ಚಿಕ್ಕಬಳ್ಳಾಪುರ: ಕೊರೊನಾ ಮೂರನೇ ಅಲೆ ಎದುರಿಸಲು ಸರ್ಕಾರ ಸರ್ವ ಸನ್ನದ್ಧವಾಗಿದೆ. ಅದಕ್ಕೋಸ್ಕರ 2500 ಕೋಟಿ ರೂಪಾಯಿ ಮೀಸಲಿಡಲಾಗಿದೆ ಅಂತ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಆಕ್ಸಿಜನ್ ಕೊರತೆ ಎದುರಿಸಿರೋದ್ರಿಂದ ಮತ್ತೆ ಆ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೊವೀಡ್ ಲಸಿಕೆ ಉಚಿತವಾಗಿ ನೀಡಿರೋದ್ರಿಂದ 2000 ಕೋಟಿ ರೂಪಾಯಿ ಉಳಿತಾಯವಾಗಿದೆ. ಉಳಿತಾಯ ಹಣವನ್ನ ಕೊರೊನಾ ಮೂರನೇ ಅಲೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದರು.

ಮೂರನೇ ಅಲೆ ಕೇವಲ ಮಕ್ಕಳ ಮೇಲಷ್ಟೇ ಅಲ್ಲದೇ ಯುವಕರ ಮೇಲೂ ಪರಿಣಾಮ ಬೀರಲಿದೆ. ತುಮಕೂರು ಜಿಲ್ಲೆಯಲ್ಲೂ 18 ಸಾವಿರ ಮಕ್ಕಳಿಗೆ ಕೊರೊನಾ ತಗುಲಿತ್ತು. ಆದರೆ ಕೇವಲ ಶೇಕಡ 2ರಷ್ಟು ಮಾತ್ರ ಆಸ್ಪತ್ರೆಗಳಿಗೆ ದಾಖಲಾದರು. ಕೊರೊನಾ ಎರಡನೇ ಅಲೆಯಿಂದ ಆದ ಬಾಧೆಯಿಂದ ಎಚ್ಚೆತ್ತುಕೊಂಡಿದ್ದೇವೆ. ತಜ್ಞರ ವರದಿಯಂತೆ ಈಗಾಗಲೇ ಅಗತ್ಯ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಮಾಧುಸ್ವಾಮಿ ತಿಳಿಸಿದ್ರು.

The post ‘ರಾಜ್ಯದಲ್ಲಿ 3ನೇ ಕೊರೊನಾ ಅಲೆ ಎದುರಿಸಲು ₹2500 ಕೋಟಿ ಮೀಸಲು’ appeared first on News First Kannada.

Source: newsfirstlive.com

Source link