ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಸುಮಾರು 30 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಹಿಂಪಡೆಯಲು ಸಂಪುಟ ಉಪಸಮಿತಿ ನಿರ್ಧಾರ ಮಾಡಿದೆ.

ಸಚಿವ ಜೆಸಿ ಮಾಧುಸ್ವಾಮಿ
ಬೆಂಗಳೂರು: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ (Court) ವಿಚಾರಣೆಯಲ್ಲಿರುವ ಸುಮಾರು 30 ಕ್ಕೂ ಹೆಚ್ಚು ಅಪರಾಧ (Crime) ಪ್ರಕರಣಗಳನ್ನು ಹಿಂಪಡೆಯಲು ಸಂಪುಟ ಉಪಸಮಿತಿ ನಿರ್ಧಾರ ಮಾಡಿದೆ. ವಿಚಾರಣೆಯಲ್ಲಿರುವ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಪರಿಶೀಲಿಸಿ ಸಚಿವ ಸಂಪುಟಕ್ಕೆ ಸೂಕ್ತ ಶಿಫಾರಸು ಮಾಡುವ ಕುರಿತು ಇಂದು (ಜುಲೈ 2) ವಿಧಾನಸೌಧದಲ್ಲಿ ಕಾನೂನು ಸಚಿವ ಮಾಧುಸ್ವಾಮಿ (JC Madhu Swamy) ನೇತೃತ್ವದಲ್ಲಿ ನಡೆದಿದ್ದ ಉಪಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.