ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರಲ್ಲಿ ಮ್ಯೂಕರ್ ಮೈಕೋಸಿಸ್/ಬ್ಲ್ಯಾಕ್ ಫಂಗಸ್ ಇನ್​ಫೆಕ್ಷನ್ ಕಾಣಿಸಿಕೊಳ್ತಿರೋದು ಆತಂಕ ಹೆಚ್ಚಿಸಿದೆ. ಈವರೆಗೆ ರಾಜ್ಯದಲ್ಲಿ 446 ಮಂದಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, 12 ಜನರು ಸಾವನ್ನಪ್ಪಿದ್ದಾರೆ.

ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ರೋಗವಲ್ಲ. ಅಂದ್ರೆ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಆಕ್ಸಿಜನ್ ಥೆರಪಿಗೂ ಸೋಂಕು ಹಬ್ಬಿರುವುದಕ್ಕೂ ಯಾವುದೇ ಖಚಿತ ಸಂಬಂಧವಿಲ್ಲ ಎನ್ನಲಾಗಿದೆ. ಶೇಕಡ 90 ರಿಂದ 95ರಷ್ಟು ಮ್ಯೂಕರ್ ಮೈಕೋಸಿಸ್ ರೋಗಿಗಳು ಮಧುಮೇಹ  ಅಥವಾ ಸ್ಟಿರಾಯ್ಡ್ ತೆಗೆದುಕೊಂಡವರಾಗಿದ್ದಾರೆ.

ರಾಜ್ಯದಲ್ಲಿ ಇದುವರೆಗೂ 446 ಜನರಲ್ಲಿ ಬ್ಲ್ಯಾಕ್ ಫಂಗಸ್​ ಕಾಣಿಸಿಕೊಂಡಿದೆ. ಇದರಲ್ಲಿ 433 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಲ್ಲಿತನಕ ಒಟ್ಟು 12 ಮಂದಿ ಮ್ಯೂಕರ್ ಮೈಕೋಸಿಸ್​​ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲೇ ಅತೀ ಹೆಚ್ಚು ಕೇಸ್​ ದಾಖಲಾಗಿರೋದು ಧಾರವಾಡದಲ್ಲಿ- 99 ಕೇಸ್‌ಗಳು. ಇನ್ನು ಬೆಂಗಳೂರಿನಲ್ಲಿ 86 ಕೇಸ್‌ಗಳು ಪತ್ತೆಯಾಗಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಎಷ್ಟು ಕೇಸ್​

ಬೆಂಗಳೂರು ಗ್ರಾಮಾಂತರ – 4
ಬೆಂಗಳೂರು ನಗರ – 17
ಬೊಮ್ಮನಹಳ್ಳಿ ಝೋನ್ – 28
ಈಸ್ಟ್ ಝೋನ್ – 5
ಸೌಥ್ ಝೋನ್ – 3
ವೆಸ್ಟ್ ಝೋನ್ – 3
ಯಲಹಂಕ ಝೋನ್ – 26

ತಡೆಗಟ್ಟಲು ಕ್ರಮವೇನು?

  • ಮಧುಮೇಹ ರೋಗಿಗಳು ಸೂಕ್ತ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಮುಖ್ಯ
  • ಅಂತಹ ರೋಗಿಗಳಲ್ಲಿ ಅವಕಾಶವಾದಿ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿರುತ್ತವೆ
  • ಆಕ್ಸಿಜನ್ ಸಾಂದ್ರಕಗಳನ್ನು ಬಳಸುವಂತಹವರು ನಿಯಮಿತವಾಗಿ ಹ್ಯುಮಿಡಿಫೈಯರ್​​​ಗಳನ್ನು ಆಗಾಗ್ಗೆ ಸ್ವಚ್ಛಪಡಿಸುವುದು.
  • ಈಗಾಗಲೇ ಇದಕ್ಕೆಂದೇ ಆರೋಗ್ಯ ಇಲಾಖೆ ಆಯಕ್ತ ಜಾವೇದ್ ಅಕ್ತರ್ ಗೈಡ್​​ಲೈನ್ಸ್​ ಬಿಡುಗಡೆ ಮಾಡಿದ್ದಾರೆ.

 

 

 

The post ರಾಜ್ಯದ 400ಕ್ಕೂ ಹೆಚ್ಚು ಜನರಲ್ಲಿ ಬ್ಲ್ಯಾಂಕ್ ಫಂಗಸ್; 12 ಮಂದಿ ಸಾವು appeared first on News First Kannada.

Source: newsfirstlive.com

Source link