ರಾಜ್ಯ ಉಪಚುನಾವಣೆ ಗೆಲ್ಲಲು ಬಿಜೆಪಿಯಲ್ಲಿ ಮೂರು ಟೀಮ್​​; ಯಾಱರ ನೇತೃತ್ವದಲ್ಲಿ ಗೊತ್ತೆ?

ಬೆಂಗಳೂರು: ರಾಜ್ಯದ ಹಾನಗಲ್​​ ಮತ್ತು ಸಿಂದಗಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಬಿಜೆಪಿ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಹಾನಗಲ್​​ನಿಂದ ಶಿವರಾಜ್ ಸಜ್ಜನರ್ ಮತ್ತು ಸಿಂದಗಿಯಿಂದ ರಮೇಶ್ ಭೂಸನೂರು ಕಣಕ್ಕಿಳಿಯಲಿದ್ದಾರೆ. ಹೀಗಿರುವಾಗಲೇ ಉಪಚುನಾವಣೆ ಪ್ರಚಾರಕ್ಕಾಗಿ ಬಿಜೆಪಿಯಲ್ಲಿ ಮೂರು ತಂಡಗಳು ರಚನೆಯಾಗಲಿದೆ ಎನ್ನುತ್ತಿವೆ ಮೂಲಗಳು.

ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ, ಸಿಎಂ ಬಸವರಾಜ್​​ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​​​ ಕುಮಾರ್​ ಕಟೀಲ್​​​​ ನೇತೃತ್ವದಲ್ಲಿ ಮೂರು ತಂಡಗಳು ರಚನೆಯಾಗಲಿದೆ. ಅಕ್ಟೋಬರ್​​​​ 13ನೇ ತಾರೀಕಿನಿಂದ ಸತತ 28 ರವರೆಗೂ ಪ್ರಚಾರ ಮಾಡಲಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಬಿ.ಎಸ್​ ಯಡಿಯೂರಪ್ಪ ಮಾರ್ಗದರ್ಶನ, ಬೊಮ್ಮಾಯಿ ಮತ್ತು ನಳಿನ್​​ ಕುಮಾರ್​ ಕಟೀಲ್​​ ನಾಯಕತ್ವ ಇರಲಿದೆ. 13ನೇ ತಾರೀಕಿನಿಂದ 28 ರವರೆಗೂ ಸಾಲುಸಾಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಈ ಉಪಚುನಾವಣೆ ಅಖಾಡಕ್ಕೆ ಮೂರು ಬಿಜೆಪಿ ತಂಡಗಳು ಎಂಟ್ರಿ ನೀಡಲಿದ್ದು, ಮಿನಿ ಕದನ ರಂಗೇರಲಿದೆ.

ಇದನ್ನೂ ಓದಿ: ಸಚಿವೆ ಜೊಲ್ಲೆ ಭ್ರಷ್ಟಾಚಾರ ಆರೋಪ ಕೇಸ್​ಗೆ ಟ್ವಿಸ್ಟ್ ; ತನಿಖೆ ಚುರುಕುಗೊಳಿಸಿದ ACB

News First Live Kannada

Leave a comment

Your email address will not be published. Required fields are marked *