ಕೋಲಾರ: ರಾಜ್ಯದಲ್ಲಿ 20 ಪರ್ಸೆಂಟ್​ ಸರ್ಕಾರವಿದ್ದು, ಕೊರೊನಾ ಸಂಕಷ್ಟದಲ್ಲೂ ಸರ್ಕಾರ ಲೂಟಿಗೆ ಇಳಿದಿದೆ ಎಂದು ಕಾಂಗ್ರೆಸ್​​ ನಾಯಕ, ಮಾಜಿ ಸಚಿವ ಕೃಷ್ಣಭೈರೇಗೌಡ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷ್ಣ ಭೈರೇಗೌಡ ಅವರು, ಸರ್ಕಾರದ ಸೆಸ್‌ ಜೊತೆ ವಿಜಯೇಂದ್ರ ತೆರಿಗೆ ಕಟ್ಟಬೇಕು. ರಾಜ್ಯದಲ್ಲಿ GST ಜೊತೆಗೆ VST ತೆರಿಗೆ ಕಟ್ಟಬೇಕಾಗಿದೆ. ಇಂತಹ ನೀಚಗೆಟ್ಟ ಸರ್ಕಾರ ನಾನು ಎಂದೂ ನೋಡಿಲ್ಲ. ಮಾಸ್ಕ್‌, ಆಕ್ಸಿಜನ್‌, ವೆಂಟಿಲೇಟರ್‌ನಿಂದ ಸರ್ಕಾರ ಲೂಟಿ ಮಾಡುತ್ತಿದೆ.

ದೇಶದಲ್ಲಿ ಅತಿಹೆಚ್ಚು ತೆರಿಗೆ ಕಟ್ಟುವುದರಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ. ಆದರೆ ಕೇಂದ್ರ ಸರ್ಕಾರ ನಮ್ಮ ತೆರಿಗೆ ದುಡ್ಡಲ್ಲಿ ಬೇರೆ ರಾಜ್ಯಕ್ಕೆ ಆಕ್ಸಿಜನ್‌ ಕೊಟ್ಟಿದೆ. ಸಂಸದರು ಇದುವರೆಗೂ ರಾಜ್ಯಕ್ಕೆ ಆಕ್ಸಿಜನ್‌ ಬೇಕು ಅಂತ ಕೇಳಿಲ್ಲ. ಕೇಂದ್ರ, ರಾಜ್ಯ ಸರ್ಕಾರ ಜನರನ್ನು ನಡುನೀರಲ್ಲಿ ಕೈಬಿಟ್ಟಿದೆ ಎಂದು ಆರೋಪಿಸಿದರು.

The post ‘ರಾಜ್ಯದಲ್ಲಿ GST ಜೊತೆಗೆ ವಿಜಯೇಂದ್ರ ಸರ್ವೀಸ್​ ಟ್ಯಾಕ್ಸ್ ಕಟ್ಟಬೇಕಾಗಿದೆ’ ಕೃಷ್ಣಭೈರೇಗೌಡ appeared first on News First Kannada.

Source: newsfirstlive.com

Source link