ರಾಜ್ಯದ ಜನರಿಗೂ ಆಂಧ್ರದ ಆನಂದಯ್ಯನ ಔಷಧಿ; 500 ಕುಟುಂಬಗಳಿಗೆ ಉಚಿತ ವಿತರಣೆ

ರಾಜ್ಯದ ಜನರಿಗೂ ಆಂಧ್ರದ ಆನಂದಯ್ಯನ ಔಷಧಿ; 500 ಕುಟುಂಬಗಳಿಗೆ ಉಚಿತ ವಿತರಣೆ

ವಿಜಯನಗರ: ಕೊರೊನಾ ಸೋಂಕು ನಿರೋಧಕ ಆಯುರ್ವೇದ ಔಷಧಿ ಎಂದೇ ಖ್ಯಾತಿ ಪಡೆದಿರುವ ಆಂಧ್ರ ಪ್ರದೇಶ ಆನಂದಯ್ಯ ಅವರು ನೀಡುತ್ತಿರುವ ಔಷಧಿಯನ್ನು ರಾಜ್ಯದಲ್ಲೂ ಉಚಿತವಾಗಿ ವಿತರಣೆ ಮಾಡುತ್ತಿದ್ದು, ಸುಮಾರು 500ಕ್ಕೂ ಹೆಚ್ಚು ಕುಟುಂಬಗಳಿಗೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ವಿತರಣೆ ಮಾಡಲಾಗಿದೆ.

ಆಂಧ್ರ ಪ್ರದೇಶದ ಆಯುಷ್ ಇಲಾಖೆ ಅನುಮತಿ ನೀಡಿರುವ ಆನಂದಯ್ಯ ಅವರ ಔಷಧಿಯನ್ನು ಹಂಪಿಯ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯ ಅವರು ಜನರಿಗೆ ವಿತರಣೆ ಮಾಡಿದ್ದಾರೆ.

ಕಮಲಾಪುರದ ಶ್ರೀ ನಗರೇಶ್ವರ ಆಂಜನೇಯ  ದೇವಾಲಯದ ಆವರಣದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಔಷಧಿಯನ್ನು ಉಚಿತವಾಗಿ ಆನಂದಯ್ಯ ಅವರು ಉಚಿತವಾಗಿ ನೀಡಿದ್ದಾರೆ. ಕಳೆದ ಕೆಲ ಸಮಯದಿಂದ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣ ಪಟ್ಟಣಂ ಆನಂದಯ್ಯ ಅವರ ಔಷಧಿ ಸಾಕಷ್ಟು ಸುದ್ದಿಯಾಗಿತ್ತು.

ಇದನ್ನೂ ಓದಿ: ನೆಲ್ಲೂರು ಆನಂದಯ್ಯನ ನಾಟಿ ಔಷಧಿಯ ಸೀಕ್ರೆಟ್ ಏನು..? ಅನುಮತಿ ಸಿಕ್ಕಿದ್ದು ಹೇಗೆ..?

ಇದನ್ನೂ ಓದಿ: ಕೊರೊನಾ ವಿರುದ್ಧ ಯುದ್ಧ: ನೆಲ್ಲೂರು ಆನಂದಯ್ಯನ ನಾಟಿ ಔಷಧಿಗೆ ಗ್ರೀನ್ ಸಿಗ್ನಲ್

The post ರಾಜ್ಯದ ಜನರಿಗೂ ಆಂಧ್ರದ ಆನಂದಯ್ಯನ ಔಷಧಿ; 500 ಕುಟುಂಬಗಳಿಗೆ ಉಚಿತ ವಿತರಣೆ appeared first on News First Kannada.

Source: newsfirstlive.com

Source link