ಬೆಂಗಳೂರು: ರಾಜ್ಯಾದ್ಯಂತ ಇಂದು 24,969 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 99,525 ಆರ್​​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,24,494 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು ರಾಜ್ಯದಲ್ಲಿ 1,990 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 28,76,587ಕ್ಕೆ ಏರಿಕೆಯಾಗಿದೆ. ನಿನ್ನೆ ರಾಜ್ಯದಲ್ಲಿ ಒಟ್ಟು 1,913 ಪಾಸಿಟಿವ್ ಪ್ರರಕಣಗಳು ವರದಿಯಾಗಿದ್ದವು.

ಇಂದು 2,537 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಇಲ್ಲಿವರೆಗೆ ಒಟ್ಟು 28,06,933 ಮಂದಿ ಕೊರೊನಾದಿಂದ ಮುಕ್ತರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 45 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಒಟ್ಟು 35,989 ಮಂದಿ ಸೋಂಕಿಗೆ ಬಲಿಯಾದಂತಾಗಿದೆ. ರಾಜ್ಯದಲ್ಲಿ ಸದ್ಯ 36,642 ಆ್ಯಕ್ಟಿವ್ ಕೇಸ್​ಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶಗಳು ಹೇಳುತ್ತಿವೆ.

ಬೆಂಗಳೂರು ನಗರದಲ್ಲಿ 400 ಮಂದಿ ಸೋಂಕಿಗೊಳಗಾಗಿದ್ರೆ ದಕ್ಷಿಣ ಕನ್ನಡದಲ್ಲಿ 219, ಹಾಸನ 175, ಮೈಸೂರು 211, ಉಡುಪಿ 120, ಜಿಲ್ಲೆಯಲ್ಲಿ 170 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ.

The post ರಾಜ್ಯದಲ್ಲಿ 1,990 ಮಂದಿಗೆ ಕೊರೊನಾ ಪಾಸಿಟಿವ್; 36,642 ಆ್ಯಕ್ಟಿವ್ ಕೇಸ್ appeared first on News First Kannada.

Source: newsfirstlive.com

Source link