ಬೆಂಗಳೂರು: ರಾಜ್ಯದಲ್ಲಿ ಹಂತ ಹಂತವಾಗಿ ಅನ್​ಲಾಕ್ ಮಾಡುತ್ತೇವೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆದಿದೆ ಅಂತ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಒಮ್ಮೆಲೆ ಅನ್​ಲಾಕ್ ಮಾಡಿದ್ದರಿಂದ ಸಮಸ್ಯೆ ಆಯ್ತು. ಈ ಬಾರಿ ಆ ರೀತಿ ಆಗದಂತೆ ಹಂತ ಹಂತವಾಗಿ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು. ಇಂದಿನಿಂದ ನೋಂದಣಿ ಕಚೇರಿಗಳು ಕಾರ್ಯಾರಂಭವಾಗಿವೆ. ಕೊರೊನಾ ನಿಯಮಗಳನ್ನ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ರು.

ಅನಾಥ ಅಸ್ಥಿಗಳ ವಿಸರ್ಜನೆ
ಇನ್ನು ಕೊರೊನಾದಿಂದ ಮೃತಪಟ್ಟವರ ಒಟ್ಟು ಒಂದೂವರೆ ಸಾವಿರ ಅನಾಥ ಚಿತೆಗಳು ಇದ್ದವು. ಈ ಪೈಕಿ 566 ಅಸ್ಥಿಯನ್ನ ಸಾಮೂಹಿಕವಾಗಿ ವಿಸರ್ಜಿಸಲಾಗಿದೆ. ಉಳಿದ ಅನಾಥ ಅಸ್ಥಿಗಳನ್ನ ಬೆಂಗಳೂರು ನಗರ ಜಿಲ್ಲಾಧಿಕಾರಿಗಳೇ ಇದೇ ತಿಂಗಳು 16 ಇಲ್ಲವೇ 17ರಂದು ವಿಸರ್ಜಿಸಲಿದ್ದಾರೆ. ಸಾಮೂಹಿಕ ವಿಸರ್ಜನೆ ಮಾಡಿರುವ ಅಸ್ಥಿಗಳ ಕರ್ಮಾಂತರ ಕ್ರಿಯೆಯನ್ನ ಕೊಡಗು- ಕೇರಳ ಗಡಿಭಾಗದ ವಿಷ್ಣುಪಾದದ ಬಳಿ ನಡೆಸಲಾಗುವುದು ಎಂದು ತಿಳಿಸಿದ್ರು.

 

The post ರಾಜ್ಯದಲ್ಲಿ ಹಂತ ಹಂತವಾಗಿ ಅನ್​​ಲಾಕ್.. ಸಚಿವ ಆರ್​. ಅಶೋಕ್ ಹೇಳಿದ್ದೇನು? appeared first on News First Kannada.

Source: newsfirstlive.com

Source link