ರಾಜ್ಯದ ಜನರಿಗೆ ಸಿಗುತ್ತಾ ‘ಭರಪೂರ ಗಿಫ್ಟ್’; ಬೊಮ್ಮಾಯಿ ಬಜೆಟ್ ಪ್ಲಾನ್ ಹೇಗೆ ನಡೀತಿದೆ..?


ಕೇಂದ್ರ ಬಜೆಟ್ ಮಂಡನೆ ಆಯ್ತು, ಇದೀಗ ರಾಜ್ಯ ಬಜೆಟ್ ಮಂಡಿಸೋ ಸರದಿ. ಮುಂದಿನ ತಿಂಗಳು ರಾಜ್ಯ ಬಜೆಟ್‌ ಮಂಡನೆಯಾಗಲಿದೆ. ತಮ್ಮ ಚೊಚ್ಚಲ ಆಯವ್ಯಯ ಪಟ್ಟಿಗೆ ಸಿಎಂ ಬೊಮ್ಮಾಯಿ ಕೂಡಾ ಭರಪೂರ ತಯಾರಿ ನಡೆಸ್ತಿದ್ದಾರೆ.

ಮಾರ್ಚ್ ತಿಂಗಳ ಆರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಲು ಸಿದ್ಧತೆ ನಡೆಸ್ತಿದ್ದಾರೆ. ಬಜೆಟ್ ಮಂಡನೆಗಾಗಿ ಸಿಎಂ ಬೊಮ್ಮಾಯಿ ನಿನ್ನೆಯಿಂದ ಸರಣಿ ಸಭೆಗಳನ್ನು ಹಮ್ಮಿಕೊಂಡಿದ್ದಾರೆ. ಹಲವು ಇಲಾಖೆಗಳ ಸಚಿವರು ಅಧಿಕಾರಿಗಳೊಂದಿಗೆ ನಿನ್ನೆ ಸಿಎಂ ಸಭೆ ನಡೆಸಿದ್ರು.

ಶಕ್ತಿಭವನದಲ್ಲಿ ಸಿಎಂ ಬೊಮ್ಮಾಯಿ ಬಜೆಟ್ ಪೂರ್ವಭಾವಿ ಸಭೆ
ಮುಂದಿನ ತಿಂಗಳಲ್ಲಿ ನಡೆಯಲಿರೋ ಬಜೆಟ್ ಅಧಿವೇಶನಕ್ಕೆ ಸಿಎಂ ಬೊಮ್ಮಾಯಿ ಭಾರೀ ಸಿದ್ಧತೆ ನಡೆಸ್ತಿದ್ದಾರೆ. ಎಲ್ಲಾ ಸಚಿವರೊಂದಿಗೆ ಮೀಟಿಂಗ್ ಮಾಡಿದ ಸಿಎಂ ಬೊಮ್ಮಾಯಿ, ಬಜೆಟ್ ಬಗ್ಗೆ ಸಲಹೆ ಪಡೆದುಕೊಂಡ್ರು. ಬೆಳಗ್ಗೆ 11 ಗಂಟೆಗೆ ಆರಂಭವಾದ ಸಭೆ ಸಂಜೆ 5.30ರವೆಗೂ ನಡೀತು. ಮೀಟಿಂಗ್​ನಲ್ಲಿ 10ಕ್ಕೂ ಹೆಚ್ಚು ಇಲಾಖೆಗಳ ಸಚಿವರೊಂದಿಗೆ ಸಿಎಂ ಬಜೆಟ್ ರೂಪುರೇಷೆ ಬಗ್ಗೆ ವಿಸ್ತೃತ ಚರ್ಚೆ ಮಾಡಿದ್ರು. ಸಚಿವರಿಂದ ಬಜೆಟ್ ಬಗ್ಗೆ ಸಲಹೆಗಳನ್ನು ಪಡೆದ್ರು.

ಯಾವೆಲ್ಲಾ ಇಲಾಖೆ ಭಾಗಿ?

  • ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  • ಗಣಿ ಮತ್ತು ಭೂವಿಜ್ಞಾನ
  • ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್
  • ಸಹಕಾರ, ಮೀನುಗಾರಿಕೆ
  • ಮುಜರಾಯಿ
  • ಅಲ್ಪಸಂಖ್ಯಾತರ ಕಲ್ಯಾಣ
  • ಕಾನೂನು ಸಂಸದೀಯ ವ್ಯವಹಾರಗಳ ಖಾತೆ

ದೇಶದ ಒಟ್ಟು ಸಾಲ ₹135.87 ಲಕ್ಷ ಕೋಟಿ ಎಂದ ಸಿದ್ದರಾಮಯ್ಯ
ಒಂದೆಡೆ ರಾಜ್ಯ ಸರ್ಕಾರ ಬಜೆಟ್ ಮಂಡನೆಗೆ ತಯಾರಿ ನಡೆಸ್ತಿದ್ರೆ, ಮೊನ್ನೆಯಷ್ಟೇ ಮಂಡಿಸಲಾಗಿರೋ ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುಧಾನ ಕಡಿಮೆಯಾಗಿದೆ. ಪ್ರಧಾನಿಯನ್ನ ಕೇಳಲು ಬೊಮ್ಮಾಯಿ, ಬಿಎಸ್‌ವೈಗೆ ಧಮ್ಮಿಲ್ಲ ಅಂದ್ರು. ಅಲ್ಲದೆ ಮನಮೋಹನ್ ಸಿಂಗ್ ಅವಧಿಯಲ್ಲಿ 53 ಲಕ್ಷದ 11ಸಾವಿರ ಕೋಟಿ ರೂಪಾಯಿ ಒಟ್ಟು ಸಾಲವಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ದೇಶದ ಸಾಲ 135.87 ಲಕ್ಷ ಕೋಟಿ ರೂಪಾಯಿ ಆಗಿದೆ ಅಂತಾ ಟೀಕಿಸಿದ್ರು.

ಒಟ್ನಲ್ಲಿ ಮಾರ್ಚ್ ಆರಂಭದಲ್ಲಿ ರಾಜ್ಯ ಸರ್ಕಾರ ಬಜೆಟ್ ಮಂಡಿಸಲಿದ್ದು ಸಿಎಂ ಬಸವರಾಜ ಬೊಮ್ಮಾಯಿಯವ್ರು ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆಗೆ ಭರ್ಜರಿ ತಯಾರಿ ಕೂಡಾ ನಡೆಸ್ತಿದ್ದಾರೆ. ಹಾಗೇನೇ ಬೊಮ್ಮಾಯಿ ಚೊಚ್ಚಲ ಬಜೆಟ್‌ ಬಗ್ಗೆ ರಾಜ್ಯದ ಜನರ ನಿರೀಕ್ಷೆಗಳೂ ಗರಿಗೆದರಿವೆ.

News First Live Kannada


Leave a Reply

Your email address will not be published.