ಬೆಂಗಳೂರು: ರಾಜ್ಯದಲ್ಲಿ ಇಂದು 26,867 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,07,050 ಆರ್​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,33,917 ಕೊರೊನಾ ಪರೀಕ್ಷೆಗಳನ್ನ ನಡೆಸಲಾಗಿದೆ. ಈ ಪೈಕಿ ಇಂದು ರಾಜ್ಯದಲ್ಲಿ 2,576 ಮಂದಿಗೆ ಕೊರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 28,37,206 ಕ್ಕೆ ಏರಿಕೆಯಾಗಿದೆ.

ಇಂದು 5,933 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 27,04,755 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆದಂತಾಗಿದೆ. ಇಂದು 93 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ 34,836 ಮಂದಿ ಕೊರೊನಾಗೆ ಬಲಿಯಾದಂತಾಗಿದೆ. ಸದ್ಯ ರಾಜ್ಯದಲ್ಲಿ 97,592 ಆ್ಯಕ್ಟಿವ್ ಕೇಸ್​​ಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಹೇಳುತ್ತಿವೆ.

The post ರಾಜ್ಯದಲ್ಲಿ 1.92% ಗೆ ಇಳಿದ ಪಾಸಿಟಿವಿಟಿ ರೇಟ್: 2,576 ಮಂದಿಗೆ ಸೋಂಕು ದೃಢ appeared first on News First Kannada.

Source: newsfirstlive.com

Source link