ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್​​ಡಿಒ) ವತಿಯಿಂದ ರಾಜ್ಯದಲ್ಲಿ ಮೂರು ವೈದ್ಯಕೀಯ ಆಕ್ಸಿಜನ್​​​ ಘಟಕಗಳು ಶೀಘ್ರವೇ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ. ಈ ಕುರಿತು ಸಂಸದ ಪಿಸಿ ಮೋಹನ್​ ಟ್ವೀಟ್​ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಆಕ್ಸಿಜನ್​​ ಘಟಕಗಳ ಕೆಲಸವನ್ನು ಮಾಡುತ್ತಿದ್ದು, ಈಗಾಗಲೇ ಘಟಕಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂಬ ಮಾಹಿತಿ ಲಭಿಸಿದೆ. ಸದ್ಯ ಪಿಸಿ ಮೋಹನ್​​ ಅವರು ನೀಡಿರುವ ಮಾಹಿತಿಯ ಅನ್ವಯ, ರಾಜ್ಯದಲ್ಲಿ ಕೊಪ್ಪಳದ ಇನ್​​ಸ್ಟಿಟ್ಯೂಟ್​ ಆಫ್​​ ಮೆಡಿಕಲ್​ ಸೈನ್ಸಸ್, ಕಲಬುರಗಿಯ ಇಎಸ್​​ಐ ಮೆಡಿಕಲ್​ ಕಾಲೇಜು, ಬೆಂಗಳೂರಿನ ಸಿ.ವಿ.ರಾಮನ್​ ಆಸ್ಪತ್ರೆಯಲ್ಲಿ ಆಕ್ಸಿಜನ್​ ಘಟಕಗಳನ್ನು ಅಳವಡಿಸಲಾಗುತ್ತದೆ. ಈ ಘಟಕಗಳು ಕಡಿಮ ದರದಲ್ಲಿ ಆಕ್ಸಿಜನ್​​ ಉತ್ಪಾದನೆ ಮಾಡಲಿದೆ.

ಆಕ್ಸಿಜನ್​ ಘಟಕಗಳಲ್ಲಿ ಡಿಆರ್​​ಡಿಒ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನವನ್ನು ಬಳಸಲಾಗಿದೆ. ಇದನ್ನೂ ಲಘು ಯುದ್ಧ ವಿಮಾನವಾದ ತೇಜಸ್​​​ನಲ್ಲಿ ಆಕ್ಸಿಜನ್​ ಉತ್ಪಾದಿಸಲು ಅಭಿವೃದ್ಧಿ ಪಡಿಸಲಾಗಿತ್ತು. ದಿನಕ್ಕೆ 195 ಸಿಲಿಡಂರ್​ ಆಕ್ಸಿಜನ್​​ ಉತ್ಪಾಧಿಸುವ ಸಾಮರ್ಥ್ಯವನ್ನು ಹೊಂದಿದೆ.

The post ರಾಜ್ಯದಲ್ಲಿ ಶೀಘ್ರವೇ ಕಾರ್ಯನಿರ್ವಹಿಸಲಿದೆ ಡಿಆರ್​​​ಡಿಒದ 3 ಆಕ್ಸಿನ್ ತಯಾರಿಕಾ ಘಟಕ appeared first on News First Kannada.

Source: newsfirstlive.com

Source link