ತುಮಕೂರು: ಜಿಲ್ಲೆಯಲ್ಲಿ ಕೋವಿಡ್​ ಪ್ರಕರಣಗಳು ದಿನೇ ದಿನೇ ಅಧಿಕವಾಗುತ್ತಿದೆ. ಮತ್ತೆ ಸಾಂಕ್ರಾಮಿಕ ಹೆಚ್ಚಾಗುವ ಭೀತಿಯಿಂದ ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಸಿಂಗಾಪುರ ಗ್ರಾಮವನ್ನು ಜಿಲ್ಲಾಡಳಿತ ಸಂಪೂರ್ಣ ಸೀಲ್ ಡೌನ್ ಮಾಡಿದೆ.

ಒಟ್ಟು 900 ಜನಸಂಖ್ಯೆ ಇರುವ ಸಿಂಗಾಪುರ ಗ್ರಾಮದಲ್ಲಿ ಕಳೆದ ಒಂದು ವಾರದಲ್ಲಿ ಬರೊಬ್ಬರಿ 35 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ನಿನ್ನೆ ಒಂದೇ ದಿನ 18ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ, ಡಿಎಚ್ಒ ನಾಗೇಂದ್ರಪ್ಪ ಹಾಗೂ ಎಸ್​ಪಿ ರಾಹುಲ್ ಕುಮಾರ್ ಶಹಾಪುರ್‌ವಾಡ್ ಜೊತೆ ಸೇರಿ ಗ್ರಾಮಕ್ಕೆ ದೌಡಾಯಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಇಡೀ ಗ್ರಾಮವನ್ನ ಸೀಲ್​ಡೌನ್ ಮಾಡಲು ಆದೇಶಿಸಿದ್ದಾರೆ.

The post ರಾಜ್ಯಾದ್ಯಂತ ಅನ್​ಲಾಕ್.. ಆದ್ರೆ ತುಮಕೂರಿನ ಸಿಂಗಾಪುರ ಸೀಲ್​ಡೌನ್ appeared first on News First Kannada.

Source: newsfirstlive.com

Source link