ರಾಜ್ಯದ ಯಾವ ಮೂಲೆಯಲ್ಲೂ ರಾತ್ರಿ 10 ರಿಂದ – ಬೆಳಗ್ಗೆ 6 ರವರೆಗೆ ಲೌಡ್​ ಸ್ಪೀಕರ್​​ ಬಳಸುವಂತಿಲ್ಲ: ಕರ್ನಾಟಕ ಹೈಕೋರ್ಟ್​ | Karnataka High Court banned Loudspeakers between 10 PM 6 AM


ರಾಜ್ಯದ ಯಾವ ಮೂಲೆಯಲ್ಲೂ ರಾತ್ರಿ 10 ರಿಂದ - ಬೆಳಗ್ಗೆ 6 ರವರೆಗೆ ಲೌಡ್​ ಸ್ಪೀಕರ್​​ ಬಳಸುವಂತಿಲ್ಲ: ಕರ್ನಾಟಕ ಹೈಕೋರ್ಟ್​

ಪ್ರಾತಿನಿಧಿಕ ಚಿತ್ರ

ಕರ್ನಾಟಕ ಹೈಕೋರ್ಟ ಧಾರ್ಮಿಕ ಸ್ಥಳಗಳು, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸೇರಿದಂತೆ ಯಾವುದೇ ಸ್ಥಳದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಅನುಮತಿಸಲಾದ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದದ ಧ್ವನಿವರ್ದಕಗಳನ್ನು ಬಳಸಬಾರದು ಎಂದು ತೀರ್ಪು ನೀಡಿದೆ.

ಬೆಂಗಳೂರು: ಇತ್ತೀಚಿಗೆ ರಾಜ್ಯದಲ್ಲಿ ಬುಗಿಲೆದ್ದಿದ್ದ ಧ್ವನಿವರ್ದಕ (Loudspeaker) ವಿವಾದ ಕುರಿತು ಕರ್ನಾಟಕ ಹೈಕೋರ್ಟ (Karnataka high court)  ಧಾರ್ಮಿಕ ಸ್ಥಳಗಳು (Religious places), ಪಬ್‌ಗಳು (Pubs) ಮತ್ತು ರೆಸ್ಟೋರೆಂಟ್‌ಗಳು (Restaurant) ಸೇರಿದಂತೆ ಯಾವುದೇ ಸ್ಥಳದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಅನುಮತಿಸಲಾದ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದದ ಧ್ವನಿವರ್ದಕಗಳನ್ನು ಬಳಸಬಾರದು ಎಂದು ತೀರ್ಪು ನೀಡಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿರುವ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರ  ವಿಭಾಗೀಯ ಪೀಠವು ಧ್ವನಿವರ್ಧಕಗಳ ದುರುಪಯೋಗವನ್ನು ತಡೆಯಲು  ಕ್ರಮ ಕೈಗೊಂಡು  ಮೂರು ವಾರಗಳಲ್ಲಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ

ಇದನ್ನು ಓದಿ: ರಾಷ್ಟ್ರಪತಿ ಚುನಾವಣೆಗೆ ಹೆಚ್.ಡಿ. ದೇವೇಗೌಡರ ಹೆಸರು ಪ್ರಸ್ತಾಪವೇ ಆಗಿಲ್ಲ: ಹೆಚ್​​.ಡಿ ಕುಮಾರಸ್ವಾಮಿ ಸ್ಪಷ್ಟನೆ

ಈ ಅರ್ಜಿಯ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ಅಧಿಕಾರಿಗಳು ಕೆಲವು ಸಂಸ್ಥೆಗಳಿಗೆ ಮತ್ತು ಧಾರ್ಮಿಕ ಸ್ಥಳಗಳಿಗೆ ಧ್ವನಿವರ್ಧಕಗಳನ್ನು ಬಳಸಲು ಕಾನೂನುಬಾಹಿರವಾಗಿ “ಶಾಶ್ವತ ಪರವಾನಿಗೆ” ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಆದರೆ ಈ ಕುರಿತು ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದ ಸರ್ಕಾರಿ ವಕೀಲರು ಶಬ್ದ ಮಾಲಿನ್ಯ ನಿಯಮಗಳು ಮತ್ತು ಪೊಲೀಸ್ ಕಾಯ್ದೆಯಡಿ ಅಂತಹ ಯಾವುದೇ ಪರವಾನಿಗೆಯನ್ನು ನೀಡಿಲ್ಲ ಎಂದು ತಿಳಿಸಿದರು.

ಈ ಕುರಿತು ರಾಕೇಶ್ ಪಿ ಎಂಬುವರು 2021 ರಲ್ಲಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

TV9 Kannada


Leave a Reply

Your email address will not be published.