ಬೆಂಗಳೂರು: ರಾಜ್ಯದಲ್ಲಿ ಕ್ಲೋಸ್ ಡೌನ್​ ಜಾರಿಯಲ್ಲಿದ್ದರೂ ಸೋಂಕು ಪ್ರಕರಣಗಳು ಕಡಿಮೆಯಾಗದ ಹಿನ್ನೆಲೆ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ, ಇಂದು ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ 14 ದಿನಗಳ ಕಂಪ್ಲೀಟ್ ಲಾಕ್​ಡೌನ್ ಘೋಷಣೆ ಮಾಡಿದ್ದಾರೆ.

ಮೇ 10 ರಿಂದ 24 ರವರೆಗೆ ಲಾಕ್​ಡೌನ್ ಜಾರಿಯಲ್ಲಿರಲಿದೆ..

ಕೈಗಾರಿಕೆಗಳು, ಹೋಟೆಲ್, ಪಬ್, ಬಾರ್​​ಗಳು ಬಂದ್ ಇರಲಿವೆ.

ಹೋಟೆಲ್​ಗಳಲ್ಲಿ ಪಾರ್ಸೆಲ್​ಗೆ ಅವಕಾಶವಿದೆ.

ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಓಡಾಟ ಇಲ್ಲ.

ಸರಕು ವಾಹನಗಳಿಗೆ ಮಾತ್ರ ಓಡಾಡಲು ಅವಕಾಶವಿದೆ.

ವಿವಾಹಗಳಲ್ಲಿ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.

ಕಟ್ಟಡ ಕಾಮಗಾರಿಗಳಿಗೆ ಅವಕಾಶವಿದೆ.

ವಿಮಾನ, ಟ್ರೈನ್​ಗಳಿಗೆ ಹೋಗುವವರು ಟಿಕೆಟ್ ಇದ್ದರೆ ಪ್ರಯಾಣಿಸಬಹುದು.

ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶವಿದೆ.

ಹಾಲಿನ ಬೂತ್​ಗಳಿಗೆ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಅವಕಾಶ.

ತಳ್ಳುಗಾಡಿಗಳಲ್ಲಿ ತರಕಾರಿ ವ್ಯಾಪಾರ ಮಾಡಲು ಅವಕಾಶವಿದೆ.

The post ರಾಜ್ಯದಲ್ಲಿ 14 ದಿನಗಳ ಕಂಪ್ಲೀಟ್ ಲಾಕ್​ಡೌನ್:​ ಸಿಎಂ ಬಿಎಸ್​ವೈ ಘೋಷಣೆ appeared first on News First Kannada.

Source: newsfirstlive.com

Source link