ಕೋಲಾರ: ನಗರದಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಅಪ್ಪು ಅವರ ಪುಣ್ಯಸ್ಮರಣೆ ಮಾಡಿದರು.
ಹುತ್ತೂರು ಹೋಬಳಿಯ ತಂಬಳ್ಳಿ ಗೇಟ್ ಅಭಿಮಾನಿಗಳಿಂದ ಅನ್ನದಾನ ಮಾಡಿದರು. ಅಪ್ಪು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಪೂಜೆ ಸಲ್ಲಿಸಿ ಅನ್ನದಾನ ಮಾಡಿದರು. ಅಪ್ಪು ಪೋಟೋಗೆ ನಮಸ್ಕರಿಸಿ ಎರಡು ನಿಮಿಷಗಳ ಕಾಲ ನಮನ ಸಲ್ಲಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ಪುನೀತ್ ರಾಜ್ಕುಮಾರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮಗಳು ನಡೆಯುತ್ತಿವೆ. ಅದರಂತೆ ಕೋಲಾರದ ಅಪ್ಪು ಅಭಿಮಾನಿಗಳು ವಿಶೇಷ ಗೌರವ ಸಲ್ಲಿಸಿದರು.