ಬೆಂಗಳೂರು: ಕೊರೊನಾ ಎರಡನೇ ಅಲೆ ಆರ್ಭಟ ಬಹುತೇಕ ತಗ್ಗುತ್ತಿರೋ ಬೆನ್ನಲ್ಲೇ ಸರ್ಕಾರ ಹಂತದ​ ಹಂತದ ಅನ್​ಲಾಕ್​ಗೆ ಮುಂದಾಗ್ತಿದೆ. ಇದರ ಭಾಗವಾಗಿ ಇಂದಿನಿಂದ ರಾಜ್ಯದಲ್ಲಿ ನಾಲ್ಕನೇ ಹಂತದ ಅನ್​ಲಾಕ್ ಜಾರಿಯಾಗಿದ್ದು, ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಲಾಗಿದೆ. ಯಾವುದಕ್ಕೆಲ್ಲಾ ರಿಲೀಫ್​ ಸಿಕ್ಕಿದೆ? ಇನ್ನೂ ಯಾವುದಕ್ಕೆ ನಿರ್ಬಂಧ ಮುಂದುವರಿದಿದೆ ಅನ್ನೋದ್ರ ಮಾಹಿತಿ ಇಲ್ಲಿದೆ.

ಕೊರೊನಾ ಬಿಗಿ ಹಿಡಿತ ಸಡಿಲಗೊಂಡ ಬಳಿಕ ರಾಜ್ಯದಲ್ಲಿ ಹಂತ ಹಂತವಾಗಿ ಅನ್​ಲಾಕ್ ಜಾರಿಗೊಳಿಸಲಾಗುತ್ತಿದೆ. ಮೊದಲ ಮೂರು ಹಂತದ ಅನ್​ಲಾಕ್​ನಲ್ಲಿ ರಾಜ್ಯವನ್ನು ಭಾಗಶಃ ಓಪನ್​ ಮಾಡಲಾಗಿತ್ತು. ವ್ಯಾಪಾರ ವಹಿವಾಟು ಸಾರಿಗೆ ಸಂಚಾರ ಎಲ್ಲದಕ್ಕೂ ಸರ್ಕಾರ ಅನುಮತಿ ನೀಡಿತ್ತು. ಸದ್ಯ ಸರ್ಕಾರ ನಾಲ್ಕನೇ ಹಂತದ ಅನ್​ಲಾಕ್​ ಜಾರಿಗೊಳಿಸಿದ್ದು, ಮತ್ತಷ್ಟು ಕ್ಷೇತ್ರಗಳಿಗೆ ಬಿಡುಗಡೆಯ ಭಾಗ್ಯ ನೀಡಿದೆ.

ಅನ್​ಲಾಕ್-4 ಜಾರಿ.. ಏನಿರುತ್ತೆ..?
ನಾಲ್ಕನೇ ಹಂತದ ಅನ್​ಲಾಕ್​ನಲ್ಲಿ ಜುಲೈ 26ರಿಂದ ಪದವಿ ಕಾಲೇಜುಗಳ ಆರಂಭಕ್ಕೆ ಗ್ರೀನ್​ ಸಿಗ್ನಲ್ ನೀಡಲಾಗಿದೆ. ಆದರೆ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬೇಕಾದ್ರೆ ವ್ಯಾಕ್ಸಿನ್ ಪಡೆದಿರಬೇಕು ಅನ್ನೋ ನಿಬಂಧನೆ ವಿಧಿಸಲಾಗಿದೆ. ಕನಿಷ್ಠ ಒಂದು ಡೋಸ್​ ವ್ಯಾಕ್ಸಿನ್ ಪಡೆದ ವಿದ್ಯಾರ್ಥಿಗಳಷ್ಟೇ ತರಗತಿಗೆ ಹಾಜರಾಗಬಹುದಾಗಿದೆ. ಹಾಗೆ ಸಿನಿಮಾ ಥಿಯೇಟರ್ಸ್​ ಮತ್ತು ರಂಗ ಮಂದಿರಗಳ ಆರಂಭಕ್ಕೂ ಸರ್ಕಾರ ಹಸಿರು ನಿಶಾನೆ ತೋರಿದೆ. ಶೇಕಡಾ 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಇನ್ನು ನೈಟ್​ ಕರ್ಫ್ಯೂ ಅವಧಿಯಲ್ಲೂ ಸರ್ಕಾರ ಬದಲಾವಣೆ ಮಾಡಿದೆ. ರಾತ್ರಿ 9 ಗಂಟೆಯ ಬದಲಾಗಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವೆರೆಗೆ ನೈಟ್​ಕರ್ಫ್ಯೂ ಅವಧಿಯನ್ನು ಸೀಮಿತಗೊಳಿಸಲಾಗಿದೆ.

ಇನ್ನು ನಾಲ್ಕನೇ ಹಂತದ ಅನ್​ಲಾಕ್​ನಲ್ಲೂ ಕೆಲ ಕ್ಷೇತ್ರಗಳಿಗೆ ನಿರ್ಬಂಧ ಮುಂದುವರಿದಿದೆ. ಯಾವೆಲ್ಲಾ ಕ್ಷೇತ್ರಗಳಿಗೆ ನಿರ್ಭಂಧನೆ ಮುಂದುವರಿಯಲಿದೆ ಅನ್ನೋನ್ನ ನೋಡೊದಾದ್ರೆ..

ಯಾವುದಕ್ಕೆಲ್ಲಾ ಸಿಕ್ಕಿಲ್ಲ ಅನ್​ಲಾಕ್​ ಭಾಗ್ಯ?

ನಾಲ್ಕನೇ ಹಂತದ ಅನ್​ಲಾಕ್​ನಲ್ಲೂ ಪಬ್​ಗಳಿಗೆ ಅನುಮತಿ ನೀಡಿಲ್ಲ. ಸ್ವಿಮ್ಮಿಂಗ್ ಫೂಲ್​ ಹಾಗೂ ಒಳಾಂಗಣ ಚಿತ್ರೀಕರಣಕ್ಕೂ ನಿರ್ಬಂಧ ವಿಸ್ತರಿಸಲಾಗಿದೆ. ರಾಜಕೀಯ, ಧಾರ್ಮಿಕ ಸಮಾರಂಭಗಳಿಗೂ ನಾಲ್ಕನೇ ಹಂತದ ಅನ್​ಲಾಕ್​ನಲ್ಲಿ ಯಾವುದೇ ಸಡಿಲಿಕೆ ನೀಡಿಲ್ಲ. ಉಳಿದಂತೆ ಈ ಹಿಂದಿರುವ ನಿರ್ಬಂಧಗಳು ಮುಂದುವರಿಯಲಿವೆ.

ಕೊರೊನಾ ಅಬ್ಬರಕ್ಕೆ ಕಡಿವಾಣ ಬಿದ್ದಿರೋ ಹಿನ್ನೆಲೆ ಸರ್ಕಾರ ರಾಜ್ಯಕ್ಕೆ ಹಾಕಿದ್ದ ಬೀಗವನ್ನು ಬಹುತೇಕ ಓಪನ್ ಮಾಡಿದೆ. ಅನ್​ಲಾಕ್​ ಖುಷಿಯಲ್ಲಿ ಜನರು ಬೀದಿಗಿಳಿಯುತ್ತಿದ್ದಾರೆ. ಆದರೆ ಮೂರನೇ ಅಲೆಯ ಆರಂಭವಾಗಬಹುದು ಆತಂಕವಂತೂ ಇದ್ದೇ ಇದೆ. ಸೋ ಅನ್​ಲಾಕ್ ಖುಷಿಯಲ್ಲಿ ಮೈ ಮರೆಯದೇ ಜಾಗೃತೆ ವಹಿಸಿದ್ರೆ ಒಳ್ಳೇದು..

The post ರಾಜ್ಯದಲ್ಲಿ 4ನೇ ಹಂತದ ಅನ್​ಲಾಕ್ ಜಾರಿ -ಏನಿರುತ್ತೆ? ಯಾವುದಕ್ಕೆಲ್ಲಾ ನಿರ್ಬಂಧ ಮುಂದುವರಿದಿದೆ? appeared first on News First Kannada.

Source: newsfirstlive.com

Source link