ರಾಜ್ಯ ‘ಕೈ’ ನಾಯಕರಿಗೆ ಬಿಸಿ ತುಪ್ಪವಾದ ನಲಪಾಡ್.. ಮುಜುಗರ ತಪ್ಪಿಸಿಕೊಳ್ಳಲು ತೇಪೆ ಕಾರ್ಯ


ಬೆಂಗಳೂರು: ಯುವ ಕಾಂಗ್ರೆಸ್​​ ನಾಯಕರ ಗಲಾಟೆ ಪಕ್ಷಕ್ಕೆ ಭಾರೀ ಡ್ಯಾಮೇಜ್​ ಮಾಡುತ್ತಿದೆ. ಹಿರಿಯ ನಾಯಕರು ಪಾದಯಾತ್ರೆ, ಱಲಿ, ಅಂತ ಜನರ ಮನ ಗೆಲ್ಲಲು ಪ್ರಯತ್ನಿಸುತ್ತಿದ್ರೆ. ಇತ್ತ ಯುವ ನಾಯಕರ ಗಲಾಟೆ ಪಕ್ಷಕ್ಕೆ ಡ್ಯಾಮೇಜ್​ ಮಾಡುತ್ತಿದೆ. ಹಾಗೂ ನಾಯಕರ ಬಿಜೆಪಿ ಪಾಳಯಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

ಹೌದು.. ಮಹಮದ್ ಹ್ಯಾರಿಸ್​ ನಲಪಾಡ್ ಮತ್ತೆ ಸುದ್ದಿಯಾಗಿದ್ದಾರೆ. ಕಾಂಗ್ರೆಸ್​​ನ ಯುವ ನಾಯಕ ಸಿದ್ದು ಹಳ್ಳೇಗೌಡನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಆದ್ರೆ ನಲಪಾಡ್​ನ ಗಲಾಟೆಯ ರಾದ್ದಾಂತ ಇದೇ ಮೊದಲೇನಲ್ಲ. ಪಬ್​ನಲ್ಲಿ ಹುಡುಗನೋರ್ವನಿಗೆ ಈ ಹಿಂದೆ ಮಾರಣಾಂತಿಕವಾಗಿ ಹಲ್ಲೆ ಕೇಸ್​ನಿಂದಲೂ ಕೈ ಪಾಳಯ ಮುಜುಗರ ಅನುಭವಿಸಿತ್ತು. ಆದ್ರೆ ಇದೇ ನಲಪಾಡ್​ ಇದೀಗ ಮತ್ತೆ ಗಲಾಟೆ ಮಾಡಿಕೊಂಡು ಪಕ್ಷಕ್ಕೆ ತಲೆನೋವು ತಂದಿಟ್ಟಿದ್ದಾರೆ. ಯುವ ನಾಯಕರ ಗಲಾಟೆ ಕೇಸ್​ನಿಂದ ಕಾಂಗ್ರೆಸ್​ ಕೈ ಕೈ ಹಿಸುಕಿಕೊಳ್ಳುತ್ತಿದೆ. ಹಿರಿಯ ನಾಯಕರು ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾಗಿದ್ದಾರೆ.

‘ಡ್ಯಾಮೇಜ್ ಕಂಟ್ರೋಲ್’ ಕಸರತ್ತು..!
ಮಹಮ್ಮದ್​​​ ನಲಪಾಡ್ ಪ್ರಕರಣದಿಂದ ರಾಜ್ಯ ಕಾಂಗ್ರೆಸ್​ ಮುಜುಗರ ತಂದಿದೆ. ಕಾಂಗ್ರೆಸ್​ ನಾಯಕರು 2023ರ ಚುನಾವಣೆಗೆ, ಪಾದಯಾತ್ರೆ, ಪಕ್ಷ ಸಂಘಟನೆ ಮುಂದಾಗಿದ್ದರು. ಈ ಸಂದರ್ಭ ನಲಪಾಡ್ ಕೇಸ್​​​ ದೊಡ್ಡದಾದ್ರೆ, ಪಕ್ಷದ ಇಮೇಜ್​ಗೆ ಧಕ್ಕೆ ಯಾಗಲಿದೆ. ಹಾಗೂ ಚುನಾವಣೆ ಸಂದರ್ಭದಲ್ಲಿ ವಿರೋಧಿ ಪಕ್ಷಗಳಿಗೆ ಅಸ್ತ್ರವಾಗಲಿದೆ. ಈ ನಿಟ್ಟಿನಲ್ಲಿ ಪ್ರಕರಣ ದೊಡ್ಡದು ಮಾಡೋದು ಬೇಡ ಎಂಬ ನಿರ್ಧಾರಕ್ಕೆ ಕಾಂಗ್ರೆಸ್​ ನಾಯಕರು ಬಂದಿದ್ದಾರೆ. ಹೀಗಾಗಿ ಇಬ್ಬರಿಗೂ ಬುದ್ಧಿ ಹೇಳಿ ಪ್ರಕರಣ ಸುಖಾಂತ್ಯ ಮಾಡಲು ಕಾಂಗ್ರೆಸ್​ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.ಕಾಂಗ್ರೆಸ್​ನ ಯುವ ನಾಯಕನ ವರ್ತನೆ ರಾಜ್ಯ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಹೀಗಾಗಿ ಕೈ ನಾಯಕರು ವಿರುದ್ಧ ಟ್ವೀಟ್​ ಅಸ್ತ್ರ ಬಳಸಿ ಬಿಜೆಪಿ ವಾಗ್ದಾಳಿ ನಡೆಸಿದೆ.

 

ಮುಂದಿನ ಬಿಬಿಎಂಪಿ ಹಾಗೂ 2023ರ ಚುನಾವಣಾ ಅಖಾಡಕ್ಕೆ ಕೈ ಸಿದ್ಧತೆ ಮಾಡಿಕೊಳ್ಳುವಾಗಲೇ ಯುವ ನಾಯಕರ ಗಾಲಾಟೆ ಪಕ್ಷಕ್ಕೆ ಟೆನ್ಷನ್ ಮೇಲೆ ಟೆನ್ಷನ್ ಶುರುವಾಗಿದೆ.

ಕಾಂಗ್ರೆಸ್​​ಗೆ ಬಿಸಿ ತುಪ್ಪ!

  • ಚರ್ಚೆ 1 : ದೊಡ್ಡ ಮಟ್ಟದ ಮುಜುಗರದಿಂದ ಪಾರಾಗಲು ‘ಕೈ’ ನಾಯಕರ ಯತ್ನ
  • ಚರ್ಚೆ 2 : ನಿತ್ಯ ಇಂತಹ ಘಟನೆಗಳಿಂದ ಬಿಜೆಪಿ ವಿರುದ್ಧದ ಹೋರಾಟಕ್ಕೆ ಹಿನ್ನಡೆ
  • ಚರ್ಚೆ 3 : ಬಿಜೆಪಿ ಟ್ವಿಟ್ಟರ್​​​​​​ನಲ್ಲಿ ಗುಂಡಾಗಿರಿ ಪದ ಬಳಸಿ ‘ಕೈ’ ಪಡೆಗೆ ಟಾಂಗ್
  • ಚರ್ಚೆ 4 : ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಏರುವ ನಲಪಾಡ್ ಆಸೆಗೆ ಹಿನ್ನಡೆ
  • ಚರ್ಚೆ 5 : ನಲಪಾಡ್ ವಿಚಾರವಾಗಿ ನಾಯಕರಲ್ಲಿ ಗೊಂದಲ ಮೂಡುವ ಸಾಧ್ಯತೆ
  • ಚರ್ಚೆ 6 : ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗಲಿದೆ ನಲಪಾಡ್ ವಿಚಾರ

ಯುವನಾಯಕನ ಗಲಾಟೆ ಪಕ್ಷಕ್ಕೆ ಡ್ಯಾಮೇಜ್​ ಆಗೋದಂತೂ ನಿಜ. ಇದನ್ನ ತಡೆಯಲು ನಾಯಕರು ಮುಂದಾಗಿದ್ದಾರೆ. ಬಿಬಿಎಂಪಿ ಚುನಾವಣೆ ಸೇರಿದ್ದಂತೆ 2023ರ ಚುವಾವಣೆ ಸಿದ್ಧತೆಗೆ ಮಾಡಿಕೊಳ್ಳುತ್ತಿರುವಾಗಲೇ ಎದುರಾಳಿ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಡ್ಯಾಮೇಜ್​ ಕಂಟ್ರೋಲ್​ಗೆ ಏನ್​ ನಿರ್ಣಯ ಕೈ ಗೊಳ್ಳುತ್ತೆ ಕಾದು ನೋಡಬೇಕಿದೆ.

News First Live Kannada


Leave a Reply

Your email address will not be published. Required fields are marked *