ರಾಯಚೂರು: ಆಕ್ಸಿಜನ್ ಕೊರತೆ ಉಂಟಾಗದಂತೆ ತಡೆಯಲು ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೆ 30 ಕಾನ್ಸಂಟ್ರೇಟರ್​ ಮಷಿನ್​ಗಳನ್ನ ಖರೀದಿಸಿ ವಿತರಿಸುತ್ತಿದ್ದು, ಸದ್ಯ ಸಾರಿಗೆ ಇಲಾಖೆ ಇದಕ್ಕೊಂದು ಹೊಸ ಆಯಾಮ‌ ನೀಡುತ್ತಿದೆ.

ಸಾರಿಗೆ ಇಲಾಖೆಯಿಂದ ರಾಜ್ಯಾದ್ಯಂತ ಇನ್ಮುಂದೆ ಕೆಎಸ್​​ಆರ್​​ಟಿಸಿ ಬಸ್​ಗಳಲ್ಲಿ ನಾಲ್ಕೈದು ಕಾನ್ಸಂಟ್ರೇಟರ್ ಮೆಷಿನ್​ಗಳನ್ನು ಅಳವಡಿಸಿ, ಕೋವಿಡ್ ಸೆಂಟರ್​​ಗಳಲ್ಲಿ ನಿಲ್ಲಿಸಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ರಾಯಚೂರಲ್ಲಿ ಮಾತನಾಡಿದ ಅವರು, ಬೆಂಗಳೂರನಲ್ಲಿ ಬಿಎಂಟಿಸಿ ಬಸ್​​ಗಳ ಮೂಲಕ ಆಕ್ಸಿಜನ್ ಪೂರೈಸಲಾಗ್ತಿದೆ. ಇನ್ಮುಂದೆ ಪ್ರತಿಯೊಂದು ಜಿಲ್ಲೆಯ ಕೋವಿಡ್ ಕೇರ್ ಸೆಂಟರ್​​ನಲ್ಲೂ ಆಕ್ಸಿಜನ್ ಬಸ್ ಇರಲಿದೆ ಅಂತ ತಿಳಿಸಿದ್ದಾರೆ.

ಇನ್ನು ರಾಯಚೂರಿನ ಸುರಾನಾ ಸ್ಟೀಲ್ ಇಂಡಸ್ಟ್ರಿಯಲ್ಲಿ ಮತ್ತೆ ಆಕ್ಸಿಜನ್ ಉತ್ಪಾದನೆ ಆಗಬೇಕು. ಆಕ್ಸಿಜನ್ ಪ್ಲಾಂಟ್ ಪುನರಾರಂಭವಾದ್ರೆ ಪಕ್ಕದ ಜಿಲ್ಲೆಯವರಿಗೂ ಅನುಕೂಲವಾಗುತ್ತೆ. ದಿನಾಲು 50 ಕೆ.ಎಲ್ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಈ‌ ಪ್ಲಾಂಟ್ ಗೆ ಇದೆ. ಸಿಎಂ ತಂತ್ರಜ್ಞರನ್ನು ಕರೆದು ನಿಂತುಹೋದ ಪ್ಲಾಂಟ್ ಸರಿಪಡಿಸುವ ಕಾರ್ಯ ಆಗಬೇಕು ಎಂದು ಸಚಿವರು ನಿನ್ನೆ ಹೇಳಿದ್ರು.

The post ರಾಜ್ಯಾದ್ಯಂತ ಕೋವಿಡ್ ಕೇರ್ ಸೆಂಟರ್​ಗಳ ಬಳಿ ಆಕ್ಸಿಜನ್ ಬಸ್ -ಸಚಿವ ಸವದಿ appeared first on News First Kannada.

Source: newsfirstlive.com

Source link