ಬೆಂಗಳೂರು: ರಾಜ್ಯದಲ್ಲಿ ಇಂದು 31,454 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,22,286 ಆರ್​ಟಿಪಿಸಿಆರ್ ಟೆಸ್ಟ್​ಗಳು ಸೇರಿದಂತೆ 1,53, 740 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಕಳೆದ 24 ಗಂಟೆಗಳಲ್ಲಿ 2,290 ಮಂದಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 28,67,158ಕ್ಕೆ ಏರಿಕೆಯಾಗಿದೆ.

ಇಂದು 3,045 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 27,93,498 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆದಂತಾಗಿದೆ. ಇಂದು ಸೋಂಕಿನಿಂದಾಗಿ 68 ಮಂದಿ ಸಾವನ್ನಪ್ಪಿದ್ದು ಈವರೆಗೆ 35,731 ಮಂದಿ ಕೊರೊನಾಗೆ ಬಲಿಯಾದಂತಾಗಿದೆ. ಸದ್ಯ ರಾಜ್ಯದಲ್ಲಿ 37,906 ಆ್ಯಕ್ಟಿವ್ ಕೇಸ್​ಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.

The post ರಾಜ್ಯದಲ್ಲಿ 1.48%ಗೆ ಇಳಿದ ಪಾಸಿಟಿವಿಟಿ ರೇಟ್; ಇಂದು 2,290 ಮಂದಿಗೆ ಸೋಂಕು ದೃಢ appeared first on News First Kannada.

Source: newsfirstlive.com

Source link