ಬೆಂಗಳೂರು: ರಾಜ್ಯದಲ್ಲಿ ಬ್ಲಾಕ್ ಫಂಗಸ್​ಗೆ 12 ಮಂದಿ ಸಾವನ್ನಪ್ಪಿದ್ದಾರೆ ಅಂತಾ ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿರುವ ಸುಧಾಕರ್​.. ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಕಡಿಮೆ ಆಗಿದೆ. ಕೆಲವು ಜಿಲ್ಲೆಯಲ್ಲಿ ಏರಿಕೆ ಆಗಿದೆ. ಆದರೆ ಅನೇಕ ಜಿಲ್ಲೆಯಲ್ಲಿ ಕೇಸ್ ಕಡಿಮೆ ಆಗಿದೆ. ಜಿಲ್ಲಾಧಿಕಾರಿಗಳಿಗೂ ಗ್ರಾಮಗಳ ಬಗ್ಗೆ ವರದಿ‌ ನೀಡೋಕೆ‌ ಹೇಳಿದ್ದೇನೆ. ಅನೇಕ ಗ್ರಾಮಗಳು ಕೋವಿಡ್ ಮುಕ್ತವಾಗಿದೆ.

ಮೂರು ದಿನ ಜಿಲ್ಲಾ ಪ್ರವಾಸದಲ್ಲಿ ಆರೋಗ್ಯದ ವ್ಯವಸ್ಥೆ ಬಗ್ಗೆ‌ ಪರಿಶೀಲನೆ ಮಾಡಿದ್ದೇನೆ. ನಮ್ಮ ಪ್ರೋಟೋ ಕಾಲ್ ಪ್ರಕಾರ ನಡೆದಿದ್ಯಾ ಅಂತ ಪರಿಶೀಲಿಸಿದ್ದೇನೆ. ಇಂದು ಬ್ಲಾಕ್ ಫಂಗಸ್ ಬಗ್ಗೆ ಸಭೆ ನಡೆಸಿದ್ದೇನೆ. ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಯಾರೆಲ್ಲ ದಾಖಲಾಗಿದ್ದಾರೆ? ಎಂಬ ಮಾಹಿತಿಯನ್ನ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. 446 ಜನರು ರಿಪೋರ್ಟ್ ಆಗಿದೆ. ಬ್ಲಾಕ್ ಫಂಗಸ್​ನಿಂದ 443 ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 11 ಜನರು ಮನೆಯಲ್ಲೇ ಇದ್ದಾರೆ. ಬ್ಲಾಕ್ ಫಂಗಸ್​ನಿಂದ ರಾಜ್ಯದಲ್ಲಿ 12 ಜನರು ಸಾವನ್ನಪ್ಪಿದ್ದಾರೆ. 18 ಸಾವಿರ ಎಂಪೋಟೆರಸಿನ್‌ ಬಿ ವೈಯಲ್ ಬರ್ತಿದೆ. ದೇಶದಲ್ಲಿ 9 ಸಾವಿರ ಜನರಿಗೆ ಬ್ಲಾಕ್ ಫಂಗಸ್ ಬಂದಿದೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ಔಷಧಿ ಕಳಿಸುತ್ತದೆ. ಬೇರೆಡೆಯಿಂದ 18 ಸಾವಿರ ವಯಲ್ಸ್ ಔಷಧಿ ಬಂದಿದೆ. ಅದರಲ್ಲಿ ನಮಗೆ 1 ಸಾವಿರ ವಯಲ್ಸ್ ಕಳುಹಿಸಿದ್ದಾರೆ. ಆಸ್ಪತ್ರೆಯಲ್ಲಿ ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಲು ತೀರ್ಮಾನ ಮಾಡಲಾಗಿದೆ. ರೋಗಿಗಳ ಸಂಬಂಧಿಗಳು ವಾರ್ಡ್ ರೂಮ್‌ ಹೋಗದೇ ಹಾಗೆ ನೋಡಿಕೊಳ್ಳಬೇಕು. ಹಿರಿಯ ವೈದ್ಯರು, HODಗಳು ರೋಗಿಗಳಿಗೆ ಚಿಕಿತ್ಸೆ ‌ನೀಡಲು ಹಿಂದೇಟು ಹಾಕ್ತಿದ್ದಾರೆ. ವಿಶೇಷವಾಗಿ ತಾಲೂಕಿನಲ್ಲಿ ವೆಂಟಿಲೇಟರ್ ಬಗ್ಗೆ ದೂರು ಬಂದಿತ್ತು. ಅನೇಕ ತಾಲೂಕಿನಲ್ಲಿ ತಜ್ಞರ ನೇಮಕಾತಿ ಮಾಡಿದ್ದಾರೆ.

ರಾಜ್ಯದಲ್ಲಿ 1,763 ವೈದ್ಯರ ನೇರ ನೇಮಕಾತಿಗಾಗಿ ಗೆಜೆಟ್​ನಲ್ಲಿ ಪ್ರಕಟಿಸಲಾಗಿದೆ. 700 ತಜ್ಞ ವೈದ್ಯರು, 40 ಇಎನ್​ಟಿ, 40 ಗೈನಕಾಲಜಿಸ್ಟ್, 30 ಡರ್ಮಟಾಲಜಿಸ್ಟ್, 142 ಅರಿವಳಿಕೆ ತಜ್ಞರು, 153 ಮಕ್ಕಳ ತಜ್ಞರು, 51 ನೇತ್ರ ತಜ್ಞರನ್ನ ನೇಮಕ ಮಾಡಿಕೊಂಡಿದ್ದೇವೆ. ರೆಡಿಯಾಲಜಿಸ್ಟ್​ಗಳ ನೇಮಕ ಪೆಂಡಿಂಗ್ ಇದೆ. ಸದ್ಯ 1,048 ವೈದ್ಯರ ನೇಮಕ ಆಗಿದೆ ಅಂತಾ ಮಾಹಿತಿ ನೀಡಿದರು.

The post ರಾಜ್ಯದಲ್ಲಿ 446 ಮಂದಿಗೆ ಬ್ಲಾಕ್​ ಫಂಗಸ್​, 12 ಮಂದಿ ಸಾವು appeared first on News First Kannada.

Source: newsfirstlive.com

Source link