ಬೆಂಗಳೂರು: ದೇಶದಾದ್ಯಂತ ಮೂರನೇ ಹಂತದ ವ್ಯಾಕ್ಸಿನೇಷನ್ ಮೇ 1 ರಿಂದ ಆರಂಭವಾಗಲಿದೆ. ಮೂರನೇ ಹಂತದಲ್ಲಿ 18 ವರ್ಷದಿಂದ 45 ವರ್ಷದವರೆಗಿನ ವ್ಯಕ್ತಿಗಳಿಗೆ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರ ನೀಡುವ ವ್ಯಾಕ್ಸಿನ್ ಜೊತೆಗೆ ರಾಜ್ಯ ಸರ್ಕಾರಗಳು ವ್ಯಾಕ್ಸಿನ್ ತಯಾರಕರಿಂದ ವ್ಯಾಕ್ಸಿನ್ ಖರೀದಿಸಿ ವ್ಯಾಕ್ಸಿನೇಷನ್ ನಡೆಸಬೇಕಿದೆ.

ಈಗಾಗಲೇ ಹಲವು ರಾಜ್ಯಗಳು ತಮ್ಮ ರಾಜ್ಯದ ಜನತೆಗೆ ಉಚಿತ ವ್ಯಾಕ್ಸಿನ್ ನೀಡುವುದಾಗಿ ಘೋಷಿಸಿವೆ. ಆದ್ರೆ ಕರ್ನಾಟಕದಲ್ಲಿ ಈವರೆಗೆ ಈ ಕುರಿತು ಘೋಷಣೆಯಾಗಿಲ್ಲ. ಈ ಕುರಿತು ಪ್ರಶ್ನೆ ಎತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.. ವಿಶ್ವಾದ್ಯಂತ ಉಚಿತ ವ್ಯಾಕ್ಸಿನ್ ನೀಡ್ತಿರೋವಾಗ ಭಾರತದಲ್ಲಿ ಮಾತ್ರ ವ್ಯಾಕ್ಸಿನ್ ದರದ ಬಗ್ಗೆ ಚರ್ಚೆ ಆಗ್ತಿದೆ. ಈವರೆಗೂ ಸರ್ಕಾರ ಉಚಿತ ವ್ಯಾಕ್ಸಿನ್ ಘೋಷಣೆ ಮಾಡಿಲ್ಲವೇಕೆ..? ಎಂದು ಪ್ರಶ್ನಿಸಿದ್ದಾರೆ

ಅಲ್ಲದೇ ಎಷ್ಟು ಬೇಗ ಸಾಧ್ಯವಾಗುತ್ತೋ ಅಷ್ಟು ಬೇಗ ಎಲ್ಲಾ ನಾಗರಿಕರಿಗೂ ಉಚಿತ ವ್ಯಾಕ್ಸಿನ್ ನೀಡುವಂತೆ ಟ್ವಿಟರ್ ಮೂಲಕ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

The post ರಾಜ್ಯದಲ್ಲೂ ಉಚಿತ ವ್ಯಾಕ್ಸಿನ್ ನೀಡುವಂತೆ ಡಿ.ಕೆ. ಶಿವಕುಮಾರ್ ಒತ್ತಾಯ appeared first on News First Kannada.

Source: News First Kannada
Read More