ಆಂಧ್ರ ಪ್ರದೇಶ: ಕನ್ನಡದ ಸ್ಟಾರ್ ನಟ ಪುನೀತ್ ರಾಜ್ಕುಮಾರ್ ಇಂದಿಗೆ ನಮ್ಮನ್ನಗಲಿ 16 ದಿಗಳು ಕಳೆದಿವೆ. ರಾಜ್ಯಕ್ಕೆ ಅಪ್ಪು ಅಕಾಲಿಕ ನಿಧನದಿಂದ ಬರಸಿಡಿಲು ಬಡಿದಂತಾಗಿದೆ. ಅಪ್ಪು ಇನ್ನಿಲ್ಲದ ನೋವು ರಾಜ್ಯದಾಚೆಯ ಜನರಿಗೂ ತಟ್ಟಿದ್ದು ಆಂಧ್ರ ಪ್ರದೇಶದ ಅನಂತ್ಪುರ ಜಿಲ್ಲೆಯಲ್ಲಿ ಪುನೀತ್ ಅಭಿಮಾನಿಗಳು ಪವರ್ ಸ್ಟಾರ್ಗೆ ನಮನ ಸಲ್ಲಿಸಿದ್ದಾರೆ.
ಅನಂತಪುರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪವರ್ ಸ್ಟಾರ್ ಭಾವಚಿತ್ರಕ್ಕೆ ಮೇಣದಬತ್ತಿ ಹಿಡಿದು ಬೆಳಗುವ ಮೂಲಕ ಗೌರವಪೂರ್ವಕ ಸಂತಾಪ ಸೂಚಿಸಲಾಗಿದೆ. ಜೊತೆಗೆ ರಾಯದುರ್ಗ ತಾಲೂಕಿನ ಕೆಲ ಗ್ರಾಮಗಳಲ್ಲಿ ಕೂಡ ಕರುನಾಡ ರಾಜಕುಮಾರನ ಬ್ಯಾನರ್ ಹಾಕಿ ಮೌನಾಚರಣೆ ಸಲ್ಲಿಸಿ ಅಗಲಿದ ನಟನ ಸ್ಮರಣೆ ಮಾಡಿದ್ದಾರೆ.
ಇನ್ನು ಮೊನ್ನೆ ಕೂಡ ದೀಪಾವಳಿ ಹಬ್ಬದ ನಿಮಿತ್ತ ಪಕ್ಕದ ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ದೀಪಾವಳ ಹಬ್ಬದ ಆಚರಣೆಯ ನಡುವೆಯೂ ಜನರು ಅಪ್ಪುವಿಗೆ ಶ್ರದ್ದಾಂಜಲಿ ಸಲ್ಲಿಸಿದ್ದರು.
ಇದನ್ನೂ ಓದಿ:ಗೋರೆ ಹಬ್ಬದ ಆಚರಣೆಯಲ್ಲಿ ಪುನೀತ್ರನ್ನ ನೆನೆದ ತಮಿಳುನಾಡು ಜನರು