ಬೆಳಗಾವಿ: ಪಶ್ಚಿಮ ಘಟ್ಟ ಶ್ರೇಣಿಗಳು, ಮಹಾರಾಷ್ಟ್ರ ಗಡಿ ಪ್ರದೇಶ ಹಾಗೂ ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ 4-5 ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರ ಮುಂದುವರಿದಿದೆ. ಈ ನಡುವೆ ಉತ್ತರ ಕರ್ನಾಟಕ ಭಾಗದಲ್ಲಿ ನೆರೆಯ ಆತಂಕ ಎದುರಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗಳಲು ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಹೆಚ್ಚು ಮಳೆಯಾಗುತ್ತಿರುವ ಜಿಲ್ಲೆಗಳ ಡಿಸಿಗಳ‌ ಜೊತೆ ಸಿಎಂ ಇಂದು ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದು, ಮಳೆ ಹಾನಿ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.

ಇನ್ನು ಮಲೆನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಾದ ಹಿನ್ನೆಲೆ‌‌ ಮುನಿರಾಬಾದ್ ಜಲಾಶಯದಲ್ಲಿ ಒಳಹರಿವು ಹೆಚ್ಚಳವಾಗುತ್ತಿದೆ. ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ 1,633 ಅಡಿ ಇದ್ದು, ಇಂದಿನ ಮಟ್ಟ 1593.19 ಅಡಿ ಇದೆ. ಈ ಡ್ಯಾಂ ಒಟ್ಟು 100.86 ಟಿಎಂಸಿ ಸಾಮರ್ಥ್ಯ ಹೊಂದಿದೆ. ಇಂದು 21,169 ಕ್ಯುಸೆಕ್ ಒಳಹರಿವು ಹೆಚ್ಚಾಗಿದೆ. ಮಲೆನಾಡಿನಲ್ಲಿ ಮಳೆ‌ ಮುಂದುವರಿದರೆ ಈ ಬಾರಿಯೂ ಜಲಾಶಯ ತುಂಬಿ ಹರಿಯುವ ನಿರೀಕ್ಷೆ ಇದೆ.

ಇನ್ನು ವಾಣಿಜ್ಯ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಮಳೆ ಮುಂದುರಿದಿದ್ದು, ಇಂದು ಬೆಳಗ್ಗೆಯಿಂದ ಮತ್ತೆ ಮಳೆಯಾಗುತ್ತಿದೆ.  ವರುಣನ ಅಬ್ಬರದಿಂದ ವ್ಯಾಪಾರ ವಹಿವಾಟುಗಳಿಗೆ ಅಡ್ಡಿಯಾಗಿದ್ದು, ನಗರದ ಜನ ಜೀವನ ಅಸ್ತವ್ಯಸ್ಥವಾಗಿದೆ.

ನಿರಂತರ ಮಳೆಯಿಂದಾಗಿ ಅಲ್ನಾವರ ತಾಲೂಕಿನ ಕಂಬಾರಗಣವಿ ಬ್ರಿಡ್ಡ್ ಸಂಪೂರ್ಣ ಜಲಾವೃತವಾಗಿದೆ. 10ಕ್ಕೂ ಹೆಚ್ಚು ಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನೀರಿನಿಂದ ಆವೃತವಾಗಿರೋದ್ರಿಂದ ಬ್ರಿಡ್ಜ್​​ ದಾಟಲಾಗದೆ ಜನರು ಕಂಗಾಲಾಗಿದ್ದಾರೆ. ಬ್ರಿಡ್ಜ್ ಮೇಲೆ ಬಿದ್ದಿರುವ ಮರಗಳನ್ನ ತೆಗುಯುವ ಕಾರ್ಯಕ್ಕೆ ಸ್ಥಳೀಯರು ಮುಂದಾಗಿದ್ದಾರೆ.

The post ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಅಬ್ಬರ- ಡಿಸಿ ಗಳೊಂದಿಗೆ ಇಂದು ಸಿಎಂ ಸಭೆ appeared first on News First Kannada.

Source: newsfirstlive.com

Source link