ಕೋಲಾರ: ರಾಜ್ಯದ ಮೊದಲ‌ ಕಿಸಾನ್ ರೈಲಿಗೆ ಚಿಂತಾಮಣಿಯ ದೊಡ್ಡನತ್ತ ರೈಲು ನಿಲ್ದಾಣದಿಂದ ಇಂದು ಸಂಸದ ಎಸ್.ಮುನಿಸ್ವಾಮಿ ಅವರು ಚಾಲನೆ ನೀಡಿದ್ದಾರೆ.

ರೈತರು ಬೆಳೆದ ಹಣ್ಣು ಹಾಗೂ ತರಕಾರಿಗಳನ್ನು ಉತ್ತರ ಭಾರತಕ್ಕೆ ಸರಬರಾಜು ಮಾಡಲು ಅನುಕೂಲವಂತೆ ನೈರುತ್ಯ ರೈಲ್ವೆ ಇಲಾಖೆ ಆರಂಭಿಸಿರುವ ರಾಜ್ಯದ ಮೊದಲ ಕಿಸಾನ್​​ ರೈಲು ಇದಾಗಿದೆ.

ದೊಡ್ಡನತ್ತ ನಿಲ್ದಾಣದಿಂದ  ದೆಹಲಿಯ ಆದರ್ಶನಗರಕ್ಕೆ ಇಂದು ರೈಲು ಹೊರಟಿದೆ.  ಚಾಲನೆ ವೇಳೆ ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ ಹಾಗೂ ರೈಲ್ವೆ ಅಧಿಕಾರಿಗಳು ಸಂಸದರಿಗೆ ಸಾಥ್ ನೀಡಿದ್ರು.

ಹಣ್ಣು, ತರಕಾರಿ ಹಾಗೂ ಬಹುಬೇಗ ಹಾಳಾಗುವ ರೈತರ ಉತ್ಪನ್ನಗಳನ್ನು ಸಾಗಣೆ ಮಾಡಲು ಕಳೆದ ವರ್ಷದಿಂದ ರೈಲ್ವೆ ಇಲಾಖೆ ದೇಶದ ವಿವಿಧ ಭಾಗಗಳಲ್ಲಿ ಕಿಸಾನ್​ ರೈಲು ಸೇವೆಯನ್ನು ಆರಂಭ ಮಾಡಿದೆ. ಇದು ರೈತರಿಗೆ ತಮ್ಮ ಉತ್ಪನ್ನಗಳನ್ನು ತ್ವರಿತವಾಗಿ ಸಾಗಣೆ ಮಾಡಲು ಅವಕಾಶ ನೀಡಲಿದೆ.

The post ರಾಜ್ಯದ ಮೊದಲ ಕಿಸಾನ್​ ರೈಲಿಗೆ ಚಿಂತಾಮಣಿಯಿಂದ ಗ್ರೀನ್ ಸಿಗ್ನಲ್ appeared first on News First Kannada.

Source: newsfirstlive.com

Source link