ಬಳ್ಳಾರಿ: ಕೊರೊನಾ ಸೋಂಕು ನಿರೋಧಕ ಆಯುರ್ವೇದ ಔಷಧಿ ಪಡೆಯಲು ಜನ ಮುಗಿಬಿದ್ದಿದ್ದು, ರಾಜ್ಯದಲ್ಲಿ ಆನಂದಯ್ಯ ಅವರ ಔಷಧಿ ಹಂಚಿಕೆ ಆಗುತ್ತಿದೆ. ಹೀಗಾಗಿ ಸಾವಿರಾರು ಜನ ಆಗಮಿಸಿ ಕೊರೊನಾಗೆ ಆಯುರ್ವೇದ ಔಷಧಿ ಪಡೆಯುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಆನಂದಯ್ಯನ ಔಷಧಿ ವಿತರಣೆ ಆಗುತ್ತಿದೆ. ಸುಮಾರು 500 ಕುಟುಂಬಗಳಿಗೆ ಉಚಿತವಾಗಿ ಔಷಧಿ ವಿತರಣೆ ಮಾಡಲಾಗಿದ್ದು, ಹಂಪಿಯ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯವರಿಂದ ಔಷಧಿ ವಿತರಣೆ ಮಾಡಲಾಗುತ್ತಿದೆ.

ಆನಂದಯ್ಯನವರ ಔಷಧಿಗೆ ಆಂಧ್ರ ಪ್ರದೇಶದ ಆಯುಷ್ ಇಲಾಖೆ ಅನುಮತಿ ನೀಡಿದೆ. ಹೀಗಾಗಿ ಕಮಲಾಪುರದ ಶ್ರೀ ನಗರೇಶ್ವರ ಆಂಜನೇಯ ದೇವಾಲಯದಲ್ಲಿ ಶ್ರೀಗಳು ವಿತರಣೆ ಮಾಡಿದ್ದಾರೆ. ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿ ಇದಾಗಿದ್ದು, ಅಂದಾಜು 5 ಲಕ್ಷ ರೂ. ಮೌಲ್ಯದ ಆಯುರ್ವೇದ ಔಷಧಿಯನ್ನು ಆನಂದಯ್ಯ ಅವರು ಉಚಿತವಾಗಿ ನೀಡಿದ್ದಾರೆ. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣ ಪಟ್ಟಣಂನಲ್ಲಿ ಆನಂದಯ್ಯ ಅವರು ನಾಟಿ ವೈದ್ಯರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಔಷಧಿ ಭಾರೀ ಸದ್ದು ಮಾಡಿತ್ತು.

The post ರಾಜ್ಯದಲ್ಲಿ ಹಂಚಿಕೆಯಾಗುತ್ತಿದೆ ಆನಂದಯ್ಯರ ಕೊರೊನಾ ಆಯುರ್ವೇದ ಔಷಧಿ- ಮುಗಿಬಿದ್ದ ಜನ appeared first on Public TV.

Source: publictv.in

Source link