ರಾಜ್ಯಾದ್ಯಂತ ಭರ್ಜರಿ ಓಪನಿಂಗ್​ ಪಡೆದ ಬಂಗಾರದ ಹುಡುಗನ ‘ಸಖತ್​‘


ಗೋಲ್ಡನ್​ ಸ್ಟಾರ್​ ಗಣೇಶ್​ ಅಭಿನಯದ ಬಹು ನಿರೀಕ್ಷಿತ ಚಿತ್ರ ”ಸಖತ್”​ ಸಿನಿಮಾ ಇಂದು ರಾಜ್ಯಾದ್ಯಂತ ಭರ್ಜರಿ ಬಿಡುಗಡೆ ಕಂಡಿದೆ. ”ಸಖತ್”​ ಸಿನಿಮಾ 2 ವರ್ಷಗಳ ನಂತರ ಬಿಡುಗಡೆ ಆಗುತ್ತಿರುವ ಗಣೇಶ್​ ಅವರ ಮೊದಲ ಸಿನಿಮಾ. ಹಾಗಾಗಿ ಅಭಿಮಾನಿಗಳಿಗೆ ಮಾತ್ರ ಅಲ್ಲ ಗಣೇಶ್​ ಗೂ ”ಸಖತ್”​ ಸಿನಿಮಾ ತುಂಬಾ ವಿಶೇಷವಾಗಿದೆ.

ಈಗಾಗಲೇ ಟೀಸರ್ ,ಸಾಂಗ್ಸ್ ಗಳಿಂದ ನೀರಿಕ್ಷೆಯನ್ನ ಮೂಡಿಸಿರುವ ”ಸಖತ್” ಸಿನಿಮಾ, ಜೊತೆಗೆ ಒಂದೊಳ್ಳೆ ಕಾಮಿಡಿ ಎಂಟರ್​ಟೈನ್ಮೆಂಟ್​ಗಾಗಿ ಕಾದಿದ್ದ ಕನ್ನಡ ಪ್ರೇಕ್ಷಕರಿಗಾಗಿ ಹೇಳಿ ಮಾಡಿಸಿದಂತಿದೆ. ಇಂದು ರಾಜ್ಯದ್ಯಂತ 300 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ‘ಸಖತ್’ ಸಿನಿಮಾ ರಿಲೀಸ್ ಆಗಿದ್ದು, ಬೆಂಗಳೂರಿನ ವಿರೇಶ್ ಥಿಯೇಟರ್ ಮುಂದೆ ಹಬ್ಬದ ವಾತಾವರಣ ನಿರ್ಮಾಣ ಆಗಿದೆ.
ಇನ್ನು ”ಸಖತ್”​ ಸಿನಿಮಾಗೆ ಸಿಂಪಲ್ ಸುನಿ ಆ್ಯಕ್ಷನ್​ ಕಟ್​ ಹೇಳಿದ್ದು, KVN ಪ್ರೊಡಕ್ಷನ್ಸ್ ಬ್ಯಾನರ್​ನಡಿ ಸಖತ್​ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗಿದೆ.

News First Live Kannada


Leave a Reply

Your email address will not be published. Required fields are marked *