ಬೆಂಗಳೂರು: ರಾಜ್ಯದಲ್ಲಿ ಐಎಎಸ್​ ಅಧಿಕಾರಿಗಳ ಲಾಬಿ ನಿಲ್ಲಬೇಕು ಅಂತಾ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಮೈಸೂರಲ್ಲಿ ಇಬ್ಬರು ಐಎಎಸ್​ ಅಧಿಕಾರಿಗಳ ಕಿತ್ತಾಟದ ವಿಚಾರಕ್ಕೆ ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಹೆಚ್​ಡಿಕೆ.. ಶಿಲ್ಪಾ ನಾಗ್ ನೊಂದು ಹೇಳಿಕೆಯನ್ನ ಕೊಟ್ಟಿದ್ದಾರೆ. ನಾನು ಅವರ ಪರ-ವಿರೋಧ ಅಂತಾ ಹೇಳಲ್ಲ. ಹೀಗೆ ಆದರೆ ಜನರಿಗೆ ಆಗುವ ನಷ್ಟಕ್ಕೆ ಯಾರು ಹೊಣೆ? ಎಂದು ಪ್ರಶ್ನೆ ಮಾಡಿದರು.

ಇತ್ತೀಚೆಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳ ಮಧ್ಯೆ ವಿಶ್ವಾಸದ ಕೊರತೆ, ಪ್ರತಿಷ್ಠೆಯಿಂದಾಗಿ ದೊಡ್ಡ ಅನಾಹುತ ಸಂಭವಿಸಿದೆ. ಆಕ್ಸಿಜನ್ ಸಿಗದೇ 37 ಜನ ಸತ್ತಿದ್ದಾರೆ ಅಂತಾ ವಿಪಕ್ಷಗಳು ಹೇಳಿವೆ. ಈಗ ಮೈಸೂರಲ್ಲಿ ಅಧಿಕಾರಿಗಳ ಸಮನ್ವಯ ಕೊರತೆ ಕಾಣ್ತಿದೆ. ಇಬ್ಬರ ಕಿತ್ತಾಟದಿಂದ ಜನರಿಗೆ ಕಷ್ಟ ಆಗಲಿದೆ. ಸರ್ಕಾರ ಇದನೆಲ್ಲಾ ನೋಡುತ್ತ ಸುಮ್ಮನೆ ಕೂತಿದೆ.

ಮೈಸೂರಲ್ಲಿ ಎಷ್ಟು ಜನರನ್ನ ಬಲಿ ತೆಗೆದುಕೊಳ್ಳಲು ಹೊರಟಿದ್ದಿರಿ? ಇದು ಮುಖ್ಯಮಂತ್ರಿಗಳ ದೌರ್ಬಲ್ಯವೋ? ಸರ್ಕಾರ ದೌರ್ಬಲ್ಯವೋ? ಗೊತ್ತಿಲ್ಲ. ಆದರೆ ಅಧಿಕಾರಿಗಳು ಮಾತ್ರ ಚೆಲ್ಲಾಟ ನಡೆಸುತ್ತಿದ್ದಾರೆ. ಇಲ್ಲಿ ಹಣದ ಸಂಶಗಳನ್ನ ಮೂಡಿಸುತ್ತಿದೆ.

ಕರ್ನಾಟಕ ಕೇಡರ್ ಅಧಿಕಾರಿಗಳ ಕಡೆಗಣನೆ
ರಾಜ್ಯದಲ್ಲಿ ನಡೆಯುತ್ತಿರುವ ಐಎಎಸ್ ಲಾಬಿಯನ್ನ ಕಟ್​ ಮಾಡಲು ರಾಜ್ಯ ಸರ್ಕಾರ ಪ್ರಯತ್ನ ಮಾಡಬೇಕು.
ಕರ್ನಾಟಕ ಕೇಡರ್​ನ ಅಧಿಕಾರಿಗಳನ್ನ ಇಲ್ಲಿ ಸಕೆಂಡ್​​ ಗ್ರೇಡ್​ ಅಧಿಕಾರಿಗಳ ಹಾಗೇ ಟ್ರೀಟ್ಮೆಂಟ್ ಮಾಡುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳ ಹಿರಿಯ ಅಧಿಕಾರಿಗಳು ಅವರದ್ದೇ ಆದಂತಹ ಲಾಬಿಯನ್ನ ಇಟ್ಟುಕೊಂಡಿದ್ದಾರೆ. ಆ ಲಾಬಿ ಇವತ್ತು ಈ ರೀತಿಯ ಶ್ವೇಚ್ಛಾರವಾಗಿ, ಕನ್ನಡಿಗರಿಗೆ ಅವಮಾನ ಮಾಡುತ್ತಿರುವ ರೀತಿಯಲ್ಲಿ, ಇವತ್ತು ಕನ್ನಡದ ಅಧಿಕಾರಿಗಳನ್ನ ಥರ್ಡ್​​​ ಗ್ರೇಡ್​ ರೀತಿಯಲ್ಲಿ ಟ್ರೀಟ್ಮೆಂಟ್ ಮಾಡುತ್ತಿದ್ದಾರೆ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸರ್ಕಾರ ನರಸತ್ತ ರೀತಿಯಲ್ಲಿ ಇದೆ ಎಂದು ವಾಗ್ದಾಳಿ ನಡೆಸಿದರು.

The post ರಾಜ್ಯದಲ್ಲಿ IAS ಅಧಿಕಾರಿಗಳ ಲಾಬಿ ನಿಲ್ಲಬೇಕು -ಹೆಚ್​​ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದೇಕೆ? appeared first on News First Kannada.

Source: newsfirstlive.com

Source link