ಕೊಲ್ಕತ್ತಾ: ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಜಗ್​ದೀಪ್ ಧನ್​ಕರ್ ಬಗ್ಗೆ ಕಟು ವಾಗ್ದಾಳಿ ನಡೆಸಿರುವ ತೃಣಮೂಲ ಕಾಂಗ್ರೆಸ್​​ನ ಸಂಸದ ಕಲ್ಯಾಣ್ ಬ್ಯಾನರ್ಜಿ.. ‘ರಾಜ್ಯಪಾಲ ಓರ್ವ ರಕ್ತ ಹೀರುವ ಮನುಷ್ಯ.. ಹುಚ್ಚುನಾಯಿಯಂತೆ ಸುತ್ತುತ್ತಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ.

ಸಿಬಿಐ ಇಲಾಖೆ ಪಶ್ಚಿಮ ಬಂಗಾಳದ ನಾರದಾ ಹಗರಣವನ್ನ ಕೈಗೆತ್ತಿಕೊಂಡಿದ್ದು ಇಂದು ಟಿಎಂಸಿಯ ನಾಲ್ವರು ಸಚಿವರನ್ನು ಬಂಧಿಸಿತ್ತು. ವಿಚಾರಣೆ ನಡೆಸಿದ ಸಿಬಿಐ ಕೋರ್ಟ್ ನಾಲ್ವರೂ ಸಚಿವರನ್ನು ಸದ್ಯ ಬಿಡುಗಡೆಗೊಳಿಸಿದೆ. ಆದ್ರೆ ಸಿಬಿಐ ಒಂದು ರಾಜ್ಯದೊಳಗೆ ಯಾರನ್ನಾದರೂ ಬಂಧಿಸಬೇಕಾದಲ್ಲಿ ರಾಜ್ಯ ಸರ್ಕಾರ ಅಥವಾ ರಾಜ್ಯಪಾಲರಿಂದ ಸಮ್ಮತಿ ಪಡೆಯಬೇಕು. ರಾಜ್ಯಪಾಲರೇ ಇದಕ್ಕೆ ಸಮ್ಮತಿ ನೀಡಿದ್ದಾರೆಂದು ಟಿಎಂಸಿ ಆರೋಪಿಸಿದೆ. ಈ ಹಿನ್ನೆಲೆ ಕಲ್ಯಾಣ್ ಬ್ಯಾನರ್ಜಿ ರಾಜ್ಯಪಾಲರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಲ್ಯಾಣ್ ಬ್ಯಾನರ್ಜಿ, ಟಿಎಂಸಿ ಸಂಸದ

ಮುಂದುವರೆದು ಹೇಳಿಕೆ ನೀಡಿರುವ ಕಲ್ಯಾಣ್ ಬ್ಯಾನರ್ಜಿ.. ನಾವು ಕೋರ್ಟ್​ ಮೊರೆ ಹೋಗುತ್ತೇವೆ. ಸುಪ್ರೀಂಕೋರ್ಟ್​ ಪೊಲೀಸರು ಕೋವಿಡ್ ಸಮಯದಲ್ಲಿ ಅನಾವಶ್ಯಕವಾಗಿ ಬಂಧಿಸಬಾರದು ಎಂದು ಹೇಳಿದೆ. ಹೀಗಿದ್ದೂ ಸಿಬಿಐ ಮತ್ತು ಪೊಲೀಸರು ನಮ್ಮ ಸದಸ್ಯರನ್ನ ಬಂಧಿಸಿದ್ದಾರೆ ಎಂದು ಗುಡುಗಿದ್ದಾರೆ.

ಇದನ್ನೂ ಓದಿ: ನಾರದಾ ಕೇಸ್​ನಲ್ಲಿ 4 ಸಚಿವರನ್ನ ಬಂಧಿಸಿದ ಸಿಬಿಐ: ಕಚೇರಿ ಎದುರು ಟಿಎಂಸಿ ಹೈಡ್ರಾಮಾ

ಇನ್ನು ಸಚಿವರ ಬಂಧನವಾಗುತ್ತಲೇ ಟಿಎಂಸಿ ಕಾರ್ಯಕರ್ತರು ಸಿಬಿಐ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಸಿಬಿಐ ಕಚೇರಿಯ ಮೇಲೆ ಕಲ್ಲು ತೂರಾಟವೂ ನಡೆದಿದೆ ಎನ್ನಲಾಗಿದೆ.

The post ರಾಜ್ಯಪಾಲ ಓರ್ವ ರಕ್ತ ಹೀರುವ ಮನುಷ್ಯ.. ಹುಚ್ಚುನಾಯಿಯಂತೆ ಸುತ್ತುತ್ತಿದ್ದಾರೆ- ಟಿಎಂಸಿ ಸಂಸದ appeared first on News First Kannada.

Source: newsfirstlive.com

Source link