ರಾಜ್ಯಸಭಾ ಸಂಸದರ ಅಮಾನತು: 12 ಸಂಸದರು ಕ್ಷಮೆಯಾಚಿಸಿದರೆ, ನಾವು ಪರಿಗಣಿಸಬಹುದು ಎಂದ ಸರ್ಕಾರ | Will consider revoking the suspension if the 12 MPs apologise says Parliamentary Affairs Minister Pralhad Joshi


ರಾಜ್ಯಸಭಾ ಸಂಸದರ ಅಮಾನತು: 12 ಸಂಸದರು ಕ್ಷಮೆಯಾಚಿಸಿದರೆ, ನಾವು ಪರಿಗಣಿಸಬಹುದು ಎಂದ ಸರ್ಕಾರ

ಪ್ರಹ್ಲಾದ್ ಜೋಶಿ

ದೆಹಲಿ: ಸಂಸತ್​​ನ ಮುಂಗಾರು ಅಧಿವೇಶನದ (Parliament’s monsoon session) ಕೊನೆಯ ದಿನವಾದ ಆಗಸ್ಟ್ 11ರಂದು ಅಶಿಸ್ತಿನ ವರ್ತನೆಗಾಗಿ 12 ಪ್ರತಿಪಕ್ಷ ಸಂಸದರನ್ನು ಸೋಮವಾರ ಅಮಾನತುಗೊಳಿಸಲಾಗಿದೆ. ಆದರೆ ಸಂಸದರು ಕ್ಷಮೆಯಾಚಿಸಿದರೆ ಅಮಾನತು ಹಿಂತೆಗೆದುಕೊಳ್ಳುವ ಬಗ್ಗೆ ಪರಿಗಣಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi)ಹೇಳಿದ್ದಾರೆ. ಈ ಅಧಿವೇಶನದಲ್ಲಿ ಸದನದಲ್ಲಿ ಹಲವು ಪ್ರಮುಖ ಮಸೂದೆಗಳನ್ನು ಪರಿಚಯಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಜೋಶಿ ಮಂಗಳವಾರ ಟ್ವೀಟ್ ಮಾಡಿದ್ದು ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಪ್ರತಿಪಕ್ಷಗಳಿಗೆ ಕರೆ ನೀಡಿದರು. ಸದನದ ಘನತೆ ಕಾಪಾಡುವ ಸಲುವಾಗಿ ಸರಕಾರವನ್ನು ಕಡ್ಡಾಯವಾಗಿ ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಇರಿಸಲು ಒತ್ತಾಯಿಸಲಾಯಿತು. ಆದರೆ ಈ 12 ಸಂಸದರು ತಮ್ಮ ಅನುಚಿತ ವರ್ತನೆಗಾಗಿ ಸ್ಪೀಕರ್ ಮತ್ತು ಸದನದಲ್ಲಿ ಕ್ಷಮೆಯಾಚಿಸಿದರೆ, ಅವರ ಪ್ರಸ್ತಾಪವನ್ನು ಮುಕ್ತ ಹೃದಯದಿಂದ ಧನಾತ್ಮಕವಾಗಿ ಪರಿಗಣಿಸಲು ಸರಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಸರ್ಕಾರ ಪ್ರತಿಯೊಂದು ವಿಷಯದ ಬಗ್ಗೆ ನಿಯಮಗಳ ಪ್ರಕಾರ ಚರ್ಚೆಗೆ ಸಿದ್ಧವಾಗಿದೆ ಮತ್ತು ಪ್ರತಿ ಪ್ರಶ್ನೆಗೆ ಉತ್ತರಿಸಲು ಸಿದ್ಧವಾಗಿದೆ. ನಾಳೆಯಿಂದ ಸದನದಲ್ಲಿ ಹಲವು ಮಹತ್ವದ ಮಸೂದೆಗಳನ್ನು ಮಂಡಿಸಲಾಗುವುದು. ಸದನದ ಕಾರ್ಯನಿರ್ವಹಣೆ ಮತ್ತು ಫಲಪ್ರದವಾಗಲು ಅವಕಾಶ ನೀಡುವಂತೆ, ಈ ಎಲ್ಲಾ ಮಸೂದೆಗಳ ಬಗ್ಗೆ ಆರೋಗ್ಯಕರ ಚರ್ಚೆ ನಡೆಸುವಂತೆ ಮತ್ತೊಮ್ಮೆ ಎಲ್ಲಾ ಪಕ್ಷಗಳಲ್ಲಿ ಮನವಿ ಮಾಡುತ್ತೇನೆ ಎಂದು ಜೋಶಿ ಹೇಳಿದ್ದಾರೆ.

ಸೋಮವಾರ(ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ), ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ 12 ರಾಜ್ಯಸಭಾ ಸಂಸದರನ್ನು ಆಗಸ್ಟ್‌ನಲ್ಲಿ ಅಶಿಸ್ತಿನ ವರ್ತನೆಗಾಗಿ ಇಡೀ ಅಧಿವೇಶನದಿಂದ ಅಮಾನತುಗೊಳಿಸಲಾಯಿತು . ಆಗ ಪೆಗಾಸಸ್ ಹಗರಣದ ಕುರಿತು ವಿರೋಧ ಪಕ್ಷದ ಸಂಸದರು ಮತ್ತು ಸರ್ಕಾರದ ನಡುವೆ ವಾಕ್ಸಮರ ನಡೆದಿತ್ತು.

ಇದನ್ನೂ ಓದಿ:  ಮುಂಗಾರು ಅಧಿವೇಶನದಲ್ಲಿ ಅಶಿಸ್ತು ತೋರಿದ್ದ ವಿಪಕ್ಷದ 12 ಸಂಸದರು ರಾಜ್ಯಸಭೆಯಿಂದ ಅಮಾನತು

TV9 Kannada


Leave a Reply

Your email address will not be published. Required fields are marked *