕ್ಫ್​ ಬೋರ್ಡ್​ಗೆ ಸೇರಿದ ಹೆಚ್ಚು ಆಸ್ತಿ ಇದೆ. ಜಾಗ ಕಬಳಿಕೆ ಆಗದಂತೆ ಕಾಂಪೌಂಡ್ ನಿರ್ಮಾಣ ಮಾಡುತ್ತೇವೆ. ಜಿಲ್ಲಾ ವಕ್ಫ್​​ ಸಲಹಾ ಸಮಿತಿ ರಚನೆ ನೆನೆಗುದಿಗೆ ಬಿದ್ದಿದೆ. ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ಗಟ್ಟಿಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಸರ್ಕಾರ, ವಕ್ಫ್ ಬೋರ್ಡ್​ ನಡುವೆ ಸಂಘರ್ಷ ಇದೆ. ಸಚಿವೆ ಶಶಿಕಲಾ ಜತೆ ಚರ್ಚಿಸಿ ಸಮಸ್ಯೆ ಇತ್ಯರ್ಥಗೊಳಿಸಿದ್ದೇವೆ. ಸದ್ಯ 26 ಜಿಲ್ಲೆಗಳಲ್ಲಿ ವಕ್ಫ್ ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ ಎಂದು ಹೇಳಿದರು.

ನಮ್ಮ ಹಳೆಯ ರಾಜರುಗಳು ಎಲ್ಲಾ ದೇವಸ್ಥಾನಗಳಿಗೆ ಜಾಗ ಕೊಟ್ಟ ಹಾಗೆ ಮುಸ್ಲಿಂ ಸಮುದಾಯಕ್ಕೂ ಜಾಗ ಕೊಟ್ಟಿದ್ದಾರೆ. ಹೀಗಾಗಿಯೇ ನಮ್ಮ ರಾಜ್ಯದಲ್ಲಿ ವಕ್ಫ್ ಆಸ್ತಿ ಜಾಸ್ತಿ ಇದೆ. ಕೇರಳ ಮತ್ತು‌ ತಮಿಳುನಾಡಿನಲ್ಲಿ ಇಲ್ಲಿರುವಷ್ಟು ಆಸ್ತಿ ಇಲ್ಲ. ಟಿಪ್ಪು ಸುಲ್ತಾನ್, ಆದಿಲ್ ಶಾ, ಹೈದರ್ ಆಲಿ ಕಾರಣಕ್ಕೆ ಸಾಕಷ್ಟು ಆಸ್ತಿ ಇದೆ. ಹಳೆಯ ತಲೆಮಾರು ಅದನ್ನ ರಕ್ಷಣೆ ಮಾಡುವ ನಿಟ್ಟಿನಲ್ಲಿ ‌ಸೋತಿದೆ‌ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.