ಬೆಂಗಳೂರು: ರಾಜ್ಯದಲ್ಲಿ 1,100 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಆಗುತ್ತೆ. ಅದನ್ನ ಬೇರೆ ರಾಜ್ಯಗಳಿಗೆ ಪೂರೈಕೆ ಮಾಡಲಾಗ್ತಿದೆ. ಆದ್ರೆ ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ನಮಗೇ ಸಿಗಬೇಕು ಅಂತ ಸಚಿವ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

ಇಂದು ನಗರದದಲ್ಲಿ ಮಾತನಾಡಿದ ಅವರು, ಆಕ್ಸಿಜನ್ ಸಪ್ಲೈ ಬಗ್ಗೆ ಸಿಎಂ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ಅಧಿಕಾರಿಗಳ ಜೊತೆಗೆ ಹಲವಾರು ಸಭೆ ಮಾಡಿದ್ದೇವೆ. ಕೈಗಾರಿಕಾ ಇಲಾಖೆ ಅಧಿಕಾರಿಗಳ ಜೊತೆಗೂ ಸಭೆ ನಡೆಸಲಾಯಿತು. ಆಕ್ಸಿಜನ್ ಸಪ್ಲೈ ಮಾನಿಟರಿಂಗ್ ಮಾಡಿದ್ದೇವೆ. ಪ್ರತಿ ಜಿಲ್ಲೆಗೆ ಪ್ರತಿದಿನ ಆಕ್ಸಿಜನ್ ಸಪ್ಲೈ ಮಾಡುತ್ತಿದ್ದೇವೆ ಎಂದರು.

ಕೇಂದ್ರದ ಸಹಾಯ ಕೂಡ ಪಡೆಯುತ್ತಿದ್ದೇವೆ. 1200ರಿಂದ 1400 ಮೆಟ್ರಿಕ್ ಟನ್ ಆಕ್ಸಿಜನ್​ಗೆ ಬೇಡಿಕೆ ಇದೆ. ಹೀಗಾಗಿ ಕೇಂದ್ರ ಸಚಿವರಾದ ಸದಾನಂದ ಗೌಡ ಮತ್ತು ಪ್ರಹ್ಲಾದ ಜೋಷಿ ಅವರ ಬಳಿ ಮಾತನಾಡುತ್ತೇವೆ. 1700 ಮೆಟ್ರಿಕ್ ಟನ್ ಬೇಕು. ರಾಜ್ಯದಲ್ಲಿ 1100 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಆಗುತ್ತೆ. ಅದನ್ನ ಗೋವಾ, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಕಡೆ ಸಪ್ಲೈ ಮಾಡುತ್ತೇವೆ. ಆದ್ರೆ ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ನಮ್ಮ ರಾಜ್ಯಕ್ಕೆ ಸಿಗಬೇಕು ಎಂದು ಹೇಳಿದ್ರು.

ಸಿಎಸ್​ಆರ್ ಫಂಡ್​​ನಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡಲು ದಾನಿಗಳು ಬರುತ್ತಿದ್ದಾರೆ. ಇವುಗಳನ್ನು ಗ್ರಾಮೀಣ ಭಾಗಕ್ಕೆ ಕಳಿಸುತ್ತಿದ್ದೇವೆ. ಜಿಂದಾಲ್ ಬಳಿ 1000 ಹಾಸಿಗೆಗಳು ಇರುವ ಆಸ್ಪತ್ರೆಯನ್ನ ಇವತ್ತು ಸಿಎಂ ಹಸ್ತಾಂತರ ಮಾಡುತ್ತಾರೆ. ಜಿಂದಾಲ್ ಅವರೇ ಆಕ್ಸಿಜನ್ ಬೇರ್ ಮಾಡಿ ನಮಗೆ ಕೊಡುತ್ತಿದ್ದಾರೆ. ನಾವು ಸಿಬ್ಬಂದಿಯನ್ನ ಮಾತ್ರ ಕೊಡುತ್ತಿದ್ದೇವೆ. ಆಕ್ಸಿಜನ್ ಅಭಾವ ನೀಗಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಅಧಿಕಾರಿಗಳಿಗೆ ಅಭಿನಂದನೆಗಳು. ಎಲ್ಲಾ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ್ರು.

ಇತ್ತೀಚೆಗೆ ಟ್ರೈನ್ ಮೂಲಕ ವೈಟ್ ಫೀಲ್ಡ್​, ಟಾಟಾ ನಗರದಿಂದ, ಖಲಿ ನಗರದಿಂದ ಸುಮಾರು ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದೆ. ಕೇಂದ್ರ ಸರ್ಕಾರದಿಂದ ರೀ ಅಲಾಕೇಶನ್ ಆಗುವವರೆಗೂ ನಾವು ಮ್ಯಾನೇಜ್ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರಕ್ಕೆ ಬೇಡಿಕೆ ಹೆಚ್ಚು ಇಟ್ಟಿದ್ದೇವೆ. ಆಂಧ್ರದ್ದು ರೀ ಅಲೊಕೇಶನ್ ಆಗುತ್ತದೆ ಎಂದರು.

ಸದಾನಂದ ಗೌಡ ಹಾಗೂ ಪ್ರಹ್ಲಾದ್ ಜೋಶಿ  ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೀವಿ. ಇನ್ನೂ ಹೆಚ್ಚಿನ ಆಕ್ಸಿಜನ್ ತರಿಸಿಕೊಳ್ಳಲು ಪ್ರಯತ್ನ ಮಾಡುತ್ತೇವೆ ಎಂದು ಶೆಟ್ಟರ್​ ತಿಳಿಸಿದ್ರು. ಇನ್ನು ಸುಪ್ರೀಂ ಕೋರ್ಟ್ನಲ್ಲಿ ಮಾಡಿರುವ ಅಬ್ಜರ್ವೇಶನ್ ಗೆ ನಾನು ಧನ್ಯವಾದ ಹೇಳುತ್ತೇವೆ. ಕೇಂದ್ರ ಸರ್ಕಾರ ಕೊಡುತ್ತಿರುವ ಆಕ್ಸಿಜನ್ನಲ್ಲಿ ಕಡಿಮೆ ಆಗಿಲ್ಲ. ನಮಗೆ ಬರಬೇಕಿರುವುದು ನಿಧಾನವಾಗಿ ಬರ್ತಿದೆ ಎಂದರು.

The post ರಾಜ್ಯದಲ್ಲಿ 1,100 MT ಆಕ್ಸಿಜನ್ ಉತ್ಪಾದನೆ ಆಗುತ್ತೆ, ಅದು ನಮಗೇ ಅಲಾಕೇಷನ್ ಆಗ್ಬೇಕು -ಶೆಟ್ಟರ್​​ appeared first on News First Kannada.

Source: newsfirstlive.com

Source link