ಬೆಂಗಳೂರು: ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್ ದರ ನೂರರ ಗಡಿ ದಾಟಿದೆ.​ ಬೆಂಗಳೂರು ನಗರದಲ್ಲಿ ಇಂದು ಬೆಳಗ್ಗೆಯಿಂದ ಬಂಕ್​ಗಳಲ್ಲಿ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದ್ದು ಭಾರತ್ ಪೆಟ್ರೋಲಿಯಂ ಬಂಕ್​ನಲ್ಲಿ 100ರೂ 25 ಪೈಸೆಯಾಗಿದೆ. ಇನ್ನು ಇಂಡಿಯನ್ ಆಯಿಲ್ ಬಂಕ್​ಗಳಲ್ಲಿ ಪೆಟ್ರೋಲ್ 100 ರೂಪಾಯಿ 17 ಪೈಸೆಯಾಗಿದೆ. ಇನ್ನು ಡಿಸೇಲ್ ಬೆಲೆ ಲೀಟರ್​ಗೆ 92 ರೂಪಾಯಿ 97 ಪೈಸೆಯಾಗಿದೆ.

ಪೆಟ್ರೋಲ್ ಮತ್ತು ಡಿಸೇಲ್ ದರ ಸತತವಾಗಿ ಏರುತ್ತಿದ್ದು ಪೆಟ್ರೋಲ್ ದರ ಏರಿಕೆಯಿಂದ ಮಧ್ಯಮ ವರ್ಗದ ಜನರಿಗೆ ಭಾರೀ ಹೊಡೆತ ತಿನ್ನುವಂತಾಗಿದೆ.

ಎಲ್ಲೆಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದೆ..?
ಹುಬ್ಬಳ್ಳಿ
ಪೆಟ್ರೋಲ್ ಪ್ರತಿ ಲೀಟರ್ ಗೆ -₹100.4
ಡಿಸೇಲ್ ಪ್ರತಿ ಲೀಟರ್ ಗೆ ₹92.88

ಮಂಗಳೂರು
ಪೆಟ್ರೋಲ್ ₹99.49
ಡಿಸೇಲ್ ₹92.28

ಕಲಬುರಗಿ
ಪೆಟ್ರೋಲ್ ಪ್ರತಿ ಲೀಟರ್ ಗೆ- ₹99.98.
ಡಿಸೇಲ್ ಪ್ರತಿ ಲೀಟರ್ ಗೆ- ₹92.82.

ಯಾದಗಿರಿ
ಪೆಟ್ರೋಲ್- ₹100.49
ಡಿಸೇಲ್- ₹93:29

ಮೈಸೂರು
ಪೆಟ್ರೋಲ್- ₹99.73 ರೂ.
ಡಿಸೇಲ್- ₹92.57 ರೂ

ಹುಲಿಯೂರು ದುರ್ಗ
ಪೆಟ್ರೋಲ್- ₹100.43 ರೂ.
ಡಿಸೇಲ್- ₹93.21 ರೂ

ಕೊಪ್ಪಳ
ಪೆಟ್ರೋಲ್: ₹101:23 ಲೀಟರ್ ಗೆ
ಡಿಸೇಲ್: ₹93:97 ಲೀಟರ್

ರಾಯಚೂರು
ಪೆಟ್ರೋಲ್- ₹100.05 ಪೈಸೆ
ಡಿಸೇಲ್ – ₹92.90

ಶಿವಮೊಗ್ಗ ನಗರ
ಪೆಟ್ರೋಲ್ ದರ- ₹101.56
ಡಿಸೇಲ್ ದರ- ₹94.16

The post ರಾಜ್ಯದಲ್ಲೂ ಸೆಂಚುರಿ ಹೊಡೆದ ಪೆಟ್ರೋಲ್ ರೇಟ್; ಯಾವ ಜಿಲ್ಲೆಯಲ್ಲಿ ಎಷ್ಟು ಬೆಲೆ? appeared first on News First Kannada.

Source: newsfirstlive.com

Source link