ರಾಜ್ಯಸಭೆ ಕದನ: ದ್ವಿತೀಯ ಪ್ರಾಶಸ್ತ್ಯದ ಅಭ್ಯರ್ಥಿ ಗೆಲುವಿನಲ್ಲಿ ದುಡ್ಡೇ ದೊಡ್ಡಪ್ಪ! ಸಮಾಜಸೇವೆಯ ಉದಾತ್ತ ಆಶಯ ಕೊನೆಗಪ್ಪ! -ಟಿವಿ 9 ಕನ್ನಡ ಡಿಜಿಟಲ್​ ಲೈವ್​ ಚರ್ಚೆ | Rajya Sabha biennial Elections Second priority votes up for sale in Karnataka issue to be discussed in TV 9 Kannada Digital LiveRajya Sabha Elections: ಸೂಕ್ಷ್ಮವಾಗಿ ಇದೀಗತಾನೆ ರಾಜ್ಯದ ಹಿರಿಯ ರಾಜಕಾರಣಿಯೊಬ್ಬರು ಅಂಕೋಲದಲ್ಲಿ ಹೇಳಿದ್ದಾರೆ. ಜೆಡಿ ಎಸ್​​ ನಿಂದ ಕಾಲ್ಕಿತ್ತು, ಬಿಜೆಪಿ ಹಾರಿರುವ ಬಸವರಾಜ್ ಹೊರಟ್ಟಿ ಅವರು ರಾಜ್ಯಸಭೆ ಚುನಾವಣೆಯಲ್ಲಿ ಮೂರನೆ ಅಭ್ಯರ್ಥಿ ವಿಚಾರವಾಗಿ ಮಾತನಾಡುತ್ತಾ ಯಾರಿಗೆ ದುಡ್ಡು ಜಾಸ್ತಿ ಇರುತ್ತೊ ಅವರು ಆರಿಸಿ ಬರ್ತಾರೆ ಎಂದು ಸಿಂಪಲ್ ಆಗಿ ಹೇಳಿದ್ದಾರೆ!

TV9kannada Web Team


| Edited By: sadhu srinath

May 31, 2022 | 3:32 PM
ರಾಜ್ಯಸಭೆಗೆ ದ್ವೈವಾರ್ಷಿಕ ಚುನಾವಣೆ (Rajya Sabha Elections) ನಡೆಯುತ್ತಿದೆ. ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಐದು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಚುನಾವಣೆ ಅನಿವಾರ್ಯವಾಗುವ ಲಕ್ಷಣ ಕಾಣುತ್ತಿದೆ. ಈಗಾಗಲೇ ಪ್ರಥಮ ಪ್ರಾಶಸ್ತ್ಯದ ಅಭ್ಯರ್ಥಿಗಳು ನಿಶ್ಚಿತವಾಗಿ ಗೆಲುವಿನತ್ತ ಮುಖ ಮಾಡಿದ್ದಾರೆ. ಆದರೆ ಈಗ ಉಳಿದಿರುವುದು ದ್ವಿತೀಯ ಪ್ರಾಶಸ್ತ್ಯದ ಮತಗಳದ್ದೇ ಲೆಕ್ಕಾಚಾರ. ಎರಡು ರಾಷ್ಟ್ರೀಯ ಪಕ್ಷಗಳು ಪ್ರಥಮ ಪ್ರಾಶಸ್ತ್ಯದ ಉಳಿಕೆ ಮತಗಳ ಆಧಾರದ ಮೇಲೆ ಗೆಲುವಿನ ಬಾಜಿ ಕಟ್ಟಿ ಕಣಕ್ಕೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಈ ಲೆಕ್ಕಾಚಾರದಲ್ಲಿ ಸೀನ್​ನಲ್ಲಿಯೇ ಇಲ್ಲದಿದ್ದರೂ ಪ್ರಬಲ ಪ್ರಾದೇಶಿಕ ಪಕ್ಷ ಅಭ್ಯರ್ಥಿಯನ್ನು ಕಣಕ್ಕೆ ಬಿಟ್ಟಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ಓಲೈಕೆಯಲ್ಲಿ ತೊಡಗಿದೆ. ಆದರೆ ಬಿಜೆಪಿ-ಕಾಂಗ್ರೆಸ್​ ರಾಷ್ಟ್ರೀಯ ಪಕ್ಷಗಳ ಚದುರಂಗದಾಟದಲ್ಲಿ ಅಸಲಿಗೆ ಅಡ್ಡ ಮತನವಾಗಿ ಕ್ರಾಸ್​ ಫೈರ್​ ಆಗುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ದ್ವಿತೀಯ ಪ್ರಾಶಸ್ತ್ಯದ ಅಭ್ಯರ್ಥಿ ಗೆಲುವಿನಲ್ಲಿ ದುಡ್ಡೇ ದೊಡ್ಡಪ್ಪನ ಪಾತ್ರ ಮುಖ್ಯವಾಗಲಿದೆ (Karnataka Politics).

ಇದನ್ನು ಸೂಕ್ಷ್ಮವಾಗಿ ಇದೀಗತಾನೆ ರಾಜ್ಯದ ಹಿರಿಯ ರಾಜಕಾರಣಿಯೊಬ್ಬರು ಅಂಕೋಲದಲ್ಲಿ ಹೇಳಿದ್ದಾರೆ. ಜೆಡಿ ಎಸ್​​ ನಿಂದ ಕಾಲ್ಕಿತ್ತು, ಬಿಜೆಪಿ ಹಾರಿರುವ ಬಸವರಾಜ್ ಹೊರಟ್ಟಿ ಅವರು ರಾಜ್ಯಸಭೆ ಚುನಾವಣೆಯಲ್ಲಿ ಮೂರನೆ ಅಭ್ಯರ್ಥಿ ವಿಚಾರವಾಗಿ ಮಾತನಾಡುತ್ತಾ ಯಾರಿಗೆ ದುಡ್ಡು ಜಾಸ್ತಿ ಇರುತ್ತೊ ಅವರು ಆರಿಸಿ ಬರ್ತಾರೆ ಎಂದು ಸಿಂಪಲ್ ಆಗಿ ಹೇಳಿದ್ದಾರೆ! ಅಲ್ಲಿಗೆ ಇಡೀ ಮತ ಮಾರಾಟ ಎಂಬುದು ನಿಶ್ಚಿತವಾಗಿದೆ. ಗಮನಿಸಿ. ಅಸಲಿಗೆ ಮೇಲ್ಮನೆಗೆ ಅದು ರಾಜ್ಯದ್ದೆ ಇರಬಹುದು ಸಂಸತ್ತಿನದ್ದೇ ಇರಬಹುದು ಈ ವರ್ಗವನ್ನು ಆಯ್ಕೆ ಮಾಡುವುದು ಎಕೆಂದರೆ ಅವರಿಗೆ ರಾಜಕೀಯವಾಗಿ ಗೆದ್ದು ಬರುವ ಛಾತಿಯಿಲ್ಲದೆ, ಆದರೆ ಜನೋಪಕಾರಿಯಾಗಿ ಏನಾದರೂ ಸೇವೆ ಮಾಡುವ ಮನಸ್ಥಿತಿಯ ಸಮಾಜದಲ್ಲಿ ಗುರುತಿಸಿಕೊಂಡವರನ್ನು ಇಲ್ಲಿಗೆ ಆಯ್ಕೆ ಮಾಡಬೇಕು, ಅವರಿಂದ ನಿಜಕ್ಕೂ ರಾಜಕೀಯವಾಗಿ, ಸಾಮಾಜಿಕವಾಗಿ ಉಪಯೋಗವಾಗಲಿ ಎಂಬುದು ಇದರ ಧ್ಯೇಯೋದ್ದೇಶವಾಗಿತ್ತು. ಆದರೆ ಇಲ್ಲಿ ಮತ ಖರೀದಿ ಎಂಬುದು ಪಿಕ್ಚರ್​​ಗೆ ಬಂದಾಗ ಸಮಾಜಸೇವೆಯ ಉದಾತ್ತ ಆಶಯಕ್ಕೆ ಎಳ್ಳುನೀರು ಬಿಟ್ಟಂತೆ ಅಷ್ಟೆ. ಇದಕ್ಕೆ ಯಾವ ರಾಜಕೀಯ ಪಕ್ಷವೂ ಅತೀತವಲ್ಲ ಎಂಬುದು ಖೇದಕರ ಸಂಗತಿ.

ಈ ಕುರಿತಾದ ಚರ್ಚೆಯನ್ನು ಆ್ಯಂಕರ್​ ಚಂದ್ರಮೋಹನ್​ ಇಂದಿನ ಡಿಜಿಟಲ್​ ಲೈವ್​ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Also Read:

iQOO Neo 6: ಭಾರತಕ್ಕೆ ಬಂದೇ ಬಿಡ್ತು ಐಕ್ಯೂ ನಿಯೋ 6 5G: ಇಷ್ಟು ಕಡಿಮೆ ಬೆಲೆಗೆ ಎಂಥಾ ಸ್ಮಾರ್ಟ್​​ಫೋನ್

Also Read:

ಪವನ್​​ ಕಲ್ಯಾಣ್​ ಜತೆ ಸಿನಿಮಾ ಮಾಡಲಿದ್ದಾರೆ ರಾಜಮೌಳಿ; ಸೆಟ್ಟೇರೋದು ಯಾವಾಗ?

TV9 Kannada


Leave a Reply

Your email address will not be published. Required fields are marked *