ರಾಜ್ಯದಲ್ಲಿ 2.87% ಪಾಸಿಟಿವಿಟಿ ರೇಟ್: 3,709 ಮಂದಿಗೆ ಕೊರೊನಾ ದೃಢ

ರಾಜ್ಯದಲ್ಲಿ 2.87% ಪಾಸಿಟಿವಿಟಿ ರೇಟ್: 3,709 ಮಂದಿಗೆ ಕೊರೊನಾ ದೃಢ

ಬೆಂಗಳೂರು: ರಾಜ್ಯಾದ್ಯಂತ ಇಂದು 42,694 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 86,405 ಆರ್​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,29,099 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 3,709 ಕೊರೊನಾ ಪಾಸಿಟಿವ್ ಕೇಸ್​​ಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಈ ಮೂಲಕ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 28,15,029ಕ್ಕೆ ಏರಿಕೆಯಾಗಿದೆ.

ಇಂದು 8,11 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೆ 26,62,250 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆದಂತಾಗಿದೆ. 139 ಮಂದಿ ಇಂದು ಸೋಂಕಿನಿಂದ ಗುಣಮುಖರಾಗದೇ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 34,164 ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 1,18,592 ಆ್ಯಕ್ಟಿವ್ ಕೇಸ್​​ಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಹೇಳುತ್ತಿವೆ.

ಬೆಂಗಳೂರು ನಗರವೊಂದರಲ್ಲೇ ಇಂದು 803 ಮಂದಿಗೆ ಕೊರೊನಾ ಸೋಂಕು ತಗುಲಿದ್ದು 26 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹಾಸನದಲ್ಲಿ 309, ದ.ಕನ್ನಡದಲ್ಲಿ 374, ಮೈಸೂರಿನಲ್ಲಿ 486, ತುಮಕೂರು ಜಿಲ್ಲೆಯಲ್ಲಿ 144 ಮಂದಿಗೆ ಸೋಂಕು ದೃಢವಾಗಿದೆ.

The post ರಾಜ್ಯದಲ್ಲಿ 2.87% ಪಾಸಿಟಿವಿಟಿ ರೇಟ್: 3,709 ಮಂದಿಗೆ ಕೊರೊನಾ ದೃಢ appeared first on News First Kannada.

Source: newsfirstlive.com

Source link