
ರಾಜ್ಯದಲ್ಲಿ ವರುಣನ ಆರ್ಭಟ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಲಿನ ತುದೂರು ಬಳಿ ಗದ್ದೆಯ ಹೊಂಡದಲ್ಲಿ ಕಾಲು ಜಾರಿ ಹೊಂಡಕ್ಕೆ ಬಿದ್ದು ಶಂಕರ್(53) ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ಗದ್ದೆಗೆ ತೆರಳಿದ್ದಾಗ ಕಾಲು ಜಾರಿ ಬಿದ್ದು ಶಂಕರ್ ಮೃತಪಟ್ಟಿದ್ದಾರೆ.
ದಾವಣಗೆರೆ: ರಾಜ್ಯದಲ್ಲಿ ಸುರಿಯುತ್ತಿರೋ ಮುಂಗಾರು ಪೂರ್ವ ಮಳೆ ರೌದ್ರನರ್ತನ ಮಾಡ್ತಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಮಹಾಮಳೆಗೆ ಮೊದಲ ಬಲಿಯಾಗಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬನ್ಮಿಕೋಡು ಗ್ರಾಮದಲ್ಲಿ ಮಳೆಯಿಂದ ಹುಲ್ಲಿನ ಬಣವೆ ಕುಸಿದು ರೈತ ರೇವಣಪ್ಪ(50) ಮೃತಪಟ್ಟಿದ್ದಾರೆ. ಜಾನುವಾರುಗಳಿಗೆ ಹುಲ್ಲು ತರಲು ಹೋಗಿದ್ದಾಗ ರೈತ ಸಾವನ್ನಪ್ಪಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದೇವರಬೆಳಕೆರೆ ಪಿಕ್ ಅಪ್ ಡ್ಯಾಂ ಹಿನ್ನೀರಿನಲ್ಲಿ ನೂರಾರು ಎಕರೆ ಪ್ರದೇಶ ಜಲಾವೃತಗೊಂಡಿದೆ. ಕೆಲ ತೋಟದ ಮನೆಗಳ ಮುಳುಗಿದ್ದು, ಜನರೆಲ್ಲ ಮನೆ ತೊರೆದಿದ್ದಾರೆ. ಆದ್ರೆ, 2 ದಿನಗಳಿಂದ ಮನೆಯೊಂದ್ರಲ್ಲಿ ನಾಲ್ಕು ನಾಯಿ ಮರಿಗಳು ಸಿಲುಕಿದ್ವು ವಿದ್ಯುತ್ ಪಂಪ್ಸೆಟ್ ಮೇಲೆ ಕೂತಿದ್ದ ನಾಯಿ ಹಾಗೂ ಮರಿಗಳನ್ನ ತೆಪ್ಪದ ಮೂಲಕ ರಕ್ಷಿಸಲಾಯ್ತು. ಇನ್ನು, ಮಳೆ ಅಬ್ಬರಕ್ಕೆ ಹರಿಹರದ ಭಾನುವಳ್ಳಿ-ಏಕ್ಕೆಗೊಂದ ಬ್ರಿಡ್ಜ್ ಕೊಚ್ಚಿಹೋಗಿದೆ. ಕೋಟೆಹಾಳ್ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು ಜನ ಪರದಾಡ್ತಿದ್ದಾರೆ.
ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗದಲ್ಲೂ ವರುಣಾರ್ಭಟ
ಇವತ್ತು ಬೆಳಗ್ಗೆ ಮತ್ತೆ ಅಬ್ಬರಿಸಿದ ವರುಣ ಧಾರವಾಡ ಜಿಲ್ಲೆಯ ಜನಜೀವನವನ್ನೇ ಅಸ್ತವ್ಯಸ್ತ ಮಾಡಿದೆ. ಧಾರವಾಡ ನಗರದ ಹಾವೇರಿಪೇಟ ಬಡಾವಣೆ, ಶುಕ್ಲಾ ವಠಾರ, ಕಂಠಿಗಲ್ಲಿ ಸೇರಿದಂತೆ ಹತ್ತಾರು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಶುಕ್ಲಾ ವಠಾರದ 9 ಮನೆಗಳಿಗೆ ಅಕ್ಷರಶಃ ಜಲದಿಗ್ಬಂಧನವಾಗಿತ್ತು. ಇನ್ನು ಧಾರವಾಡ ತಾಲೂಕಿನ ಮುಗದ ಗ್ರಾಮದ ಬಳಿ ಹೊಲಗಳೇ ಕೆರೆಯಂತಾಗಿವೆ. ಹಳ್ಳಗಳು ಭೋರ್ಗರೆಯುತ್ತಿರೋದ್ರಿಂದ ಕುಂದಗೋಳ ತಾಲೂಕಿನ ಮೂರು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಬ್ರಿಡ್ಜ್ ಮುಳುಗಡೆಯಾಗಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಚಿಕ್ಕನರ್ತಿ, ಹಿರೆನರ್ತಿ, ಯರಗುಪ್ಪಿ ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಕಾಲು ಜಾರಿ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವು
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಲಿನ ತುದೂರು ಬಳಿ ಗದ್ದೆಯ ಹೊಂಡದಲ್ಲಿ ಕಾಲು ಜಾರಿ ಹೊಂಡಕ್ಕೆ ಬಿದ್ದು ಶಂಕರ್(53) ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ಗದ್ದೆಗೆ ತೆರಳಿದ್ದಾಗ ಕಾಲು ಜಾರಿ ಬಿದ್ದು ಶಂಕರ್ ಮೃತಪಟ್ಟಿದ್ದಾರೆ. ಗದ್ದೆಗೆ ತೆರಳಿದ್ದ ಶಂಕರ್ ಬೆಳಗ್ಗೆಯಾದರೂ ಮನೆಗೆ ಬಂದಿರಲಿಲ್ಲ. ಕುಟುಂಬಸ್ಥರು ಗದ್ದೆಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.